ಪೌರಕಾರ್ಮಿಕರ ಹುದ್ದೆಗಳ ಭರ್ತಿಗೆ ರಾಜ್ಯಪತ್ರ ಪ್ರಕಟಿಸಲು ಸಚಿವರಿಗೆ ಮನವಿ

ರಾಯಚೂರು,ಅ.೨೯- ೧೧೩೩೮ ಪೌರಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡಲು ಕೂಡಲೇ ಅಂತಿಮ ರಾಜ್ಯಪತ್ರ ಪ್ರಕಟಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವಾ ನೌಕರರ ಸಂಘ ಮುಖಂಡರು ಪೌರಾಡಳಿತ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಹಿಸಿದರು.
೩೬೪ ಪೌರಕಾರ್ಮಿಕರ ಮಂಜೂರಾದ ಹುದ್ದೆಗಳೆಂದು ಪರಿಗಣಿಸಲು ರಾಯಚೂರು ನಗರಸಭೆಗೆ ಆದೇಶಿಸಬೇಕು.ರಾಜ್ಯದಲ್ಲಿರುವ ಎಲ್ಲಾ ವಾಹನ ಚಾಲಕರನ್ನು ಕೂಡಲೇ ಖಾಯಂಗೊಳಿಸಬೇಕು.ಮರಣಹೊಂದಿದ ೫ ಜನ ನಿವೃತ್ತಿ ಹೊಂದಿದ ೩ ಜನ ನೇರವೇತನ ಪೌರಕಾರ್ಮಿಕರ ಕುಟುಂಬಗಳಿಗೆ ನಷ್ಟ ಪರಿಹಾರ ಮತ್ತು ಅವರ ಕುಟುಂಬಗಳಿಗೆ ಉದ್ಯೋಗ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ನಗರಸಭೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ ಪೌರಕಾರ್ಮಿಕರ ಮಂಜೂರಾದ ಹುದ್ದೆಗಳು ೩೬೪ ಇರುತ್ತವೆ. ಆದರೆ ನಗರಸಭೆ ರಾಯಚೂರು ಇವರು ಸರ್ಕಾರಕ್ಕೆ ೨೨೫ ಮಂಜೂರಾದ ಹುದ್ದೆಗಳೆಂದು ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ.೧೬೨ ಖಾಯಂ ಪೌರಕಾರ್ಮಿಕರು , ೨೭೫ ನೇರವೇತನ ಪೌರಕಾರ್ಮಿಕರೆಂದು ಪರಿಗಣಿಸಿದರೆ ( ಅನಧಿಕೃತ , ಕೆಲಸ ಮಾಡದ , ೨೦ ಜನ ನಕಲ ಪೌರಕಾರ್ಮಿಕರನ್ನು ಹೊರತುಪಡಿಸಿದರೆ ನಿಜವಾದ ಖಾಯಂ ೨೦೦ ಪೌರಕಾರ್ಮಿಕರ ಸಂಖ್ಯೆ ೮೦ ಇರುತ್ತದೆ ) ಇನ್ನೂ ೨೦೨ ಹುದ್ದೆಗಳು ಖಾಲಿ ಇದ್ದು , ಈಗ ಸರ್ಕಾರ ತೆಗೆದುಕೊಂಡ ೧೧೩೩೮ ಪೌರಕಾರ್ಮಿಕರ ಖಾಯಂ ಪ್ರಕ್ರಿಯೆಯಲ್ಲಿ ನೇರವೇತನ ಪೌರಕಾರ್ಮಿಕರು ಖಾಯಂಗೊಳ್ಳುತ್ತಾರೆ. ಒಂದು ವೇಳೆ ೨೨೫ ಮಂಜೂರಾದ ಹುದ್ದೆಗಳನ್ನು ಪರಿಗಣಿಸಿದರೆ ಕೇವಲ ೬೦ ನೇರವೇತನ ಪೌರಕಾರ್ಮಿಕರು ಮಾತ್ರ ಖಾಯಂಗೊಂಡು ಸುಮಾರು ೧೪೦ ಪೌರಕಾರ್ಮಿಕರು ಖಾಯಂ ಆಗದೇ ವಂಚಿತಗೊಳ್ಳುತ್ತಾರೆ.ನಗರಸಭೆ ರಾಯಚೂರು ಪೌರಾಯುಕ್ತರು,ಪರಿಸರ ಅಭಿಯಂತರರಿಗೆ ಹಲವು ಬಾರಿ ಮನವಿ ಪತ್ರಗಳನ್ನು ನೀಡಿದರೂ ಪೌರಕಾರ್ಮಿಕರು ಖಾಯಂಗೊಳ್ಳಬಾರದು ಎಂಬ ದುರುದ್ದೇಶದಿಂದ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.ಮಂಜೂರಾದ ಪೌರಕಾರ್ಮಿಕರ ಹುದ್ದೆಗಳೆಂದು ಪರಿಗಣಿಸಲು ರಾಯಚೂರು ನಗರಸಭೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಎಸ್.ಮಾರೆಪ್ಪ ವಕೀಲರು, ಜಿಲ್ಲಾಧ್ಯಕ್ಷ ಉರುಕುಂದಪ್ಪ,ಆರ್.ಹನುಮಂತು,ಶ್ರೀನಿವಾಸ ಕಲವಲದೊಡ್ಡಿ, ಅಬ್ರಹಾಂ ಕಮಲಾಪೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.