ಪೌರ ಕಾರ್ಮಿಕರಿಗೆ ಟಿಫನ್ ಬಾಕ್ಸ್ ವಿತರಣೆ

ದಾವಣಗೆರೆ. ನ.೭; ಪ್ರತಿದಿನ ವಾರ್ಡನಲ್ಲಿ ಸ್ವಚ್ಛತಾ ಕೆಲಸ ಮಾಡುವ ಪೌರಕಾರ್ಮಿಕ ನೌಕರರಿಗೆ ಮಹಾನಗರ ಪಾಲಿಕೆ ಸದಸ್ಯರಾದ ಸುಧಾ ಇಟ್ಟಿಗುಡಿ ಮಂಜುನಾಥ್ ತಮ್ಮ ನಿವಾಸದಲ್ಲಿ  ಸ್ಟೀಲ್ ಟಿಫನ್ ಬಾಕ್ಸ್ ನೀಡುವ ಮೂಲಕ ವಿಶೇಷವಾಗಿ ದೀಪಾವಳಿ ಹಬ್ಬದ ಶುಭಾಶಯ ಕೋರಿದರು.5 ನೇ ವಾರ್ಡಿನ 22 ಪೌರ ಕಾರ್ಮಿಕರಿಗೆ ಇಂದು ಬೆಳಗ್ಗೆ ಸ್ಟೀಲ್ ಟಿಫನ್ ಬಾಕ್ಸ್ ಹಾಗೂ ಸಿಹಿ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಇಟ್ಟಿಗುಡಿ ಮಂಜುನಾಥ್, ವಾರ್ಡಿನ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.