ಪೌಷ್ಟಿಕ ಆಹಾರ ಮಾಸ ಕಾರ್ಯಕ್ರಮ

ಮಂಗಳೂರು, ಸೆ.೧೭- ಕರ್ನಾಟಕ ಸರ್ಕಾರ ಆಯುμï ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಬಜ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯತಿ ಇವರ ಜಂಟಿ ಆಶ್ರಯದಲ್ಲಿ ಪೌಷ್ಟಿಕ ಆಹಾರ ಮಾಸವನ್ನು ಕಾರ್ಯಕ್ರಮ ತಾರಿಕಮ್ಲ ಅಂಗನವಾಡಿ ಕೇಂದ್ರ ಬಜ್ಪೆ ಇಲ್ಲಿ ಆಯೋಜಿಸಲಾಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ತಾರಿಕಂಬ್ಲ್ಲ ಅಂಗನವಾಡಿ ಕೇಂದ್ರದ ಸಿರಾಜ್ ಅಹಮದ್ ಉದ್ಘಾಟನೆ ಮಾಡಿದರು, ಸಂಪನ್ಮೂಲ ವ್ಯಕ್ತಿಯಾಗಿ ಬಳ್ಕುಂಜೆ ಸರಕಾರಿ ಆಯುರ್ವೇದ ಚಿಕಿತ್ಸಾಲಯ ವೈದ್ಯಾಧಿಕಾರಿ ಡಾಕ್ಟರ್ ಶೋಭಾರಾಣಿ , ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಚೇತನ್ ಆಗಮಿಸಿದ್ದರು. ಅಂಗನವಾಡಿ ಮೇಲ್ವಿಚಾರಕಿ ನಾಗರತ್ನ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಪೌಷ್ಟಿಕ ಆಹಾರವನ್ನು ಮಾಡಿ ಪ್ರದರ್ಶಿಸಲಾಯಿತು
ಪೌಷ್ಟಿಕ ಆಹಾರ ಆರೋಗ್ಯದಲ್ಲಿ ಎಷ್ಟು ಪ್ರಾಮುಖ್ಯತೆ ವಹಿಸುತ್ತದೆ . ದಿನನಿತ್ಯದಲ್ಲಿ ನಾವೆಲ್ಲ ಯಾವ ರೀತಿಯ ಆಹಾರ ಪದಾರ್ಥಗಳನ್ನು ಬಳಸಬೇಕು ಮಹಿಳೆಯರ ಸಾಮಾನ್ಯ ಕಾಯಿಲೆಗಳು ಮತ್ತು ಪರಿಹಾರೋಪಾಯಗಳು, ಯೋಗಾಸನದ ಮಹತ್ವ, ಪ್ರಕೃತಿ ಚಿಕಿತ್ಸೆಯ ಬಗ್ಗೆ ವಿವರವಾದ ಮಾಹಿತಿಯನ್ನು ಡಾಕ್ಟರ್ ಶೋಭಾರಾಣಿ ಎನ್ ಎಸ್ ಕಾರ್ಯಕ್ರಮದಲ್ಲಿ ನೀಡಿದರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಕೋವಿಡ್ ಮುಂಜಾಗ್ರತೆ ಕ್ರಮಗಳನ್ನು ವಿವರಿಸಿದರು.