ಪೌರನೌಕರರಿಗೆ ಉಪಹಾರ ವಿತರಣೆ

ಜಗಳೂರು.ಮೇ.೧;  ಸಮಾಜದ ಸ್ವಚ್ಚತೆಗಾಗಿ ದಿನವಿಡಿ ದುಡಿಯುವ ಕಾರ್ಮಿಕ ವರ್ಗಕ್ಕೆ ನ್ಯಾಯಯುತ ಸಂಬಳ ಸಿಗಬೇಕಿದೆ ಎಂದು ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಪಿ.ರೇವಣ್ಣ ಹೇಳಿದರು 

ಕಾರ್ಮಿಕ ದಿನಾಚರಣೆ ಅಂಗವಾಗಿ ಇಂದು ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ವತಿಯಿಂದ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರಿಗೆ ಉಚಿತ ಮಾಸ್ಕ್ ಕುಡಿಯುವ ನೀರು ಉಪಹಾರ ವಿತರಿಸಿ ಮಾತನಾಡಿದರು ರಾಜ್ಯದ ಎಲ್ಲೆಡೆ ಕೊರೋನಾ ಮಹಾಮಾರಿ ವ್ಯಾಪಕವಾಗಿ ಹಬ್ಬಿದ್ದು ಜನರ ಹಿತಕ್ಕಾಗಿ ಪ್ರಾಣದ ಹಂಗು ತೊರೆದು ಕನಿಷ್ಠ ವೇತನ ಪಡೆಯುವ ಮೂಲಕ ಸಮಾಜದ ಕೊಳೆಯನ್ನು ತೊಳೆಯುತ್ತಿರುವ ಕಾರ್ಮಿಕ ವರ್ಗಕ್ಕೆ ನಮ್ಮ ಅಳಿಲು ಸೇವೆ ಮಾಡುವ ಮೂಲಕ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ ಸದಾ ಸಾಮಾಜಿಕ ನ್ಯಾಯದ ಪರವಾಗಿ ಶ್ರಮಿಕ ವರ್ಗದ ಸೌಲಭ್ಯಕ್ಕಾಗಿ ಕಾಂಗ್ರೆಸ್ ಕಾರ್ಮಿಕ ಘಟಕ ಸದಾ ಸಿದ್ದವಿದೆ ಎಂದರು
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜು ಬಣಕಾರ್ ಮಾತನಾಡಿ ಬಿಸಲಿ ಮಳೆ ಎನ್ಮದೆ ಮಾರಕ ರೋಗದ ಭಯದ ಹಂಗುತೊರೆದು ದಿನ ನಿತ್ಯ ದುಡಿಯುತ್ತಿರುವ ಪೌರ ಕಾರ್ಮಿಕರ ಬಗ್ಗೆ ಹಲವು ಸಂಘ ಸಂಸ್ಥೆಗಳು ರಾಜಕೀಯ ಪಕ್ಷಗಳು ಅವರ ನೆರವಿಗೆ ದಾವಿಸುವ ಮೂಲಕ ಸಹಾಯ ಮಾಡುತ್ತಿರುವುದು ನಾಗರೀಕ ಸಮಾಜದ ಉತ್ತಮ ಬೆಳವಣಿಗೆ ಯಾಗಿದೆ ಇದೇರೀತಿ ಸಾರ್ವಜನಿಕರ ಸಹಕಾರ ಇದ್ದರೆ ಪೌರ ಕಾರ್ಮಿಕರು ಉತ್ತಮ ರೀತಿಯಲ್ಲಿ ಕೆಲಸ ಮಾಡಲಿದ್ದಾರೆ ಎಂದರು 
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಕಂದಾಯಾದಿಕಾರಿ ಸಂತೋಷ್ ಆರೋಗ್ಯಾಧಿಕಾರಿ ಕಿಪಾಯತ್  ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ ಎಸ್ಟಿ ಘಟಕ ಅಧ್ಯಕ್ಷ ಬಿ.ಲೋಕೇಶ್ ಯುವ ಕಾಂಗ್ರೆಸ್ ಅಧ್ತಕ್ಷರು ಎನ್.ಟಿ.ತಿಪ್ಪೇಸ್ವಾಮಿ ವಿಜಯ್ ಕೆಂಚೋಳ್  ಕಾರ್ಮಿಕ ಕಾಂಗ್ರೆಸ್ ಘಟಕ ಉಪಾದ್ಯಕ್ಷ. ರೇಣುಕೇಶ್ ಕಾರ್ಯದರ್ಶಿ ಕರಿಯಣ್ಣ ಮುಖಂಡರಾದ ಆದರ್ಶ ಬೊಮ್ಮಲಿಂಗ ನಾಗೇಶ್ ರಮೇಶ್ ಜಿ.ಈ. ಅಕ್ಷಯ್  ಸೇರಿದಂತೆ ಹಲವರು ಇದ್ದರು