ಪೌರ ಕಾರ್ಮಿಕರ ಕಾಯಂಗೆ ಹೋರಾಟ ಅನಿವಾರ್ಯ :ಬಿರಾದಾರ

ಇಂಡಿ:ಸೆ.25:ಪುರಸಭೆಯಲ್ಲಿ ಹಲವಾರು ವರ್ಷಗಳಿಂದ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರು ಕಾಯಂ ಮಾಡುವಂತೆ ಸರಕಾರದ ಮೇಲೆ ಒತ್ತಡ ಹೆರಲು ಪ್ರತಿಭಟನೆ, ಉಪವಾಸ, ಸತ್ಯಾಗ್ರಹದ ಮೂಲಕ ಹೋರಾಟ ಮಾಡಬೇಕು ಎಂದು ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ ಹೇಳಿದರು.

ಪಟ್ಟಣದ ಬಸವೇಶ್ವರ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಸದಸ್ಯ ದೇವೆಂದ್ರ ಕುಂಬಾರ ಮಾತನಾಡಿ ಪೌರಕಾರ್ಮಿಕರು ಸಂಕಷ್ಟ ಪರಿಸ್ಥಿತಿಯಲ್ಲೂ ಜೀವನ ನಡೆಸುತ್ತಿದ್ದಾರೆ. ಅದÀರಲ್ಲೂ ಕೊರೊನಾ ಸೋಂಕಿನ ಸಂದರ್ಭದಲ್ಲಿ ಅವರ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ. ತಮ್ಮ ಕುಟುಂಬಗಳಲ್ಲಿ ಅರ್ಥಿಕ ಸಂಕಷ್ಟದ ನಡುವೆ ಕೆಲಸಮಾಡಿ ತಮ್ಮ ಕುಟುಂಬ ಪೋಷಣೆ ಮಾಡಿದ್ದಾರೆ. ಸುಮಾರು ವರ್ಷಗಳಿಂದ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರೂ ಪೌರ ಕಾರ್ಮಿಕರನ್ನು ಕಾಯಂ ಮಾಡದೆ ಸರಕಾರ ನಿರ್ಲಕ್ಷಿಸಿದೆ ಎಂದರು.

ಪರಿಸರ ಅಭಿಯಂತರ ಲಕ್ಷ್ಮೀಶ ಮಾತನಾಡಿ ಪೌರ ಕಾರ್ಮಿಕರು ಇಲ್ಲದೆ ಇದ್ದರೆ ಜನತೆ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಿಲ್ಲ. ವಾರ್ಡುಗಳಲ್ಲಿ ಒಂದು ವಾರ ಸ್ವಚ್ಛತೆ ಮಾಡದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ. ಪೌರ ಕಾರ್ಮಿಕರ ಸೇವೆ ಪ್ರಶಂಸನೀಯ ಎಂದರು.

ಇದೇ ವೇಳೆ ಪೌರ ಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಕಾಲೇಭಾಗ, ಕಿರಿಯ ಅಭಿಯಂತರ ಅಶೋಕಕುಮಾರ ಚಂದನ, ಹಿರಿಯ ಆರೋಗ್ಯ ನೀರಿಕ್ಷಕರು ಲಕ್ಷ್ಮೀಪುತ್ರ ಸೋಮನಾಯಕ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹುಚ್ಚಪ್ಪ ಶಿವಶರಣ, ಕಾರ್ಮಿಕರಾದ ಮಲ್ಲಪ್ಪ ನಡಗಡ್ಡಿ, ಸಿದ್ದು ಸಿಂಘೆ, ಶ್ರೀಶೈಲ ಹಾದಿಮನಿ, ಮೈಲಗಿ ಬಳಗಾರಿ, ಮುತ್ತು ಮುರಾಳ ಮತ್ತಿತರಿಗೆ ಸನ್ಮಾನಿಸಲಾಯಿತು. ಖಾಯಂ ಪೌರ ಕಾರ್ಮಿಕರಿಗೆ ವಿಶೇಷ ಭತ್ಯೆ ರೂ 7000, ಅಡಿಗೆ ಅನಿಲ ಸಂಪರ್ಕ, ಶೇ 24.10 ರಲ್ಲಿ ಎಲ್ಲ ಪೌರ ಕಾರ್ಮಿಕರಿಗೆ ಗ್ಯಾಸು ವಿತರಣೆ ಮಾಡಿದರು.

ಶ್ರೀಶೈಲ ಪೂಜಾರಿ, ಪುರಸಭೆ ಸದಸ್ಯರಾದ ಭೀಮನಗೌಡ ಪಾಟೀಲ, ಅಯೂಬ ನಾಟಿಕಾರ, ಸತೀಶ ಕುಂಬಾರ, ಶಬ್ಬೀರ ಖಾಜಿ, ಉಮೇಶ ದೆಗಿನಾಳ, ಸುಧೀರ ಕರಕಟ್ಟಿ, ಮುಸ್ತಾಕ ಅಹಮದ ಇಂಡಿಕರ,ಪಿಂಟು ರಾಠೋಡ, ವಿಜು ಮೂರಮನ, ಜಹಾಂಗೀರ ಸೌದಾಗರ, ಅಸ್ಲಂ ಖಾದಿಮ್ ಮತ್ತಿತರಿದ್ದರು.