ಪೌರ ಕಾರ್ಮಿಕರ ಜೊತೆ ಕೇಕ್ ಕತ್ತರಿಸಿದ ಸದಸ್ಯ

ಸಿರವಾರ.ಜ.೩-ಪಟ್ಟಣದ ಮುಖ್ಯರಸ್ತೆ, ವಾರ್ಡಗಳಲ್ಲಿರುವ ರಸ್ತೆ, ಚರಂಡಿಗಳು ಇಷ್ಟು ಸ್ವಚ್ಛವಾಗಿ, ಸುಂದರವಾಗಿ ಕಾಣುತ್ತಿದ್ದರೆ ಅದಕೆ ಮುಖ್ಯ ಕಾರಣ ಪೌರ ಕಾರ್ಮಿಕರು ಅವರು ಆರೋಗ್ಯದಿಂದ ಚೆನ್ನಾಗಿದರೆ ಇವೇಲಾ ಸಾದ್ಯ ಎಂದು ಪ.ಪಂಚಾಯತಿ ವಾರ್ಡ ನಂ ೬ ಸದಸ್ಯ ಹಾಜಿಚೌದ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.
೨೦೨೩ ರ ಮೊದಲ ದಿನವಾದ ಇಂದು ಬೆಳಗ್ಗೆ ವಾರ್ಡಿನ ಸ್ವಚ್ಚತೆಗೆ ಆಗಮಿಸಿದ ಪೌರ ಕಾರ್ಮಿಕರ ಜೊತೆ ಹೊಸ ವರ್ಷದ ಅಂಗವಾಗಿ ಹಾಜಿಚೌದ್ರಿಯವರು ಕೇಕ್ ಕತ್ತರಿಸಿ, ತಿನ್ನಿಸಿ, ಶುಭಾಶಯ ತಿಳಿಸಿದರು. ನಂತರ ಮಾತನಾಡಿ ಬೆಳಗ್ಗೆ ನಾವು ಏಳುವುದಕಿಂತಲೂ ಮುಂಚೆಯೆ ಎದ್ದು, ಮುಖ್ಯರಸ್ತೆ, ವಾರ್ಡ್‌ಗಳ ರಸ್ತೆಗಳನ್ನು ಸ್ವಚ್ಚಗೊಳಿಸಿ, ಜನರ ಆರೋಗ್ಯವನ್ನು ಪೌರ ಕಾರ್ಮಿಕರು ಕಾಪಾಡುತ್ತಿದ್ದಾರೆ. ಅವರಿಂದಲೇ ಪಟ್ಟಣ ಇಷ್ಟು ಸ್ವಚ್ಚವಾಗಿ ಕಾಣುತ್ತಿದೆ. ಅವರಿಗೆ ನಾವು ಕೆಲಸ ಹೇಳುತ್ತೆವೆ,ಅವರು ಮಾಡುತ್ತಾರೆ.
ಇಂತಹ ಸಂದರ್ಭದಲ್ಲಿ ಅವರೊಂದಿಗೆ ಈ ತರಹ ಆಚರಣೆ ಮಾಡಿದರೆ ಅವರಿಗೆ ಇನೂ ಕೆಲಸ ಮಾಡಲು ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಎಲ್ಲಾರಿಗೂ ೨೦೨೩ ಹೊಸ ವರ್ಷದ ಶುಭಾಶಯಗಳು ಎಂದರು. ಸಂದರ್ಭದಲ್ಲಿ ಸುನೀತಾ ಸಜ್ಜನ್, ಪೌರ ಕಾರ್ಮಿಕರು, ವಾರ್ಡಿನ ನಿವಾಸಿಗಳು ಇದರು.