ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ

ಕಲಬರುಗಿ:ಮೇ.28: ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ತಂಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇಂದು ಬೆಳಗಿನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು

ಪೌರ ಕಾರ್ಮಿಕರಿಗೆ ಉಪಹಾರ ನೀಡುವ ಮೂಲಕ ಪಾಲಿಕೆಯ ಆಯುಕ್ತರಾದ ಮಾನ್ಯ ಶ್ರೀ ಸೇಹ್ನಲ್ ಲೋಖಂಡೆ ಅವರು ಚಾಲನೆ ನೀಡಿ ಮಾತಾನಾಡಿದ ಅವರು ತಂಗಾ ಟ್ರಸ್ಟ್ನವರು ಪೌರ ಕಾರ್ಮಿಕರಿಗೆ ಉಪಹಾರದ ವ್ಯವಸ್ಥೆ ಮಾಡಿದ್ದು ಸಂತಸ ತಂದಿದ್ದು ಇದೊಂದು ಉತ್ತಮ ಕಾರ್ಯವೆಂದು ನುಡಿದರು

ಕೂರೋನಾ ವೈರಸ್ ತಡೆಗಟ್ಟಲು ಲಾಕ್ ಡೌನ್ ಮಾಡಿರುವ ಈ ಸಂದರ್ಭದಲ್ಲಿ ಪೌರ ಕಾರ್ಮಿಕರು ಮಹಾನಗರ ಸ್ವಚ್ಛತೆಗಾಗಿ ಶ್ರಮಿಸುತ್ತಿದ್ದು ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರ ಸೇವೆನೆ ಅಗತ್ಯವಿದ್ದು ಈ ದಿಸೆಯಲ್ಲಿ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಟ್ರಸ್ಟ್ ನ ಸಂಯೋಜಕರು ಆಗಿರುವ ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ರಾಜ್ಯ ನಿರ್ದೇಶಕರಾದ ಶ್ರೀ ಸುರೇಶ್ ತಂಗಾ ನುಡಿದರು

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಕಲಬರುಗಿ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯರಾದ ನಾಗಲಿಂಗಯ್ಯ ಮಠಪತಿ. ಉದ್ಯಮಿ ರಾಜೇಂದ್ರ ಕುಣಚಗಿ. ಯುವ ಮುಖಂಡರಾದ ಶರಣಪ್ಪ ಭೂಸಾ.ಅವರು ಉಪಸ್ಥಿತರಿದ್ದರು