ಪೌಷ್ಟಿಕಾಂಶ ಸೇವನೆಯಿಂದ ಉತ್ತಮ ಆರೋಗ್ಯ

ಕಮಲನಗರ :ಸೆ.26:ತಾಲ್ಲೂಕಿನ ಮುಧೋಳ(ಬಿ) ಗ್ರಾಮದಲ್ಲಿ ಸೋಮವಾರ ಸಂತಪುರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ರಿಲಿಯನ್ಸ ಫೌಂಡೆಶನ ಬೀದರ, ಔಟರೀಚ ಸಂಸ್ಥೆ ಸಹಯೋಗದಲ್ಲಿ ರಾಷ್ಟ್ರೀಯ ಪೆÇೀಷಣ ಅಭಿಯಾನ ಕಾರ್ಯಕ್ರಮ ಜರುಗಿತು.

ಮುಧೋಳ (ಬಿ) ಗ್ರಾ.ಪಂ ಅಧ್ಯಕ್ಷ ತುಳಸಿರಾಮ ರಾಠೋಡ ಅವರು ಜ್ಯೋತಿ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ದಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದತ್ತಾತ್ರಿ ಪೂಜಾರಿ ಅವರು ಮಾತನಾಡಿ, ಸರ್ಕಾರ ಗರ್ಭಿಣಿಯರ ದೈಹಿಕ ಆರೋಗ್ಯದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸುತ್ತಿದ್ದು, ಮಾನಸಿಕ ಆರೋಗ್ಯದ ಕಡೆಗೂ ಅತಿ ಹೆಚ್ಚಿನ ಗಮನ ಕೆuಟಿಜeಜಿiಟಿeಜಡಬೇಕಿದೆ, ಪೆÇೀಷಣೆ ಅಭಿಯಾನದ ಅಡಿಯಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ರಾಷ್ಟ್ರೀಯ ಪೆÇೀಷಣ ಮಾಹೆಯನ್ನು ಆಚರಿಸಲಾಗುತ್ತದೆ, ಆರೈಕೆ, ಸೂಕ್ತ ಸ್ತನ್ಯಪಾನ, ರಕ್ತಹೀನತೆ, ಬೆಳವಣಿಗೆಯ ಮೇಲ್ವಿಚಾರಣೆ, ಬಾಲಕಿಯರ ಶಿಕ್ಷಣ, ಆಹಾರ, ಮದುವೆಯ ಸರಿಯಾದ ವಯಸ್ಸು, ನೈರ್ಮಲ್ಯ ಮತ್ತು ಆರೋಗ್ಯಕರ ಆಹಾರದ (ಆಹಾರ ಬಲವರ್ಧನೆ) ಮೇಲೆ ಮೋದಲು ನಾವು ಗಮನ ಹರಿಸಬೇಕು ಎಂದು ತಿಳಸಿದ್ದರು

ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಮಾಳೆ ಅವರು ಮಾತನಾಡಿ, ಗರ್ಭಿಣಿಯರು ಧನಾತ್ಮಕವಾಗಿ, ಉತ್ತಮ ಆಲೋಚನೆ ಹೊಂದಬೇಕು. ಶಾಂತತೆಯಿಂದ ಧ್ಯಾನ, ಶ್ಲೋಕಗಳನ್ನು ಹೇಳಿ???ಂಡಲ್ಲಿ ಜನಿಸುವ ಮಗುವಿನ ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ತಾಯಿಯ ಮನಸ್ಸು ಚಿಂತೆ, ದುಗುಡ, ದುಃಖ, ಹಿಂಸೆಯಿಂದ ಕೂಡಿದ್ದರೆ ಮಗುವಿನ ಮನಸ್ಥಿತಿಯೂ ಹಾಗೇ ಇರುತ್ತದೆ. ಆದ್ದರಿಂದ ಗರ್ಭಾವಸ್ಥೆಯಲ್ಲಿರುವಾಗ ತಾಯಂದಿರ ವಿಚಾರಧಾರೆ ಉತ್ತಮವಾಗಿರಬೇಕು ಎಂದು ಸಲಹೆ ನೀಡಿದರು.

