ಪೌರ ಕಾರ್ಮಿಕರ ದಿನಾಚರಣೆ


ಲಕ್ಷ್ಮೇಶ್ವರ,ಸೆ.24: ಪಟ್ಟಣದ ಪುರಸಭೆ ಸಭಾಭವನದಲ್ಲಿ 10ನೇ ವರ್ಷದ ಪೌರಕಾರ್ಮಿಕ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಸನ್ಮಾನಿಸಿ ಅವರಿಗೆ ಉಡುಪುಗಳನ್ನು ಮತ್ತು ಪೆÇ್ರೀತ್ಸಾಹ ಧನದ ಚೆಕ್ಕನ್ನು ವಿತರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ಶಾಸಕ ಜಿಎಸ್ ಗಡ್ಡದೇವರಮಠ ಅವರು ಮಾತನಾಡಿ ಪೌರಕಾರ್ಮಿಕರು ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಜೀವದ ಹಂಗು ತೊರೆದು ಸಲ್ಲಿಸಿದ ಸೇವೆ ಅವಿಸ್ಮರಣೀಯ.
ಪೌರಕಾರ್ಮಿಕರು ಪಟ್ಟಣದ ಸ್ವಚ್ಛತೆ ಸೌಂದರ್ಯ ಹೆಚ್ಚಿಸಲು ಮಹತ್ತರ ಕಾಣಿಕೆ ನೀಡುತ್ತಿದ್ದು ಅವರು ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳನ್ನು ತೊಡಗಿ ಚೇತೊ ಶಕ್ತಿಯಾಗಿ ಪ್ರಗತಿಗೆ ಸಹಕಾರ ನೀಡಬೇಕು ಎಂದರು.
ಪ್ರಾಸ್ತಾವಿಕ ಮಾತನಾಡಿದ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಅವರು ಪೌರಕಾರ್ಮಿಕರು ಸಾರ್ವಜನಿಕರೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಂಡು ಅವರ ಸಹಕಾರದೊಂದಿಗೆ ಪಟ್ಟಣವನ್ನು ಸ್ವಚ್ಚವಾಗಿಡಲು ಪ್ರಮುಖ ಪಾತ್ರವಹಿಸುತ್ತಿದ್ದಾರೆ ಸಾರ್ವಜನಿಕರು ಸಹ ಪೌರಕಾರ್ಮಿಕರಿಗೆ ಸಹಕಾರ ನೀಡಿ ಪಟ್ಟಣದ ಸ್ವಚ್ಛತೆ ಸೌಂದರ್ಯ ಕಾಪಾಡಲು ನೆರವಾಗಬೇಕು ಪೌರಕಾರ್ಮಿಕರು ಸೇನಾನಿ ಗಳಾಗಿದ್ದು ಅವರನ್ನು ಗೌರವದಿಂದ ಕಾಣಬೇಕು ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಪೂರ್ಣಿಮಾ ಪಾಟೀಲ್ ಅಶ್ವಿನಿ ಅಂಕಲಕೋಟಿ ಮಹೇಶ್ ಹೊಗೆಸೊಪ್ಪಿನ ರಾಜು ಕುಂಬಿ ಜಯಕ್ಕ ಕಳ್ಳಿ ಸರೋಜಾಕಾ ಬನ್ನೂರ ಶಾರದಾ ಮಹಾಂತ ಶೆಟ್ಟರ ಫಿರ್ದೋಷ ಆಡೂರ ಮತ್ತು ಸೃಷ್ಟಿ ದೃಷ್ಟಿ ಸಂಸ್ಥೆಯ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೌರ ಕಾರ್ಮಿಕ ಸಂಘದ ಅಧ್ಯಕ್ಷ ಬಸವರಾಜ್ ನಂದೆಣ್ಣವರ ವಹಿಸಿದ್ದರು ವೇದಿಕೆಯ ಮೇಲೆ ಪುರಸಭೆಯ ಉಪಾಧ್ಯಕ್ಷ ರಾಮು ಗಡದವರ್ ಸ್ಥಾಯಿ ಸಮಿತಿ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಶಿರಟ್ಟಿ ಸರೋಜಾ ಬನ್ನೂರು ಇದ್ದರು.
ಕಾರ್ಯಕ್ರಮದಲ್ಲಿ ಪುರಸಭೆಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು ಸಂಯೋಜನ ಅಧಿಕಾರಿ ಆರ್ ಎನ್ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿದರು.