ಪೌರತ್ವ ತರಬೇತಿ ಶಿಬಿರ: ಸಸಿ ನೆಟ್ಟ ಶಿಬಿರಾರ್ಥಿಗಳು

ಗಂಗಾವತಿ ಏ 01 : ತಾಲ್ಲೂಕಿನ ಬಸವನದುರ್ಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲ್ಮಠ ಶಿಕ್ಷಕರ ತರಬೇತಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಪೌರತ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಅಗ್ನಿ ಶಾಮಕ ಇಲಾಖೆಯ ಮಂಜುನಾಥ ಅವರು ವ್ಯಕ್ತಿತ್ವ ವಿಕಸನ ಬಗ್ಗೆ ಉಪನ್ಯಾಸ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟೇಶ್ ಬಾಬು, ಹುಲಿಗೆಮ್ಮ, ರಾಜಶೇಖರ್ ಅವರನ್ನು ಸನ್ಮಾನಿಸಲಾಯಿತು.
ಇದಕ್ಕೂ ಮೊದಲು ಶಿಬಿರಾರ್ಥಿಗಳು ಶಾಲಾ ಆವರಣ ಸ್ವಚ್ಛತೆ , ವಿವಿಧೆಡೆ ಸಸಿ ನೆಡಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ವೇಳೆ ಕಲ್ಮಠ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಬಿ.ಎಂ.ಲೋಕೇಶ್, ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಛತ್ರಪ್ಪ, ಪ್ರಮುಖರಾದ ಚನ್ನಬಸವಸ್ವಾಮಿ, ಕೆ.ಕಾಳಪ್ಪ, ಮೌನೇಶ್, ಶಿಬಿರದ ನಿರ್ದೇಶಕ ಮಂಜುನಾಥ, ಕೆ.ಎಚ್.ಕೊಳ್ಳನ್ನವರ, ಯು.ಎಂ.ಬಸವರಾಜ, ಬಸವರಾಜಪ್ಪ ಹಾಗೂ ಶಿಬಿರಾರ್ಥಿಗಳು ಇದ್ದರು.