ಪೌರತ್ವ ಕಾಯ್ದೆ ಸಿಂಧುತ್ವ ಪರಿಶೀಲನೆಗೆ ಸುಪ್ರೀಂ ಅಸ್ತು

ನವದೆಹಲಿ,ಜ.೧೧-ಅಸ್ಸಾಂನಲ್ಲಿ ಅಕ್ರಮ ವಲಸಿಗರಿಗೆ ಸಂಬಂಧಿಸಿದ ಪೌರತ್ವ ಕಾಯ್ದೆಯ ಕಲಂ ೬ಎ ಸಾಂವಿಧಾನಿಕ ಸಿಂಧುತ್ವ ಪರಿಶೀಲಿಸಲು ಸುಪ್ರೀಂ ಕೋರ್ಟ್ ಸಮ್ಮತಿ ನೀಡಿದೆ.ಈ ವಿಷಯದ ಕುರಿತು ಸಲ್ಲಿಸಲಾದ ಸಂಪೂರ್ಣ ಅರ್ಜಿಗಳ ಸ್ಕ್ಯಾನ್ ಮಾಡಿದ ಸಾಫ್ಟ್ ಕಾಪಿಗಳನ್ನು ನೀಡುವಂತೆ ರಿಜಿಸ್ಟಾರ್ ಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ೨೦೦೯ರಲ್ಲಿ ಅಸ್ಸಾಂ ಪಬ್ಲಿಕ್ ವರ್ಕ್ಸ್ ಸಲ್ಲಿಸಿದ್ದ ಅರ್ಜಿ ಸೇರಿದಂತೆ ೧೭ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇವೆ.ಶಿವಸೇನೆ ಪಕ್ಷದ ವಿಭಜನೆಯ ಅರ್ಜಿ ಕೈಗೆತ್ತಿಕೊಂಡ ಬಳಿಕ ಪೌರತ್ವ ಕುರಿತ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು . ಅಸ್ಸಾಂ ಒಪ್ಪಂದಕ್ಕೆ ಒಳಪಡುವ ಜನರ ಪೌರತ್ವವನ್ನು ವ್ಯವಹರಿಸಲು ವಿಶೇಷ ನಿಬಂಧನೆಯಾಗಿ ಪೌರತ್ವ ಕಾಯ್ದೆಯಲ್ಲಿ ಸೆಕ್ಷನ್ ೬ಎ ಅನ್ನು ಸೇರಿಸಲಾಗಿತ್ತು ೧೯೬೬ ರ ಜನವರಿ ೧ ರಂದು ಅಥವಾ ನಂತರ ಅಸ್ಸಾಂಗೆ ಬಂದವರು ಆದರೆ , ೧೯೭೧ ರ ಮಾರ್ಚ್ ೨೫ ರ ಮೊದಲು ಬಾಂಗ್ಲಾದೇಶ ಸೇರಿದಂತೆ ನಿರ್ದಿಷ್ಟ ಪ್ರದೇಶಗಳಿಂದ ಬಂದವರು, ೧೯೮೫ ರಲ್ಲಿ ತಿದ್ದುಪಡಿ ಮಾಡಿದ ಪೌರತ್ವ ಕಾಯ್ದೆಯ ಪ್ರಕಾರ ಮತ್ತು ಅಂದಿನಿಂದ ಅಸ್ಸಾಂನ ನಿವಾಸಿಗಳು ತಮ್ಮನ್ನು ನೋಂದಾಯಿಸಿಕೊಳ್ಳಬೇಕು. ಪೌರತ್ವಕ್ಕಾಗಿ ಸೆಕ್ಷನ್ ೧೮ ರ ಅಡಿಯಲ್ಲಿ ಸೇರಿಸಲಾಗಿತ್ತು. ಅಸ್ಸಾಂನಲ್ಲಿ ಬಾಂಗ್ಲಾದೇಶಿ ವಲಸಿಗರಿಗೆ ಪೌರತ್ವ ನೀಡಲು ೧೯೭೧ ರ ಮಾರ್ಚ್ ಮಾರ್ಚ್ ೨೫ರಂದು ಕಟ್-ಆಫ್ ದಿನಾಂಕವನ್ನು ನಿಗದಿಪಡಿಸುತ್ತದೆ. ಆರಂಭದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ವಿಚಾರಣೆ ನಡೆಸಲು ಮುಂದಾಗಿದೆ.
“ಪೌರತ್ವ ಕಾಯಿದೆಯ ಸೆಕ್ಷನ್ ೬ಎ ಯಾವುದೇ ಸಾಂವಿಧಾನಿಕ ದೌರ್ಬಲ್ಯದಿಂದ ಬಳಲುತ್ತಿದೆಯೇ” ಎಂದು ಪೀಠ ಪ್ರಶ್ನಿಸಿದೆ.ಒಂದು ಸಮಸ್ಯೆ ನಂತರ ಇತರ ಸಮಸ್ಯೆಗಳನ್ನು ಉದ್ಬವಿಸುವುದನ್ನು ತಡೆಯುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂಆರ್ ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠ ಹೇಳಿದೆ.ಅರ್ಜಿದಾರರು ಮೊದಲು ವಾದವನ್ನು ಕೇಂದ್ರ ಸರ್ಕಾರ ಮತ್ತು ನಂತರ ಮಧ್ಯಸ್ಥಗಾರರು ಮತ್ತು ಇತರರು ತಮ್ಮ ಸಲ್ಲಿಕೆಗಳನ್ನು ಮುಂದಿಡಬಹುದು ಎಂದು ಪೀಠ ಹೇಳಿದೆ. “ಅಸ್ಸಾಂನಲ್ಲಿ ಅಕ್ರಮ ವಲಸಿಗರಿಗೆ ಸಂಬಂಧಿಸಿದ ಪೌರತ್ವ ಕಾಯ್ದೆಯ ಸೆಕ್ಷನ್ ೬ಎ ಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳ ಬ್ಯಾಚ್‌ನಲ್ಲಿ ತೀರ್ಪು ನೀಡಲು ಸಮಸ್ಯೆಗಳನ್ನು ನಿರ್ಧರಿಸಲು ಡಿಸೆಂಬರ್ ೧೩ ರಂದು ಸುಪ್ರೀಂ ಕೋರ್ಟ್ ಪ್ರತಿವಾದಿ ಪಕ್ಷಗಳ ವಕೀಲರನ್ನು ಕೇಳಿದೆ.