ಪೌಷ್ಟಿಕ ಆಹಾರದ ಸೇವನೆ, ಸ್ವಚ್ಛತೆ ಬಗ್ಗೆ ಅರಿವು

ಸಿರವಾರ.ಸೆ೨೫-ಪಟ್ಟಣದ ಪಿಡಬ್ಲ್ಯೂಡಿ ಕ್ಯಾಂಪಿನ ಅಂಗನವಾಡಿ ಕೇಂದ್ರದಲ್ಲಿ ಪೋಷಣಾ ಅಭಿಯಾನ ಅಂಗವಾಗಿ ಕಿಶೋರಿಯರಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಪೌಷ್ಟಿಕ ಆಹಾರ ಸೇವನೆ ಹಾಗೂ ಸ್ವಚ್ಛತೆಯ ಬಗ್ಗೆ ಜಾಥ ಮೂಲಕ ಅರಿವು ಮೂಡಿಸಲಾಯಿತು.
ಗರ್ಭಿಣಿ ಮತ್ತು ಬಾಣಂತಿಯರು ಮೊಟ್ಟೆ ತರಕಾರಿ ದ್ವಿದಳ ದಾನ್ಯ ಸೇವಿಸುದರಿಂದ ಪ್ರೋಟೀನ್ ಕ್ಯಾಲ್ಸಿಯಂ ಲಭ್ಯವಾಗುತ್ತದೆ. ಹೆರಿಗೆ ಸಮಯದಲ್ಲಿ ತಾಯಂದಿರು ಹಾಗೂ ಶಿಶು ಮರಣ ತಡೆಗಟ್ಟಬಹುದು. ರಕ್ತಹೀನತೆ ಹಾಗೂ ಕಡಿಮೆ ತೂಕದ ಶಿಶುಗಳ ಜನನ ನಿಯಂತ್ರಣ ಮಾಡಬಹುದು, ಕಿಶೋರಾವಸ್ಥೆ ಪ್ರೌಢವಸ್ಥೆ ಬಂದಾಗ ದೇಹದಲ್ಲಿ ಬದಲಾವಣೆ ಆಗುವುದು.
ಸಹಜ ಆಗ ಮಕ್ಕಳ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಪಾಲಕರು ಕಾಳಜಿ ವಹಿಸಬೇಕಾಗುತ್ತದೆ ಆ ಸಮಯದಲ್ಲಿ ಅವರ ದೇಹದಲ್ಲಿ ಬದಲಾವಣೆಯಾಗುವುದರಿಂದ ಗಾಬರಿಯಾಗುತ್ತಾರೆ ನಾವು ಅವರಿಗೆ ತಿಳಿ ಹೇಳಬೇಕು, ಸುಚಿತ್ವದ ಬಗ್ಗೆ ತಿಳಿಸಬೇಕು ಮತ್ತು ಪೌಷ್ಟಿಕ ಆಹಾರ ಸೇವನೆಯಿಂದ ಆಗುವ ಲಾಭಗಳನ್ನು ತಿಳಿಸಿದರು, ಪ್ರತಿಯೊಬ್ಬರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಪರಿಸರ ಸ್ವಚ್ಛ ಇಡುವುದರಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಅಂಗನವಾಡಿ ಕಾರ್ಯಕರ್ತೆ ಸುಧಾ ಹೇಳಿದರು.
ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮಿ ಮಾತನಾಡಿ ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ಕಾಪಾಡಲು ಸಾಧ್ಯ, ಕಿಶೋರಿಯರು ಗರ್ಭಿಣಿಯರು ಬಾಣಂತಿಯರಿಗೆ ಪೌಷ್ಟಿಕ ಆಹಾರ ಅತ್ಯಗತ್ಯ ಇರುತ್ತದೆ ಅದರಿಂದ ದ್ವಿದಾಳ ದಾನ್ಯಗಳು, ಮೊಳಕೆ ಭರಿಸಿದ ಕಾಳು, ತರಕಾರಿ, ಮೊಟ್ಟೆ ಹಾಗೂ ಹಣ್ಣುಗಳ ನಿಯಮಿತ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಮತ್ತು ನಮ್ಮ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಇಡುವುದರಿಂದ ಡೆಂಗ್ಯೂ , ಮಲೇರಿಯಾ ಅಂತಹ ರೋಗಗಳಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.
ಮುಖ್ಯಶಿಕ್ಷಕ ಮಲ್ಲಪ್ಪ ಚಾಗಭಾವಿ, ಶಿಕ್ಷಕಿಯರಾದ ರೇಣುಕಾ, ದೀಪಿಕಾ, ಕವಿತಾ, ಶಂಷಾದ ಬೇಗಂ, ಅಂಗನವಾಡಿ ಕಾರ್ಯಕರ್ತೆ ಯಂಕಮ್ಮ, ಅಂಗನವಾಡಿ ಸಹಾಯಕಿರು ನಿಂಗಮ್ಮ, ಸಾಬಮ್ಮ, ಮಕ್ಕಳು ಗರ್ಭಿಣಿಯರು ತಾಯಂದಿರು ಇನ್ನಿತರರು ಇದ್ದರು.