ಪೌರಕಾರ್ಮಿಕರ ಸೇವೆ ಪವಿತ್ರ ಸೇವೆ: ಪಾಪಣ್ಣ ಮನ್ನೆ

ಗುರುಮಠಕಲ್:ಸೆ.24: ಪಟ್ಟಣದ ಪುರಸಭೆ ಕಾರ್ಯಾಲಯ ದಲ್ಲಿ ಗುರುವಾರ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ ಗುರುಮಠಕಲ್ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಯ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ರಾದ ಪಾಪಣ್ಣ ಮನ್ನೆ ಅವರು ಮಾತನಾಡಿ ನಮ್ಮ ದೇಶದಲ್ಲಿ ಕೊರೋನ ವೆಂಬ ಸಾಂಕ್ರಾಮಿಕ ಸೊಂಕು ಇರುವಾಗ ಲು ಪೌರಕಾರ್ಮಿಕರು ಮುಂಚುಣಿ ಯಲ್ಲಿದ್ದು. ಪಟ್ಟಣದಲ್ಲಿ ರಸ್ತೆಯಲ್ಲಿ ರುವ ಸ್ವಚ್ಚ ತೆಯ ಬಗ್ಗೆ ಸೇವೆ ಸಲ್ಲಿಸಿದ್ದು ಮತ್ತು ಪರಿಸರ ಸ್ವಚ್ಛತೆ ಯ ಬಗ್ಗೆ ಅದೆರೀತಿಯಾಗಿ ಪಟ್ಟಣವನ್ನು ಸುಂದಗೂಳಿಸುವಲ್ಲಿ ಅವರು ಸೇವೆ ಮೆಚ್ಚು ವಂತದ್ದು ಪೌರಕಾರ್ಮಿಕರ ಸೇವೆ ಬಹಾಳ ಪವಿತ್ರ ವಾದದ್ದು.ಈ ಸಂರ್ದಭದಲ್ಲಿ ಅವರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.ಈ ಸಂದರ್ಭದಲ್ಲಿ ಪುರಸಭೆ ಯ ಮುಖ್ಯಾಧಿಕಾರಿ. ತಹಶೀಲ್ದಾರ್ ಶರಣ ಬಸವ ರಾಮಪ್ಪ.ಆರೋಗ್ಯ ವೈದ್ಯಾಧಿಕಾರಿ ಡಾ.ಶಿವಪ್ರಸಾದ ಮೈತ್ರಿ. ಮಾತನಾಡಿ ದರು.ಗುರುಮಠಕಲ್ ಪೌರಕಾರ್ಮಿಕರ ಅಧ್ಯಕ್ಷ ರಾದ ಪರಶುರಾಮ.ಗೌರವ ಅಧ್ಯಕ್ಷ ರಾದ ಪ್ರಾಶಂತ. ಉಪಾಧ್ಯಕ್ಷ ರಾದ ಭೀಮಪ್ಪ.ಪುರಸಭೆ ಉಪಾಧ್ಯಕ್ಷ ರಾದ ಬೀಮಮ್ಮ ಮುಕಡಿ. ಮಲ್ಲಿಕಾರ್ಜುನ.ರಾಮುಲುಗೌಡ.ಬಸಪ್ಪ.ಆಶೋಕ.ನರಸಿಂಹಲು.ಪುರಸಭೆಯ ಸದಸ್ಯರಾದ ಪಾಪಿರೆಡ್ಡಿ.ಕೃಷ್ಣ ಮೇದ.ಬಾಬು ತಲಾರಿ.ಬಾಲು ದಾಸರಿ.ಪಾಯಜ್ ಅಹ್ಮದ್.ನರೇಶ್ ಗೋಂಗ್ಲೆ.ಅಂಬದಾಸ್ ಜೀತ್ರೆ ಪೌರಕಾರ್ಮಿಕರು ಇತರರು ಉಪಸ್ಥಿತರಿದ್ದರು.