ಪೌರ ಕಾರ್ಮಿಕರ ಕಾರ್ಯ ಶ್ಲ್ಯಾಘನೀಯ

ಬಾಗಲಕೋಟ, ನ. 15 : ಆಜಾದಿಕ ಅಮೃತ ಮಹೋತ್ಸವ ಅಂಗವಾಗಿ ಬಾಗಲಕೋಟ ನಗರದ ಸ್ವಚ ಸರ್ವೇಕ್ಷಣಾ, ಸ್ವಚ ಭಾರತ ಅಭಿಯಾನದಡಿ. ನಗರ ಸಭೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಹಾಗೂ ಸುರಕ್ಷಿತ ಮಹಿಳಾ ಅಭಿವೃದ್ಧಿ ಸಂಘ ಬಾಗಲಕೋಟ ಇವರ ಆಶ್ರಯದಲ್ಲಿ, ನಗರ ಸಭೆ ಪೌಕಾರ್ಮಿಕರಿಗೆ ಘನತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಅಪಾಯಕಾರಿ ತ್ಯಾಜ್ಯಗಳ ವಿಂಗಡನೆ ಹಾಗೂ ನಿರ್ವಹಣೆ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ನಗರ ಸಭೆಯ ಸಭಾ ಭವನದಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಜಿಲ್ಲಾ ನ್ಯಾಯಾಧೀಶರಾದ ಎಸ್.ಬಿ. ದ್ಯಾವಪ್ಪ ಅವರು ಮಾತನಾಡಿ, ಮನುಷ್ಯರು ಆರೋಗ್ಯವಾಗಿರಬೇಕಾದರೆ ಆಹಾರ ನೀರು ಏಷ್ಟು ಮುಖ್ಯವೋ ಅದೇ ರೀತಿ ನಮ್ಮ ಪರಿಸರವು ಸ್ವಚ್ಛವಾಗಿ ಹಾಗೂ ಸುಂದರವಾಗಿ ಇರಬೇಕೆಂದು ತಿಳಿಸಿದರು. ಅದೇ ರೀತಿ ಸ್ವಚ್ಛತೆ ಮಾಡುವುದರ ಬಗ್ಗೆ ಪೌರಕಾರ್ಮಿಕರ ಕಾರ್ಯವು ತುಂಬಾ ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದ ಅತಿಥಿಗಳಾದ ರಾಜಶೇಖರ್ ಪುರಾಣಿಕರ ಮಾಲಿನ್ಯ ನಿಯಂತ್ರಣ ಮಂಡಳಿ ಬಾಗಲಕೋಟ ಇವರು ಹಿಂದಿನ ದಿನಗಳಿಗಿಂತ ಈಗ ಪರಿಸರವು ಬಹಳ ಮಾಲಿನ್ಯವಾಗುತಿದ್ದೆ. ಇದನ್ನು ತಡೆಯದಿದ್ದರೆ ಮುಂದೆ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ. ಅರಣ್ಯ ತ್ಯಾಜ್ಯಗಳನ್ನು ಮೂಲದಲ್ಲಿಯೇ ಬೇರ್ಪಡಿಸಿ ಪರಿಸರಕ್ಕೆ ಹಾನಿಯಾಗುವದನ್ನು ತಪ್ಪಿಸಲು ತಿಳಿಸಿದರು.
ನಂತರ ನಗರ ಸಭೆ ಬಾಗಲಕೋಟೆಯ ಪರಿಸರ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸತೀಶ್ ಖಜ್ಜಿಡೋಣಿ, ಸ್ವಚ ಭಾರತ ಅಭಿಯಾನದಲ್ಲಿ ನಮ್ಮ ದೇಶದ ಪ್ರಧಾನಿಗಳಾದ ನರೇಂದ್ರ ಮೋದಿಯವರು ಈ ಯೋಜನೆಯನ್ನು ಜಾರಿಗೆ ತಂದರು. ಇದರ ಮುಖ್ಯ ಉದ್ದೇಶ ನಮ್ಮ ದೇಶವನ್ನು ಸ್ವಚ್ಛಗೊಳಿಸಲು, ಪ್ಲಾಸ್ಟಿಕ್ ಮುಕ್ತವಾಗಲು ಹಾಗೂ ಎಲ್ಲರ ಮನೆಯಲ್ಲಿ ತ್ಯಾಜ್ಯಗಳಾದ ಹಸಿಕಸ, ಒಣಕಸ, ಅಪಾಯಕಾರಿ ತ್ಯಾಜ್ಯಗಳನ್ನು ಬೇರ್ಪಡಿಸಲು ಜನರಿಗೆ ಅರಿವು ಮೂಡಿಸಲು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸುರಕ್ಷಿತ ಮಹಿಳಾ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ದ್ರಾಕ್ಷಾಯಿಣಿ ಲೋಕಾಪುರ ಸುಮಾರು 60 ವರ್ಷಗಳ ಹಿಂದೆ ನಿತ್ಯವೂ ಇಷ್ಟೊಂದು ಮಾಲಿನ್ಯ ಇರಲಿಲ್ಲ. ಸ್ವಚ್ಛತೆಯ ಬಗ್ಗೆ ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮಾ ಗಾಂಧೀಜಿಯವರ ಕನಸಾಗಿತ್ತು. ಈಗ ಸ್ವಚ್ಛತೆಯ ಬಗ್ಗೆ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದು ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದು ಇವರೊಂದಿಗೆ ಹಲವಾರು ಸ್ವಯಂಸೇವಾ ಸಂಸ್ಥೆಗಳು ಕೂಡ ಈ ಕಾರ್ಯದಲ್ಲಿ ಭಾಗವಹಿಸಿ, ಈ ಯೋಜನೆಯು ಜಾರಿಗೆಯಾಗಿದ್ದು ನಾವೆಲ್ಲರೂ ಆರೋಗ್ಯವಾಗಿರಬೇಕಾದರೆ ಸ್ವಚ್ಛತೆಯನ್ನು ಕಾಪಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮವನ್ನು ಮಹದೇವ್ ತುಪ್ಪದ ನಿರೂಪಿಸಿದರು. ವಂದನಾರ್ಪಣೆಯನ್ನು ಶರಣು ಬಸನಗೌಡರ ಇವರು ನೆರವೇರಿಸಿ ಕೊಟ್ಟರು. ನಗರ ಸಭೆಯ ಸಿಬ್ಬಂದಿಗಳು ಹಾಜರಿದ್ದರು.