ಪೌರ ಕಾರ್ಮಿಕರ ಸೇವೆ ಶ್ಲಾಘನೀಯ : ಪವಾರ

ಔರಾದ :ಸೆ.24: ಪಟ್ಟಣ ಪಂಚಾಯತಿಯಲ್ಲಿ ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಪಟ್ಟಣ ಪಂಚಾಯತನ ಎಲ್ಲಾ ಪೌರಕಾರ್ಮಿಕರಿಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ಕೇರಬಾ ಪವಾರ ಅವರು ಸನ್ಮಾನಿಸಿ ಮಹಿಳಾ ಕಾರ್ಮಿಕರಿಗೆ ಸೀರೆ ಊಡುಗೋರೆಯಾಗಿ ನೀಡುವ ಮೂಲಕ ಪೌರ ಕಾರ್ಮಿಕರ ದಿನ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಗರವನ್ನು ನಿತ್ಯವೂ ಸ್ವಚ್ಛಗೊಳಿಸುವುದರ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರು ಕರೋನಾ ಸಂದರ್ಭದಲ್ಲಿಯೂ ಸಹ ಉತ್ತಮ ಕಾರ್ಯನಿರ್ವಹಿಸುವ ಮೂಲಕ ಕರೋನಾ ವೀರರಂತೆ ಕರ್ತವ್ಯ ನಿರ್ವಹಿಸಿರುವ ಪ್ರತಿಯೊಬ್ಬ ಪೌರ ಕಾರ್ಮಿಕರನ್ನು ಗೌರವದಿಂದ ಕಾಣುವುದು ಅವರಿಗೆ ನಾವುಗಳು ನೀಡುವ ಗೌರವ ಎಂದು ತಿಳಿಸಿದರು. ತಮ್ಮ ಅಳಿಲು ಸೇವೆಯಿಂದ ಇಡಿ ಪಟ್ಟಣ ಸ್ವಚ್ಛವಾಗಿಡಲು ಸಾಧ್ಯ ಪಟ್ಟಣ ಪಂಚಾಯತ ಅಧ್ಯಕ್ಷ/ಉಪಾಧ್ಯಕ್ಷ ಮತ್ತು ಸದಸ್ಯರುಗಳ ಹೆಸರು ಉಳಿಸುವಂತ ಕೆಲಸ ತಮ್ಮಿಂದಾಗಬೇಕಾಗಿದೆ, ಮತ್ತು ಕೆಲಸಕ್ಕೆ ಯಾರು ಬೇಜವಾಬ್ದಾರಿತನ ತೋರಬಾರದು ಮತ್ತು ಸೇವೆಗೆ ಸರಿಯಾಗಿ ಹಾಜರಾಗಿ ಕಛೇರಿಯ ಕೆಲಸದಲ್ಲಿ ಭಾಗಿಯಾಗಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಉಪಾಧ್ಯಕ್ಷ ಸಂತೋಷ ಪೆÇೀಕಲವಾರ, ಸರ್ವ ಸದಸ್ಯರು, ಮುಖ್ಯಾಧಿಕಾರಿ ರವಿ ಸುಕುಮಾರ , ಸಿಬ್ಬಂದಿ, ಮತ್ತು ಪೌರಕಾರ್ಮಿಕರು ಉಪಸ್ಥಿತರಿದ್ದರು.