ಪೌರ ಕಾರ್ಮಿಕರು ಆರೋಗ್ಯದ ಕಡೆ ಎಚ್ಚರ ವಹಿಸಿ- ಜಿ.ಲೊಕರೆಡ್ಡಿ

ಸಿರವಾರ.ಮೇ.೧- ಪಟ್ಟಣದ ಪ್ರತಿ ವಾರ್ಡ್, ಮುಖ್ಯರಸ್ತೆ ಚರಂಡಿಯನ್ನು ಸ್ವಚ್ಚವಾಗಿಡುವ, ನೀರು ಸರಬರಾಜು ಮಾಡುವ ಪೌರ ಕಾರ್ಮಿಕರು ಕೆಲಸ ಒತ್ತಡದಲ್ಲಿ ಆರೋಗ್ಯದ ಕಡೆ ನಿರ್ಲಕ್ಷ ವಹಿಸದೆ ಎಚ್ಚರಿಕೆಯಿಂದ ಇರಬೇಕು ಎಂದು ಜೆ.ಡಿ.ಎಸ್ ಹಿರಿಯ ಮುಖಂಡ ಹಾಗೂ ವಾಣಿಜ್ಯೋದ್ಯಮಿ ಜಿ.ಲೊಕರೇಡ್ಡಿ ಪೌರ ಕಾರ್ಮಿಕರಿಗೆ ಕಿವಿ ಮಾತು ಹೇಳಿದರು.
ಪಟ್ಟಣ ಪಂಚಾಯತಿಯ ಸ್ರ್ತೀ-ಪುರುಷ ಪೌರ ಕಾರ್ಮಿಕರಿಗೆ ತಮ್ಮ ೪೮ ನೇ ಹುಟ್ಟು ಹಬ್ಬದ ಅಂಗವಾಗಿ ಇಂದು ಬೆಳಗ್ಗೆ ಬಟ್ಟೆಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು ದೇಶದಲ್ಲಿ ಕೊರೋನಾ ವೈರಸ್‌ನಿಂದಾಗಿ ಕಳೇದ ವರ್ಷದಂತೆ ಈ ವರ್ಷವು ಸಹ ಲಾಕ್‌ಡೌನ್ ಮಾಡಿರುವುದರಿಂದ ಬಡವರಿಗೆ ಕೂಲಿ ಕಾರ್ಮಿಕರ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಅದ್ದೂರಿಯಾಗಿ ಹುಟ್ಟು ಹಬ್ಬವನ್ನು ಆಚರಣೆ ಬೇಡವೆಂದು. ಕಾರ್ಮಿಕರಿಗೆ ನೇರವಾಗಬೇಕೆಂಬ ಉದ್ದೇಶದಿಂದ ಬಟ್ಟೆಗಳನ್ನು ವಿತರಣೆ ಮಾಡಲಾಯಿತು. ಕಾರ್ಮಿಕರಿಗೆ ಅನೇಕ ಕಷ್ಟಗಳು ಇರುತ್ತವೆ. ಇಂತಹ ಒತ್ತಡದ ಮದ್ಯದಲ್ಲಿಯೂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೀವುಗಳು ನಿಜವಾದ ಕೆಲಸಗಾರರು. ನಿಮ್ಮ ಸೇವೆಯಿಂದ ಪಟ್ಟಣದ ನಿವಾಸಿಗಳು ಆರೋಗ್ಯದಿಂದ ಇದ್ದಾರೆ. ಯಾವುದೇ ರೋಗ ಹರಡದಂತೆ ಪ್ರತಿ ವಾರ್ಡಗಳಲ್ಲಿ ಸ್ವಚ್ಛತೆ ಮಾಡಿ ಸುಂದರವಾಗಿ ಇಡುವ ಕೇಲ ಕಾರ್ಮಿಕರು ಮದ್ಯಪಾನ ದೂಮಪಾನಕ್ಕೆ ದಾಸರಾಗಿರುತ್ತಿರಿ ಅದನ್ನು ಬಿಟ್ಟು ನಿಮ್ಮ ದೇಹವನ್ನು ಸದೃಡ್ಡವಾಗಿಟ್ಟುಕೊಳ್ಳಬೇಕು. ಆಗಾಗ ವೈದ್ಯರೊಂದಿಗೆ ತಪಾಸಣೆ ಮಾಡಿಸಿಕೊಳ್ಳಬೇಕು. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ನಿಮ್ಮಂತೆ ಕಾರ್ಮಿಕರನ್ನಾಗಿ ಮಾಡದೆ ಅಧಿಕಾರಿಗಳನ್ನಾಗಿಸಿ ಎಂದರು.
ಪ.ಪಂ ಮುಖ್ಯಾದಿಕಾರಿ ಕೆ.ಮುನಿಸ್ವಾಮಿ ಮಾತನಾಡಿ ಲೋಕರೆಡ್ಡಿ ಅವರಿಗೆ ಪೌರ ಕಾರ್ಮಿಕರ ಮೇಲೆ ವಿಶೇಷ ಕಾಳಜಿ ಹೊಂದಿದ್ದಾರೆ. ಕಾರ್ಮಿಕರ ಚೆನ್ನಾಗಿ ಕೆಲಸ ಮಾಡಿದರೆ ಪಟ್ಟಣ ಚೆನ್ನಾಗಿರುತ್ತದೆ. ಅವರ ಕಷ್ಟಕ್ಕೆ ಸದಾ ಸ್ಪಂದಿಸುತ್ತಾರೆ. ಕಳೆದ ಬಾರಿಯೂ ಸಹ ತಮ್ಮ ಹುಟ್ಟುಹಬ್ಬದ ಅಂಗವಾಗಿ ಆಹಾರ ಕೀಟ್‌ಗಳನ್ನು ಪೌರ ಕಾರ್ಮಿಕರಿಗೆ ವಿತರಣೆ ಮಾಡಿದರು. ಈ ಬಾರಿ ಬಟ್ಟೆಗಳನ್ನು ವಿತರಣೆ ಮಾಡಿದ್ದಾರೆ. ಕಾರ್ಮಿಕರ ಪರವಾಗಿ ಅವರಿಗೆ ಧನ್ಯವಾದಗಳು ಎಂದರು.
ಪ.ಪಂ ಸದಸ್ಯ ಇರ್ಪಾನ್, ಜ್ಞಾನಭಾರತಿ ಶಾಲೆಯ ಅಧ್ಯಕ್ಷ ಪ್ರಕಾಶ ಪಾಟೀಲ್, ಡಿ.ಯಮನೂರು, ಜೆ.ಡಿ.ಎಸ್ ತಾಲೂಕ ಅಧ್ಯಕ್ಷ ನಾಗರಾಜಗೌಡ, ದಾನಪ್ಪ, ಹನುಮೇಶ, ರಂಗನಾಥ, ಪಂಚಾಯತಿ ಸಿಬ್ಬಂದಿಗಳಾದ ಶರಣಬಸವ, ಸಚೀನ್ ಚ್ಯಾಗಿ, ವಿರೇಶ ನೇಕಾರ, ಸೇರಿದಂತೆ ಇನ್ನಿತರರು ಇದ್ದರು.