ಪೆÇೀಷಕಾಂಶಗಳಿರುವ, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ ಇರುವ, ಧಾನ್ಯಗಳು, ಸಿರಿಧಾನ್ಯಗಳು, ಸೊಪ್ಪು-ತರಕಾರಿ, ಹಣ್ಣು, ಹಾಲು, ಮೊಸರು, ಮಜ್ಜಿಗೆ, ನುಗ್ಗೆಕಾಯಿ, ಬಟಾಣಿ ಸೇವಿಸುವುದರಿಂದ ಎಲ್ಲ ಪೆÇೀಷಕಾಂಶಗಳು ಲಭಿಸುತ್ತದೆ. ಪ್ರಸ್ತುತ ಸಮಯದಲ್ಲಿ ಪತಿಯ ಮೇಲೆಯೇ ಗರ್ಭಿಣಿ ಪತ್ನಿ ನೋಡಿಕೆuಟಿಜeಜಿiಟಿeಜಳ್ಳುವ ಜವಾಬ್ದಾರಿ ಇದೆ. ಗರ್ಭಿಣಿಯರನ್ನು ಕಾಳಜಿ ಮಾಡುವ ಅವರ ಮನೆಯವರನ್ನು ಕರೆದು ಈ ಕಾರ್ಯಕ್ರಮ ನಡೆಸಿಕೆuಟಿಜeಜಿiಟಿeಜಟ್ಟರೆ ಉತ್ತಮ. ಆ ನಿಟ್ಟಿನಲ್ಲಿ ಗರ್ಭಿಣಿಯರ ಪತಿ ಹಾಗೂ ಅವರ ಮನೆಯವರನ್ನು ಕಾರ್ಯಕ್ರಮಕ್ಕೆ ಕರೆದು, ಗರ್ಭಿಣಿ ಮತ್ತು ಶಿಶು ಆರೈಕೆ ಬಗ್ಗೆ ತಿಳಿವಳಿಕೆ ನೀಡಬೇಕಿದೆ ಎಂದು ಹೇಳಿದರು.

ಸೂರ್ಯಕಾಂತ್ ಶಿಂದೆ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರು ಮಾತನಾಡುತ್ತಾ, ಶ್ರೀಮಂತರು ಬಡವರು ಎನ್ನದೆ ಉತ್ತಮ ಪೌಷ್ಟಿಕ ಆಹಾರವನ್ನು ಎಲ್ಲರು ಪೌಷ್ಟಿಕ ಆಹಾರ ಸೇವಿಸ ಬೇಕು, ಪ್ರತಿಯೊಬ್ಬರಿಗೂ ಪೌಷ್ಟಿಕ ಆಹಾರ ಸಿಗಬೇಕೆಂದು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ, ಅವುಗಳನ್ನು ಮಹಿಳಾಮತ್ತು ಮಕ್ಕಳ ಇಲಾಖೆ ಅಂಗನವಾಡಿ ಕೇಂದ್ರದಮೂಲಕ ಪ್ರಾಮಾಣಿಕವಾಗಿ ಪೌಷ್ಟಿಕ ಆಹಾರದ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಚೊಚ್ಚಲ ಗರ್ಭಿಣಿಯರಿಗೆ ಉಡಿ ತುಂಬುವ ಹಾಗೂ ಆರು ತಿಂಗಳ ನಂತರ ಮಕ್ಕಳಿಗೆ ಅನ್ನ ಪ್ರಾಶನ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಗಜಾನಂದ ವಟಗೆ, ಗ್ರಾ.ಪಂ ಸದಸ್ಯರಾದ, ಧನರಾಜ ಬುಡ್ಡಾ, ಪ್ರವೀಣ ಸೂರ್ಯವಂಶಿ, ರಾಜಕುಮಾರ ಡಬ್ಬಿ, ರಿಲಯನ್ಸ್ ಫೌಂಡೇಶನನ ಸಂತೋಷ ಚ್ಯಾಂಡೆಸುರೆ, ಔಟರೀಚ ಸಂಸ್ಥೆ ಶೋಭಾವತಿ, ವಿಜಯಲಕ್ಷ್ಮಿ ಮೇಲ್ವಿಚಾರಕಿ, ಪದ್ಮಾವತಿ ಸ್ವಾಮಿ, ಜಗನ್ನಾಥ ಬಿಚಕುಂದೆ, ಶಿಲ್ಪಾ, ಜೈಶೀಲಾ, ಶ್ರಿಷೈಲ್ಯಾ ಎಮ.ಬಿ.ಕೆ, ವನೀತಾ, ದಾಕ್ಷಾಯಿಣಿ, ಶಿಲ್ಪಾ, ಮೇಗಾ, ಮನೋಹರ, ಬಿ.ಚೆಂದ್ರಕಲಾ, ನಿರ್ಮಲಾ, ಪಲ್ಲವಿ, ಮೀರಾ, ಭಾಗ್ಯ, ಚೆಂಪ್ಪಾಬಾಯಿ, ದೆವಮ್ಮಾ, ಗ್ರಾಮಸ್ಥರು ಹಾಗೂ ಅಂಗನವಾಡಿ ಸಹಾಯಕಿಯರು ಉಪಸ್ಥಿತರಿದ್ದರು.