ಪೌಷ್ಟಕಾಂಶದ ಅರಿವು ಅಗತ್ಯ


ಬಾದಾಮಿ,ಸೆ 25: ಇಂದಿನ ದಿನಗಳಲ್ಲಿ ಆರೋಗ್ಯವೇ ಭಾಗ್ಯ ವಾಗಿದೆ ವಿದ್ಯಾರ್ಥಿಗಳಿಗೆ ಪೆÇೀಷ್ಟಕ ಆಹಾರದ ಮಹತ್ವ ತಿಳಿಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ರಾಷ್ಟ್ರೀಯ ಪೆÇೀಷಣೆ ಅಭಿಯಾನ ನಡೆಸಿ ವಿದ್ಯಾರ್ಥಿಗಳಿಗೆ ಮತ್ತು ತಾಯಂದಿರಿಗೆ ಮಾಹಿತಿ ನೀಡುತ್ತಿರುವುದು ಅತಿ ಅಗತ್ಯದ ಸಂಗತಿಯಾಗಿದೆ ಎಂದು ಜಿಲ್ಲಾ ಅಕ್ಷರದಾಸೋಹ ಶಿಕ್ಷಣಾಧಿಕಾರಿ ಎನ್.ವೈ.ಕುಂದರಗಿ ತಿಳಿಸಿದರು.
ಅವರು ಶುಕ್ರವಾರ ತಾಲೂಕಿನ ನೀರಬೂದಿಹಾಳ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೆÇೀಷಣ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಉತ್ತಮ ಆಹಾರ ಪದ್ಧತಿಯಿಂದ ಸದೃಢ ಸಮಾಜ ನಿರ್ಮಾಣ ವಾಗಲಿದೆ ಆದ್ದರಿಂದ ಪ್ರತಿಯೊಬ್ಬರಲ್ಲಿ ಆಹಾರದ ಜಾಗೃತಿ ಅಗತ್ಯ ಎಂದು ಹೇಳಿದರು.
ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ(ಗುಣಮಟ್ಟ) ಜಾಸ್ಮಿನ್ ಕಿಲ್ಲೆದಾರ್ ಪೋಷಣ ಅಭಿಯಾನದ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ ಆಹಾರ ಪದ್ಧತಿಯ ಅರಿವು ತಾಯಂದಿರಿಗೆ ಅತಿಮುಖ್ಯ. ಋತುಮಾನಕ್ಕನುಗುಣವಾಗಿ ಆಹಾರ ಸೇವನೆ ಮಾಡುವುದು ಅಗತ್ಯ ಎಂದು ಹೇಳಿದರು.
ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಆರ್.ಎಸ್.ಆದಾಪೂರ ಮಾತನಾಡಿ ಸರಕಾರ ನೀಡುವ ಮಧ್ಯಾಹ್ನದ ಬಿಸಿಯೂಟದ ಆಹಾರಧಾನ್ಯಗಳು, ಕೆನೆಭರಿತ ಹಾಲಿನ ಪುಡಿ ಸಹಿತ ಉತ್ತಮ ಪೆÇೀಷ್ಟಕಾಂಶ ಹೊಂದಿರುತ್ತವೆ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಪ್ರಾಚಾರ್ಯ ಎನ್.ಸಿ.ಹೂಲಿಗೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪ ಪ್ರಾಚಾರ್ಯ ನಾಗರಾಜ ದೇಶಪಾಂಡೆ, ಗ್ರಾಮ ಪಂಚಾಯಿತಿ ಹಿರಿಯ ಸದಸ್ಯ ಆನಂದರಾವ್ ದೇಸಾಯಿ, ಎಸ್.ಡಿ.ಎಂ.ಸಿ. ಸದಸ್ಯ ಆರ್.ಹೆಚ್.ಶಿರೂರ, ಕಾಲೇಜು ಎಸ್.ಡಿ.ಎಂಸಿ. ಅಧ್ಯಕ್ಷ ಆರ್.ಜಿ.ಗೋರಯನವರ, ಮುಖ್ಯಶಿಕ್ಷಕ ಬಿ.ಸಿ.ಮಾಚಕನೂರ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಾಸರೆಡ್ಡಿ, ಪ್ರೌಢ ಹಾಗೂ ಪ್ರಾಥಮಿಕ ಶಾಲೆಯ ಶಾಲಾ ಸುಧಾರಣಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಪ್ರಾಥಮಿಕ ಹಾಗೂ ಪ್ರೌಢಶಾಲೆಯ 118 ವಿದ್ಯಾರ್ಥಿಗಳು ಪೆÇೀಷಣ ಅಭಿಯಾನ ವಸ್ತುಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕ ಜಿಡಿ ಬೂದಿಹಾಳ ಸರ್ವರನ್ನು ಸ್ವಾಗತಿಸಿದರು, ವಿಜ್ಞಾನ ಶಿಕ್ಷಕ ಮಂಜುನಾಥ್ ಗುಜ್ಜರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಾಹಿತಿ ಶಿಕ್ಷಕ ಶಿವಾನಂದ ಪೂಜಾರಿ ಹಾಗೂ ಗಿರಿಜಾ ಮಠಪತಿ ಕಾರ್ಯಕ್ರಮ ನಿರೂಪಿಸಿದರು. ದುರ್ಗಾದಾಸ ಹರಕಂತ್ರ ವಂದಿಸಿದರು.