ಪೌರ ಕಾರ್ಮಿಕರ ಸೇವೆ ಅಮೂಲ್ಯ

  ಹಿರಿಯೂರು.ಜೂ.3- ಪೌರ ಕಾರ್ಮಿಕರ ಸೇವೆ ತುಂಬಾ ಅಮೂಲ್ಯ ವಾದದ್ದು ಎಂದು ಉದ್ಯಮಿ ಸುರೇಶ್ ಬಾಬು  ಹೇಳಿದರು. ನಗರದ ನೆಹರು ಮಾರುಕಟ್ಟೆ ಬಳಿ ನಡೆದ ಕಾರ್ಯಕ್ರಮದಲ್ಲಿ  ಇಲ್ಲಿನ ಪೌರ ಕಾರ್ಮಿಕರಿಗೆ ದಿನಸಿ ಮತ್ತು ಬಟ್ಟೆ ವಿತರಿಸಿ  ಅವರು ಮಾತನಾಡಿದರು. ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ ಪೌರ ಕಾರ್ಮಿಕರು ತಮ್ಮ ಕುಟುಂಬ ದ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕು ಎಂದರು ಹಾಗು ಶೀಘ್ರದಲ್ಲೇ ಖಾಯಂ ಪ್ರಕ್ರಿಯೆ ಆಗಲಿದೆ ಎಂದು ತಿಳಿಸಿದರು.ಯಾದವ ಸಮಾಜದ ರಾಜ್ಯಾಧ್ಯಕ್ಷರಾದ ಡಿ.ಟಿ.ಶ್ರೀನಿವಾಸ್ ಮಾತನಾಡಿ ಪೌರ ಕಾರ್ಮಿಕರ ಸೇವೆಯನ್ನು ಶ್ಲಾಘಿಸಿದರು. ನಗರಸಭೆಯ ಅಧ್ಯಕ್ಷರಾದ ಶಂಶುನ್ನೀಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು ನಗರಸಭ ಸ್ಥಾಯಿ ಸಮಿತಿ ಅಧ್ಯಕ್ಷ ರಾದ ಚಿತ್ರಜಿತ್ ಯಾದವ್ ಉಪಾಧ್ಯಕ್ಷ ರಾದ ಬಿ.ಎನ್ ಪ್ರಕಾಶ್, ಪೌರಾಯುಕ್ತರಾದ ಟಿ.ಲೀಲಾವತಿ, ಕಂದಾಯ ಅಧಿಕಾರಿ ಜಯ್ಯಣ್ಣ, ವೃತ್ತ ನಿರೀಕ್ಷಕರಾದ ಕೆ.ಆರ್.ರಾಘವೇಂದ್ರ, ಶಿವಕುಮಾರ್,ಉದ್ಯಮಿ ಶ್ರೀನಿವಾಸ್,  ಪೌರ ಕಾರ್ಮಿಕರ ಸಂಘದ ಅಧ್ಯಕ್ಷರಾದ ದುರ್ಗೇಶ್, ನಗರಸಭೆ ಸದಸ್ಯರಾದ ಎಂ ಡಿ ಸಣ್ಣಪ್ಪ, ಬಿ.ಎನ್.ತಿಪ್ಪೇಸ್ವಾಮಿ, ಕೇಶವಮೂರ್ತಿ,ಸಿ.ಎಂ.ಸ್ವಾಮಿ,ಮಹಿಪಾಲ್, ಮಹೇಶ್ ಪಲ್ಲವ್, ಬಾಲಕೃಷ್ಣ  ಯುವ ಮುಖಂಡರಾದ ಪಿ.ಎಸ್. ಸಾದತ್ ಉಲ್ಲ , ಸರವಣ, ಚಿರಂಜೀವಿ  ಮತ್ತಿತರರು ಪಾಲ್ಗೊಂಡಿದ್ದರು.