ಪೌರ ಕಾರ್ಮಿಕರಿಗೆ ಆಹಾರ ಧಾನ್ಯ ವಿತರಣೆ

ಕಲಬುರಗಿ:ಜೂ.9: ಲಾಕ್ ಡೌನ್ ಸಂಕಷ್ಟ ಸಮಯದಲ್ಲಿರುವ ಪೌರ ಹಾಗೂ ಕಟ್ಟಡ ಕಾರ್ಮಿಕರಿಗೆ ನಗರದ ನ್ಯೂ ಘಾಟಗೆ ಲೇ ಔಟ್ ಬಡಾವಣೆಯಲ್ಲಿ ಸಿದ್ಧಾರ್ಥ ಪ್ರಕಾಶನ ವತಿಯಿಂದ ಇಂದು ಬೆಳಿಗ್ಗೆ ಆಹಾರ ಧಾನ್ಯಗಳ ಕಿಟ್‍ಗಳನ್ನು ವಿತರಿಸಲಾಯಿತು. ಸಾಹಿತಿ ಡಾ ಕೆ ಎಸ್ ಬಂಧು ಸಿದ್ದೇಶ್ವರಕರ ಅವರ ನೇತೃತ್ವದಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಕಿಟ್‍ಗಳನ್ನು ವಿತರಿಸಲಾಯಿತು. ಲಾಕ್ ಡೌನ್ ನಿಯಮಗಳನ್ನು ಪಾಲಿಸಿ ನಗರದ ಸ್ವಚ್ಛತೆ ಕಾರ್ಯದಲ್ಲಿ ತೊಡಗಿಸಿ ಕೊಂಡ ಕಾರ್ಯ ನಿರ್ವಹಿಸುತ್ತಿರುವ ಪೌರ ಹಾಗು ಕಟ್ಟಡ ಕಾರ್ಮಿಕರು, ಜನಪದ ಕಲಾವಿದರಿಗೆ ಸೂಕ್ತ ಪರಿಹಾರ ಧನವನ್ನು ಮಂಜೂರು ಮಾಡಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.
ಈ ದಿಸೆಯಲ್ಲಿ ಕಷ್ಟದಲ್ಲಿರುವ ಬಡ ಕೂಲಿ ಕಾರ್ಮಿಕರು ಹಾಗೂ ಅಸಂಘಟಿತ ವಲಯದ ಜನರನ್ನು ಗುರುತಿಸಿ ಸಮಾಜವು ನೆರವಾಗಬೇಕಾಗಿದೆ ಎಂದರು.
ವರ ಜ್ಯೋತಿ ಬಂತೇಜಿ ಅಣದೂರ ಅವರು, ಕರೋನಾ ಸೋಂಕಿನಿಂದ ಬಳಲುತ್ತಿರುವ ಜನರಿಗೆಇಂದು ಆಮ್ಲಜನಕದ ಕೊರತೆ ಎದುರಾಗಿದೆ. ನಾವೆಲ್ಲ ಮನೆ ಮುಂದೆ, ಶಾಲಾ ಆವರಣದಲ್ಲಿ ಮತ್ತು ರಸ್ತೆ ಬದಿಗಳಲ್ಲಿ ಅರಳಿ ಮರಗಳು ಬೆಳೆಸಬೇಕು. ಗೌತಮ ಬುದ್ಧರು ಅರಳಿ ಮರದ ಕೆಳಗೆ ತಪಸ್ಸು ಮಾಡಿದರು ಎಂದು ಹೇಳಿದರು.
ಪತ್ರಕರ್ತರಾದ ಬಿ ವಿ ಚಕ್ರವರ್ತಿ, ಧರ್ಮಣ್ಣ ಎಚ್ ಧನ್ನಿ, ಡಾ ಶಂಕರರಾವ ಕಿಲ್ಲೇದಾರ, ಕಸಾಪ ಚುನಾವಣಾ ಅಭ್ಯರ್ಥಿ ಎ ಬಿ ಹೊಸಮನಿ, ಮಹಾದೇವಿ ಬಂಧು, ಸಿದ್ದಾರ್ಥ ರತ್ನ, ಸುನೀಲ ರತ್ನ, ಸುಮೇದ ರತ್ನ, ಬಡಾವಣೆಯ ಮುಖಂಡ ನಿಂಗಪ್ಪ ತೆಂಗಳಿ ಸೇರಿದಂತೆ ಅನೇಕ ಗಣ್ಯರು ಉಸ್ಥಿತಸರಿದ್ದರು.
ಇಏ ಸಂದರ್ಭದಲ್ಲಿ ಆಹಾರ ಧಾನ್ಯ ಕಿಟ್, ಮಾಸ್ಕ್ ಹಾಗೂ ಸ್ಯಾನಿಟೈಜರಗಳನ್ನು ವಿತರಿಸಲಾಯಿತು.