ಪೌರ ಕಾರ್ಮಿಕರ ಶ್ರಮದಿಂದ ಪಟ್ಟಣ ಸುಂಧರ-ವಿ.ಹುಲಿನಾಯಕ

ಸಿರವಾರ.ಸೆ೨೪- ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪಡೆಯುವ ಅಂಕಗಳ ಮೇಲೆ ಶಾಲೆಯ ಫಲಿತಾಂಶ ನಿರ್ದಾರ ಮಾಡಿದಂತೆ ನಗರ, ಪಟ್ಟಣ ಹೇಗೆ ಸುಂದರವಾಗಿದೆ ಎಂದರೆ ಅದು ಪೌರ ಕಾರ್ಮಿಕರ ಶ್ರಮದಲ್ಲಿ ಅಡಗಿದೆ ಎಂದು ತಹಶೀಲ್ದಾರ ಹಾಗೂ ಪಂಚಾಯತಿ ಆಡಳಿತಾಧಿಕಾರಿ ವಿಜಯೇಂದ್ರಹುಲಿನಾಯಕ ಹೇಳಿದರು.
ಪಟ್ಟಣ ಪಂಚಾಯತಿಯಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು,ಪೌರ ಕಾರ್ಮಿಕರ ಶ್ರಮ ನಾನು ಆಡಳಿತಾಧಿಕಾರಿಯಾದ ನಂತರ ಗೊತ್ತಾಗಿದೆ. ವಯೋವೃದ್ದರಾಗಿದರೂ ಉತ್ತಮರೀತಿಯಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನಿಯವಾಗಿದೆ.
ದಿನಗೂಲಿ ಕಾರ್ಮಿಕರನ್ನು ಖಾಯಂ ಮಾಡಲು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಕೊವೀಡ್ ಸಂದರ್ಭದಲ್ಲಿ ಮನೆಯವರೆ ಶವಗಳನ್ನು ಮುಟ್ಟದೆ ಇರುವಂತಹ ಸಂದರ್ಭದಲ್ಲಿ ನಮ್ಮ ಸಿಬ್ಬಂದಿಗಳ ಉತ್ತಮ ಕಾರ್ಯ ಮಾಡಿದ್ದಾರೆ. ಆಶ್ರಯ ಮನೆ ನಿರ್ಮಾಣಕ್ಕೆ ಅನುದಾನ ಕುರಿತು ಚರ್ಚಿಸಲಾಗುವುದು. ಪರಿಕರ ಇಲ್ಲದೆ ಇದ್ದರೆ ವಿತರಣೆ ಮಾಡಲಾಗುವುದು. ಕಾರ್ಮಿಕರು ರಕ್ಷಣೆ ಸಲಕರಣೆಗಳನ್ನು ಬಳಸಬೇಕು. ಕೆಲಸದ ಒತ್ತಡದಲ್ಲಿ ಮದ್ಯಪಾನಕ್ಕೆ ದಾಸರಾಗಬೇಡ.
ಆರೋಗ್ಯದ ಕಡೆ ಗಮನ ಹರಿಸಿ. ಮಕ್ಕಳಿಗೆ ಶಿಕ್ಷಣ ಕೊಡಿಸಿ. ತಿಂಗಳಿಗೆ ಒಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳಿ ಎಂದರು. ನಾಮನಿರ್ಧೇಶಕರಾದ ಎಂ.ನಾಗಪ್ಪ, ಮಹೇಶ ಪಾಟೀಲ್, ಪತ್ರಕರ್ತ ಸಂಘದ ಅಧ್ಯಕ್ಷ ಸುರೇಶ ಹೀರಾ, ರಾಜ್ಯ ಪೌರಕಾರ್ಮಿಕರ ಸೇವಾ ನೌಕರರ ಸಂಘದ ಅಧ್ಯಕ್ಷ ಸಚೀನ್ ಚ್ಯಾಗಿ, ಪ.ಪಂ ಮಾಜಿ ಸದಸ್ಯ ಕೃಷ್ಣನಾಯಕ, ಕರವೇ ಡಿ.ಯಮನೂರು ಮಾತನಾಡಿದರು.
ಶರಣಬಸವ ಟಿ.ಕೆ ನಿರುಪಣೆ ಮಾಡಿದರು. ಪೌರ ಕಾರ್ಮಿಕರಿಗೆ ಆಯೋಜಿಸಿದ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಣೆ, ಸರ್ಕಾರದಿಂದ ನೀಡುವ ೭ ಸಾವಿರ ಪ್ರೋತ್ಸಾಹ ಧನದ ಚೇಕ್ ವಿತರಣೆ ಮಾಡಲಾಯಿತು. ಪೌರ ಕಾರ್ಮಿಕ ವಿರೇಶ ನೇಕಾರ, ಪದ್ಮ, ಲಕ್ಷ್ಮೀ, ಸುನೀತಾಸಜ್ಜನ್, ಸನಾ, ನಾಗರಾಜ, ಸಣ್ಣ ಕರಿಯಪ್ಪ, ಸಾದು, ಆಂಜನೆಯ್ಯ, ಗೂಡಸಾಬ್, ಚಾಂದಸಾಬ್, ಸುಧಾಕರ ಸೇರಿದಂತೆ ಇನ್ನಿತರರು ಇದ್ದರು.