ಪೌರಾಯುಕ್ತ ಗುರುಸಿದ್ದಯ್ಯ ವರ್ಗಾವಣೆ ಆದೇಶ

ರಾಯಚೂರು,ಫೆ.೧೭- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರಸಭೆ ಪೌರಯುಕ್ತ ಗುರುಸಿದ್ಧಯ್ಯ ಅವರನ್ನು
ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಗಳಾದ ಜೆ.ತಿರುಮಲಾಚಾರ್ ಅವರು ವರ್ಗಾವಣೆ ಮಾಡಿ ಆದೇಶಿದ್ದಾರೆ.
ಈ ಸ್ಥಾನಕ್ಕೆ ರಾಣೆಬೆನ್ನೂರಿನ ನಗರಸಭೆ ಪೌರಾಯುಕ್ತರಾದ ನಿಂಗಪ್ಪ ಎಚ್ ಕುಮ್ಮಣ್ಣನವರ್ ವರ್ಗಾಯಿಸಿ ಆದೇಶಿಸಲಾಗಿದೆ. ಭಾರತ ಚುನಾವಣಾ ಆಯೋಗದ ಸೂಚನೆ ಮೇರೆಗೆ ನಗರಸಭೆ ಪೌರಾಯುಕ್ತರಾದ ಗುರುಸಿದ್ದಯ್ಯ ಅವರು ಸೇರಿದಂತೆ ಒಟ್ಟು ೧೩ ನಿರ್ದೇಶಕರು ಮತ್ತು ಪೌರಾಯುಕ್ತರನ್ನು ವರ್ಗಾವಣೆ ಮಾಡಲಾಗಿದೆ.
ಸ್ವಂತ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಮೂರು ವರ್ಷಕ್ಕೂ ಮೇಲ್ಪಟ್ಟು ಒಂದೇ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಾಡಳಿತ ಇಲಾಖೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಯೋಜನಾ ನಿರ್ದೇಶಕರು,ನಗರಸಭೆಯ ಪೌರಾಯುಕ್ತರ ವರ್ಗಾವಣೆ ಮಾಡಲಾಗಿದೆ.
ಪೌರಾಯುಕ್ತರಾದ ಗುರುಸಿದ್ದಯ್ಯ ಅವರಿಗೆ ನಗರಾಭಿವೃದ್ಧಿ ಇಲಾಖೆಯಿಂದ ಯಾವುದೇ ಸ್ಥಳ ಸೂಚಿಸದೆ ಇರುವುದರಿಂದ ಮುಂದಿನ ಸ್ಥಳ ಸೂಚನೆ ಆದೇಶದವರೆಗೆ ಸಾಕ್ಷಿಮ ಪ್ರಾಧಿಕಾರಕ್ಕೆ ವರದಿ ಮಾಡಿಕೊಳ್ಳುವಂತೆ ಆದೇಶಿಸಲಾಗಿದೆ.
ಗುರುಸಿದ್ದಯ್ಯ ವರ್ಗಾವಣೆಯಿಂದ ತೆರವಾದ ರಾಯಚೂರು ನಗರಸಭೆ ರಾಣೆಬೆನ್ನೂರು ಪೌರಾಯುಕ್ತರಾದ ನಿಂಗಣ್ಣ ಹೆಚ್ಚು ಕುಮ್ಮಣ್ಣನವರ್ ಅವರನ್ನು ವರ್ಗಾಯಿಸಲಾಗಿದೆ.
ನಗರಸಭೆ ಪೌರಾಯುಕ್ತರಾಗಿ ಗುರುಸಿದ್ಧಯ್ಯ ಅವರು ವರ್ಗಾವಣೆಗೊಂಡಂದಿನಿಂದ ಅವರ ಬಗ್ಗೆ ನಗರಸಭೆ ಸದಸ್ಯರು ಸೇರಿದಂತೆ ಕೆಲ ನಗರಸಭೆ ಕಾರ್ಯ ಚಟುವಟಿಕೆಗಳ ಅವರ ನಿರ್ಧಾರಗಳ ಬಗ್ಗೆ ತೀವ್ರ ಅಸಮಾಧಾನವಿದ್ದು ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯವರಾದ ಗುರುಸಿದ್ದಯ್ಯ ಅವರನ್ನು ವರ್ಗಾಯಿಸುವಂತೆಯೂ ಅವರು ಚುನಾವಣಾ ಆಯೋಗಕ್ಕೆ ಮುಖಂಡರು ಒತ್ತಾಯಿಸಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೊನೆಗೂ ಅವರ ವರ್ಗಾವಣೆ ಆದೇಶ ಹೊರಬಿದ್ದಿದ್ದು, ಅಲ್ಪ ಅವಧಿಯಲ್ಲಿ ನಗರಸಭೆ ಮತ್ತೊಬ್ಬ ಹೊಸ ಆಯುಕ್ತರ ಆಡಳಿತನ್ನು ವಹಿಸಿಕೊಳ್ಳಲಿದ್ದಾರೆ.