ಪೌರ ಕಾರ್ಮಿಕರ ಸಾಮಾಜಿಕ ಕಾಳಜಿ ಸಮಾಜಕ್ಕೆ ಮಾದರಿ

ಬೀದರ:ನ.10: ಪೌರ ಕಾರ್ಮಿಕರು ನಗರದ ಬಡಾವಣೆಗಳಲ್ಲಿ ತಮ್ಮ ಎರಡೂ ಕೈಗಳಿಂದ ಸ್ವಚ್ಛಗೊಳಿಸುವ ಸೇವೆಯಲ್ಲಿ ನಿರತರಾಗಿರುತ್ತಾರೆ. ಇವರ ಪರಿಶ್ರಮದಿಂದ ಸ್ವಚ್ಛ, ಸುಂದರ ಪರಿಸರ ನಿರ್ಮಾಣವಾಗುತ್ತದೆ. ಅವರ ಸಾಮಾಜಿಕ ಕಳಕಳಿ ಇತರರಿಗೆ ಮಾದರಿಯಾಗಬೇಕು ಎಂದು ಜೈ ಶ್ರೀರಾಮ ಚಾರಿಟೇಬಲ್ ಸೊಸೈಟಿಯ ಉಪಾಧ್ಯಕ್ಷ ಶ್ರೀಕಾಂತ ಪಾಟೀಲ ಹೇಳಿದರು.

ನಗರದ ವಿದ್ಯಾನಗರ ಬಡಾವಣೆಯಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಮಾತನಾಡಿರುವ ಅವರು, ಸಾರ್ವಜನಿಕರು ಎಲ್ಲೆಂದರಲ್ಲೇ ಕಸ ಬಿಸಾಡದೇ ನಗರ ಸಭೆಯ ವಾಹನದಲ್ಲಿಯೇ ಕಸ ಹಾಕಬೇಕು ಎಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಪೊಲೀಸ್ ಮಾತನಾಡಿ, ಕಾರ್ಮಿಕರ ಸೇವೆ ಅನನ್ಯವಾಗಿದೆ, ಪ್ರತಿಯೊಬ್ಬರು ಪೌರಕಾರ್ಮಿಕರನ್ನು ಗೌರವಿಸಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಕೋವಿಡ್-19 ರ ಸಂಕಷ್ಟದಲ್ಲಿ ಶ್ರಮಿಸಿರುವ ಸುಪರ್‍ವೈಸರ್ ವಿನೋದಕುಮರ ಬಾಬುರವ, ಸಿದ್ರಾಮ ನದಶೆಟ್ಟಿ, ವಾಹನ ಚಾಲಕ ಪ್ರಸಾದ ಶಿರೋಮಣಿ, ಪ್ರವೀಣಕುಮಾರ, ಪೌರಕಾರ್ಮಿಕರಾದ ಗಣೇಶ ರೋಶನ, ಅರ್ಜೂನ ರೋಶನ, ಪ್ರಕಾಶ ಸದಾಶಿವ, ರಾಜಕುಮಾರ ನರಸಪ್ಪಾ, ಸಂಜುಕುಮಾರ ಮಹಾದೇವ, ಎಲೆಕ್ಟ್ರೀಶನ್ ಪ್ರಭುರಾವ ಇವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಪದಾಧಿಕಾರಿಗಳಾದ ಮೊಹನ ನರಸಿಂಗರಾವ, ಮಹೇಶ ಇಂಜಿನೀಯರ್, ಪ್ರಭಾಕರ ಜಟ್ಲಾ, ಸಂಜುರೆಡ್ಡ, ಪ್ರಭು ಆಲೂರೆ, ರಾಜಶೇಖರ ಗದ್ದೆ, ರಾಚಪ್ಪಾ ಪಾಟೀಲ, ಜಗದೀಶ ಜಟ್ಲಾ, ಜಗದೀಶ ರಗಟೆ, ರಾಜು ಡಿ.ಜೆ. ಹಾಗೂ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.