ಪೌರ ಕಾರ್ಮಿಕರಿಗೆ ಉಚಿತ ಮಾಸ್ಕ್ ವಿತರಣೆ

ಮೈಸೂರು,ಸೆ.24: ಬೇರು ಫೌಂಡೇಶನ್ ವತಿಯಿಂದ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಜಗಮೋಹನ ಅರಮನೆಯ ಸುತ್ತಮುತ್ತ ಹಾಗೂ ವಿವಿಧ ವೃತ್ತದಲ್ಲಿ ಪೌರಕಾರ್ಮಿಕರ ಕೆಲಸ ಮಾಡುತ್ತಿರುವ ಬೇರು ಫೌಂಡೇಶನ್ ಯುವಕ ಮಿತ್ರರು ಪೌರ ಕಾರ್ಮಿಕರಿಗೆ 500 ಮಾಸ್ಕ್ ಉಚಿತವಾಗಿ ವಿತರಿಸುವ ಮೂಲಕ ಆರೋಗ್ಯದಲ್ಲಿ ಪೌರಕಾರ್ಮಿಕರು ಅತಿ ಹೆಚ್ಚು ಜಾಗೃತರಾಗಿ ಎಂದು ಮನವಿ ಮಾಡಿಕೊಂಡರು
ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಆರೋಗ್ಯ ಅಧಿಕಾರಿ ರಾಜೇಶ್ವರಿ ಕೊರೊನಾ ಸಂಕಷ್ಟದಲ್ಲೂ ಪೌರಕಾರ್ಮಿಕರ ಸೇವೆ ಅನನ್ಯ’ ಕೊರೊನಾ ಕಾಲದಲ್ಲೂ ಊರಿನ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿರುವ ಪೌರಕಾರ್ಮಿಕರ ಸೇವೆ ಅನನ್ಯ. ಅವರು ನಿಜವಾದ ಅರ್ಥದಲ್ಲಿ ಕೊರೊನಾ ವಾರಿಯರ್ಸ್ಕೊರೊನಾ ಕಾರಣಕ್ಕೆ ಹಲವು ಇಲಾಖೆಗಳ ನೌಕರರು ಮನೆಯಿಂದ ಹೊರಬರಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲೂ ಪೌರಕಾರ್ಮಿಕರು ತಪ್ಪದೆ ಕೆಲಸ ಮಾಡಿದ್ದಾರೆ ಎನ್ನುವುದನ್ನು ಸಮಾಜ ಗುರುತಿಸಬೇಕಿದೆ’
ಈ ವರ್ಷ ಕೊರೊನಾ ಕಾರಣಕ್ಕೆ ಸರಳವಾಗಿ ಆಚರಿಸಲಾಗುತ್ತಿದೆ. ಸದಾ ತೆರೆಮರೆಯಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರು ಯಾವತ್ತೂ ಸಮಾಜದ ಮುಖ್ಯವಾಹಿನಿಗೆ ಬರಲು ಬಯಸುವುದಿಲ್ಲ. ಅವರನ್ನು ಮುಖ್ಯವಾಹಿನಿಯಲ್ಲಿ ಗುರುತಿಸುತ್ತಿರುವುದು ಮೈಸೂರಿನ ಸಂಘ ಸಂಸ್ಥೆಗಳ ಕರ್ತವ್ಯವಾಗಿದೆ’ ಎಂದರು.
ನಂತರ ಮಾತನಾಡಿದ ಬೇರು ಫೌಂಡೇಷನ್ ಅಧ್ಯಕ್ಷ ಮಧು .ಎನ್ ವಿಶ್ವದ ನಿದ್ದೆಗೆಡಿಸಿರುವ ಕೂರೂನಾ ಸೋಂಕಿನ ಬಗ್ಗೆ ನಗರ ಮತ್ತು ತಾಲ್ಲೂಕಿನ ಇತ್ತೀಚೆ ದಿನದಲ್ಲಿ ನಿರ್ಲಕ್ಷ್ಯ ಭವನೆ ಹೆಚ್ಚಾಗುತ್ತಿದ್ದು
ಪ್ರಮುಖ ರಾಜಕಾರಣ ಮುಖಂಡರುಗಳು ಹಾಗೂ ಅಧಿಕಾರಿಗಳು ಕೂರೂನಾ ಬಲಿಯಾಗುತ್ತಿದ್ದಾರೆ
ಪ್ರತಿಯೊಬ್ಬ ಪ್ರಜೆಯೂ ಮಾಸ್ಕ್ ಧರಿಸಿ ಓಡಾಡುವುದು ಕಡ್ಡಾಯವಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೂರೂನಾ ಮುನ್ನೆಚ್ಚರಿಕೆಯಿಂದ ದೂರವಾಗುತ್ತಿರುವ ಸಾರ್ವಜನಿಕರು ಆತಂಕದ ವಿಚಾರ ಅದರಲ್ಲೂ ದಿನನಿತ್ಯ ಮನೆ ಮನೆಗೂ ಹೋಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರು ಹೆಚ್ಚು ಜಾಗೃತರಾಗಿರಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ.
ಪೌರ ಕಾರ್ಮಿಕರ ಮಕ್ಕಳು ಕೂಡ ಈಚಿನ ದಿನಗಳಲ್ಲಿ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದು ಆರೋಗ್ಯಕರ ಬೆಳವಣಿಗೆ ಇದೇ ಸಂದರ್ಭದಲ್ಲಿ ಆರೋಗ್ಯ ಅಧಿಕಾರಿ ರಾಜೇಶ್ವರಿ, ಬೇರು ಫೌಂಡೇಶನ್ ಅಧ್ಯಕ್ಷರಾದ ಮಧು ಎನ್, ಪ್ರಧಾನ ಕಾರ್ಯದರ್ಶಿಗಳಾದ ಜೈ ಅರ್ಜುನ್, ಸುಚೇಂದ್ರ, ಹರೀಶ್ ಹಾಗೂ ಇನ್ನಿತರರು ಹಾಜರಿದ್ದರು