ಪೌರ ಕಾರ್ಮಿಕರ ದಿನ ಆಚರಣೆ

ಆನೇಕಲ್.ಸೆ.೨೪:ಬೊಮ್ಮಸಂದ್ರ ಪುರಸಭೆ ವ್ಯಾಪ್ತಿಯ ಆರ್.ಎಸ್. ಗಾರ್ಡೇನಿಯಾದ ಆವರಣದಲ್ಲಿ ಬೊಮ್ಮಸಂದ್ರ ಪುರಸಭೆ ವತಿಯಿಂದ ಅದ್ದೂರಿಯಾಗಿ ಪೌರ ಕಾರ್ಮಿಕರ ದಿನಾಚರಣೆಯನ್ನು ಆಯೋಜಿಸಲಾಗಿತ್ತು.
ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರಿಗೆ ವಿಶೇಷ ಭತ್ಯೆ ಹಾಗೂ ಕಾರ್ಮಿಕರ ಕುಟುಂಬಕ್ಕೆ ಹೆಲ್ತ್ ಇನ್ಸ್ ರೆನ್ಸ್ ವಿಮೆ, ಮತ್ತು ಎಲ್.ಐ.ಸಿ.ಬಾಂಡ್ ವಿತರಣೆ, ಸಮವಸ್ತ ಹಾಗೂ ಪಾದರಕ್ಷೆಗಳನ್ನು ಬೊಮ್ಮಸಂದ್ರ ಪುರಸಭೆ ವತಿಯಿಂದ ವಿತರಿಸಲಾಯಿತು.
ಇದೇ ಸಂಧರ್ಭದಲ್ಲಿ ಪೌರ ಕಾರ್ಮಿಕರಿಗೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದ ಪೌರ ಕಾರ್ಮಿಕರಿಗೆ ಬಹುಮಾನಗಳನ್ನು ಜನಪ್ರತಿನಿಧಿಗಳು ವಿತರಿಸಲಾಯಿತು. ವಿಶೇಷವಾಗಿ ಬೊಮ್ಮಸಂದ್ರ ಪುರಸಭೆ ವ್ಯಾಪ್ತಿಯಲ್ಲಿ ಪ್ರತಿನಿತ್ಯಾ ದೊರೆಯುವ ಕಸವನ್ನು ಕಸದ ನಿರ್ವಹಣೆ ಘಟಕದಲ್ಲಿ ಕಸವನ್ನು ರಸವನ್ನಾಗಿ ಪರಿವರ್ತಿಸಿ ಪಾಟ್ ಗಳ ರೂಪದಲ್ಲಿ ತಯಾರಿಸಿದ ಪಾಟ್ ಗಳನ್ನು ಇಂದು ನಡೆದ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳಿಗೆ ಹಾಗೂ ಗಣ್ಯರಿಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬೊಮ್ಮಸಂದ್ರ ಪುರಸಭೆ ಅಧ್ಯಕ್ಷ ವಸಂತ್ ಕುಮಾತ್, ಉಪಾಧ್ಯಕ್ಷ ಶ್ರೀನಿವಾಸ್ ರೆಡ್ಡಿ, ಬೊಮ್ಮಸಂದ್ರ ಪುರಸಭೆ ಸದಸ್ಯ ಹಾಗೂ ಬೊಮ್ಮಸಂದ್ರ ಕೈಗಾರಿಕೆಗಳ ಸಂಘದ ಅಧ್ಯಕ್ಷ ಎ.ಪ್ರಸಾದ್, ಬೊಮ್ಮಸಂದ್ರ ಪುರಸಭೆಯ ಸದಸ್ಯರಾದ ಚಲಪತಿ. ತಿಮ್ಮಾರೆಡ್ಡಿ. ಬಾಬು. ಮಂಜುನಾಥ್. ಸುಚಿತ್ರ ಶ್ರೀನಿವಾಸರೆಡ್ಡಿ. ಶಿಲ್ಪ. ಅಶ್ವಿನಿ ಮುರಳಿ. ಯಮುನಾ ರತ್ನಾಕರ್. ಮಂಜುಳ ಸುಬ್ರಹ್ಮಣ್ಯ. ಆಶಾ ಚೇತನ್. ನಾಮ ನಿರ್ದೇಶಕ ಸದಸ್ಯ ಪ್ರದೀಪ್, ಮುಖ್ಯಾದಿಕಾರಿ ಮಂಜುನಾಥ್. ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಯಲ್ಲಪ್ಪ ಸೇರಿದಂತೆ ಪೌರ ಕಾರ್ಮಿಕರು ಮತ್ತು ಪುರಸಭೆಯ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.