ಪೌಷ್ಟಿಕಾಂಶ ಭರಿತ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿ

ಮಂಗಳೂರು, ಮಾ.೨೫- ಒಬ್ಬ ವ್ಯಕ್ತಿ ಆರೋಗ್ಯವಂತನಾಗಬೇಕಾದರೆ ಪೌಷ್ಟಿಕಾಂಶ ಇರುವಂತಹ ಆಹಾರ ಸೇವನೆ ಮಾಡಬೇಕು ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ್ ಕತ್ತಲ್‌ಸಾರ್ ಹೇಳಿದರು.
ಅವರು ಇಂದು ತುಳು ಭವನದಲ್ಲಿ ನಡೆದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಯು? ಇಲಾಖೆ, ದಕ್ಷಿಣ ಕನ್ನಡ ತುಳು ಸಾಹಿತ್ಯ ಅಕಾಡೆಮಿ ಇವರ ಸಹಯೋಗದಲ್ಲಿ ನಡೆದ ಪೊ?ಷನ್ ಪಕ್ವಾಡ ಯೋಗಾಸನ ಶಿಬಿರ ಹಾಗೂ ಪೌಷ್ಠಿಕತೆ ಹೆಚ್ಚಿಸುವ ಆಯು? ಪುಡಿ, ಔಷದ, ಬೀಜಗಳ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೈಹಿಕ ಆರೋಗ್ಯಕ್ಕೆ ಅಗತ್ಯವಿರುವ ಆಹಾರ ಸೇವಿಸುವುದರ ಜೊತೆಗೆ ಯೋಗಾಸನಗಳನ್ನು ಮಾಡುವ ಮೂಲಕ ಆರೋಗ್ಯದ ರಕ್ಷಣೆ ಮಾಡಬೇಕಾಗಿದೆ ಎಂದ ಅವರು ಯೋಗ ಶಿಬಿರಗಳನ್ನು ಆಯೋಜಿಸುವುದರಿಂದ ಜನರು ಆರೋಗ್ಯಕರ ಮತ್ತು ಉದ್ವೇಗ ಮುಕ್ತ ಸಮಾಜದತ್ತ ಸಾಗಲು ಸಹಾಯ ಮಾಡುತ್ತದೆ ಎಂದರು.
ನಂತರ ಮಾತನಾಡಿದ ಅವರು ನಾವು ದಿನಕ್ಕೆ ಒಂದು ಗಂಟೆ ಯೋಗವನ್ನು ಅಭ್ಯಾಸ ಮಾಡಿದರೆ, ಅದು ಮುಂದಿನ ೨೩ ಗಂಟೆಗಳ ಕಾಲ ನಮ್ಮ ದೇಹದ ಬಗ್ಗೆ ಕಾಳಜಿ ವಹಿಸುತ್ತದೆ ಎಂದರು. ಪುರುಷರಿಗೆ ಹೋಲಿಸಿದರೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಮಹಿಳೆಯರು ಅತಿ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾರೆ ಹಾಗಾಗಿ ದಿನನಿತ್ಯದ ಕೆಲಸಗಳ ಜೊತೆಗೆ ಯೋಗಾಭ್ಯಾಸವನ್ನು ರೂಢಿ ಮಾಡಿಕೊಳ್ಳಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ನಗರೀಕರಣಕ್ಕಾಗಿ ಪ್ರಕೃತಿಯ ನಾಶವಾಗುತ್ತಿದೆ ಇದರಿಂದ ಶುದ್ಧ ಗಾಳಿಯ ಕೊರತೆಯಾಗಿದೆ ಅದಲ್ಲದೇ ಆರೋಗ್ಯದ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತಿದೆ ಎಂದ ಅವರು ವೃಕ್ಷಗಳು ಉಳಿದರೆ ಬದುಕು ಸದೃಢವಾಗುವುದು ಎಂದರು.
ಗರ್ಭಧಾರಣೆ ಮತ್ತು ಮಾತೃತ್ವದ ಅವಧಿಯಲ್ಲಿ ಮಹಿಳೆಯರು ವಿವಿಧ ದೈಹಿಕ ಬದಲಾವಣೆಗಳನ್ನು ಎದುರಿಸುತ್ತಾರೆ ಹಾಗಾಗಿ ಈ ಕಷ್ಟದಿಂದ ಹೊರಬರಲು ಮಹಿಳೆಯರು ಯೋಗವನ್ನು ಅತ್ಯವಶ್ಯಕವಾಗಿ ಮಾಡಬೇಕಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಆಯು? ಇಲಾಖೆಯ ವೈದ್ಯಾಧಿಕಾರಿಗಳಾದ ಸಹನಾ ಮತ್ತು ಶೋಭಾರಾಣಿ, ಪತಂಜಲಿ ಯೋಗ ಪೀಠ ಹರಿದ್ವಾರದ ಯೋಗ ಶಿಕ್ಷಕಿ ಸರಸ್ವತಿ.ಪಿ, ಯೋಗ ಶಿಕ್ಷಕರುಗಳಾದ ಸರೋಜಿನಿ,ಗೋವಿಂದ,ಮೀನಾಕ್ಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾಧಿಕಾರಿ ಶ್ಯಾಮಲ ಹಾಗೂ ಮತ್ತಿತರರು ಉಪಸ್ಥಿತರಿದ್ದರು.