ಪೌರಕಾರ್ಮೀಕರ ಆರೋಗ್ಯ ತಪಾಸಣೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.05: ನಗರವನ್ನು ನಿತ್ಯ ಸ್ವಚ್ಚಗೊಳಿಸುವ ನಗರಸಭೆಯ ಪೌರಕಾರ್ಮೀಕರ ಆರೋಗ್ಯ ಸರಿಯಾಗಿದ್ದಾರೆ ನಗರವನ್ನು ಆರೋಗ್ಯವಾಡಲು ಸಾಧ್ಯವಾಗುತ್ತದೆ ಎಂದು ಪೌರಾಯುಕ್ತ ಕೆ.ಜೀವನ್ ಕುಮಾರ್ ಹೇಳಿದರು.
ನಗರದ ನಗರಸಭೆ ಕಛೇರಿಯಲ್ಲಿ ಪೌರಕಾರ್ಮಿಕರ ಆರೋಗ್ಯ ತಪಾಸಣ ಶಿಬಿರ ಮತ್ತು ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮದ ಪೋಸ್ಟರ್ನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಡಾ.ಜಗದೀಶ ಪಾಟೀಲ್ ಮಾತನಾಡಿ ಪೌರಕಾರ್ಮಿಕರು ಪ್ರತಿನಿತ್ಯ ನಗರ ಸ್ವಚ್ಛತೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಅವರಿಗೆ ಸೂಕ್ತ ಸ್ವಚ್ಛತಾ ರಕ್ಷಣ ಪರಿಕರಗಳನ್ನು ಬಳಸಬೇಕು, ಇದರಿಂದ ಅನೇಕ ರೋಗ ಬರುವುದನ್ನು ತಡೆಯಬಹುದಾಗಿದೆ ಎಂದು ತಿಳಿಸಿದರು.
 ಹಿರಿಯ ಚಿಕಿತ್ಸಾ ಮೇಲ್ವಿಚಾರಕರಾದ ಈರಣ್ಣ ನಾಯಕ, ಆನಂದ ಅಬ್ಬಿಗೇರಿ, ಪ್ರಯೋಗಾಲಯ ತಂತ್ರಜ್ಞರಾದ ಜಯಲಕ್ಷ್ಮಿ, ಜಯಂತಿ, ಜ್ಯೋತಿ, ಬೇಬಿ, ಹಿರಿಯ ಆರೋಗ್ಯ ನಿರೀಕ್ಷಕ ಹೆಚ್.ರಂಗಸ್ವಾಮಿ ಇದ್ದರು.