ಪೌರಕಾರ್ಮಿಕರ ಶ್ರಮ ಶ್ಲಾಘನೀಯ

ಜಗಳೂರು.ಸೆ.೨೩;  ಮನುಷ್ಯ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಕೀಳು ವೃತ್ತಿಎಂಬ ವರ್ಣಬೇಧನೀತಿಗಳನ್ನು ಪಾಲಿಸದೆ ಜಾತ್ಯಾತೀತವಾಗಿ  ಸಮಾನತೆ ಕಾಣಬೇಕು ಎಂದು ನಗರ ಕೋಶ ಅಭಿವೃದ್ಧಿ ಯೋಜನಾಧಿಕಾರಿ ನಜ್ಮಾ ಹೇಳಿದರು.
 ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಯನ್ನು ಉದ್ಘಾಟಿಸಿ ಅವರು. ಮಾತನಾಡಿದರು.ಯಾರೂ ಸ್ಪರ್ಶಿಸದ  ತ್ಯಾಜ್ಯ ವಸ್ತುಗಳನ್ನು ಕೈಯಿಂದ ಮುಟ್ಟಿ ತಾಳ್ಮೆಯಿಂದ ಸ್ವಚ್ಛಗೊಳಿಸುವ ಶಕ್ತಿ ಅವರಲ್ಲಿದೆ.ನಗರದಲ್ಲಿ ಆರೋಗ್ಯ ಕಾಪಾಡಿಕೊಂಡು ಕೀಳು ಮಟ್ಟದಲ್ಲಿ ಕಂಡರೇ ಅಹಿತಕರ ಘಟನೆಗೆ ಕಾರಣವಾಗುತ್ತವೆ ನಮಗೋಸ್ಕರ ಅವರು ಎಂಬ ಭಾವನೆ‌ ಹೊಂದಿದರೆ ಸಮಾನತೆ ಸಾಧ್ಯ ಎಂದರು.
ಎ.ಇ.ಇ ಪ್ರಸನ್ನಕುಮಾರ್ ಮಾತನಾಡಿ,ಕೊರೊನ ಸೊಂಕು ಆಕ್ರಮಣದ ವೇಳೆ ವೈಯಕ್ತಿಕ ಆರೋಗ್ಯ ಲೆಕ್ಕಿಸದೆ ವಾರ್ಡ್ ಗಳಲ್ಲಿ ಸ್ವಚ್ಛ ಹಾಗೂ ಕೋವಿಡ್ ಮುಕ್ತವಾಗಿವೆ.ಪೌರಕಾರ್ಮಿಕರು ನಗರದ ಸ್ವಚ್ಛ ಸುಂದರವನ್ನಾಗಿಸುವ ಶಿಲ್ಪಿಗಳು ಅವರಿಗೆ ಮೂಲಸೌಕರ್ಯ,ಉಪಹಾರದ ವ್ಯವಸ್ಥೆ ಒದಗಿಸಲಾಗುತ್ತಿದೆ.ಮುಖ್ಯವಾಹಿನಿಗೆ ತರಲು ಪೌರಕಾರ್ಮಿಕ ದಿನಾಚರಣೆ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಪಟ್ಟಣ ಪಂಚಾಯತಿ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ ಪ್ರತಿನಿತ್ಯ ಬೆಳಿಗ್ಗೆ ಸ್ವಯಂಪ್ರೇರಿತವಾಗಿ ಸ್ವಚ್ಛತೆಯ ಕಾಯಕದಲ್ಲಿ ತೊಡಗಿ ಸಾರ್ವಜನಿಕರ ಆರೋಗ್ಯ ಕಾಪಾಡುತ್ತಿರುವುದು.ಸಾರ್ವಜನಿಕರು ವಾರ್ಡ್ ಗಳಲ್ಲಿ ಸೌಜನ್ಯತೆಯಿಂದ ವರ್ತಿಸಿ‌ಸಹಕರಿಸಬೇಕು ಅಹಿತಕರ ಘಟನೆಗೆ ಮುಂದಾಗಬಾರದು ಎಂದು ಸಲಹೆ ನೀಡಿದರು.ಪೌರ ಸೇವಾ ನೌಕರರ ರಾಜ್ಯಾಧ್ಯಕ್ಷ ಪ್ರಸಾದ್ ಮಾತನಾಡಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆಡಳಿತದ 2012‌‌ರಲ್ಲಿ ಪೌರಕಾರ್ಮಿಕರ ದಿನಾಚರಣೆ ಆಚರಿಸಲು ಆದೇಶಿಸಿದ್ದು ಇಂದಿಗೆ ದಶಮಾಮೋತ್ಸವ ಆಚರಿಸುತ್ತಿರುವುದು ಸಂತಸದ ಸಂಗತಿಯಾಗಿದೆ.ಪ್ರಸಕ್ತವಾಗಿ ರಾಜ್ಯದ  ಮುಖ್ಯಮಂತ್ರಿ ಬಸವರಾಜ್  ಬೊಮ್ಮಾಯಿ  ಅವರು  3,‌ಸಾವಿರದಿಂದ  7 ಸಾವಿರದವರೆಗೆ ವಿಶೇಷ ಭತ್ಯೆ ಹೆಚ್ಚಿಸಿರುವುದು ಅಬಿನಂದರಾರ್ಹ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಲಲಿತ ಶಿವಣ್ಣ,ಪೌರ ಸೇವಾ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಎ.ಕೆ.ಬಸವರಾಜ್
ಮುಖ್ಯಅಧಿಕಾರಿ  ಲೋಕ್ಯಾನಾಯ್ಕ,ಕಂದಾಯ ನಿರೀಕ್ಷಕ ಸಂತೋಷ್ ಕುಮಾರ್,ಆರೋಗ್ಯ ನಿರೀಕ್ಷಕ ಖಿಫಾಯತ್,ಪ.ಪಂ ಸದಸ್ಯರಾದ ನವೀನ್ಕುಮಾರ್,ದೇವರಾಜ್,ರೇವಣ್ಣ, ರಮೇಶ್. ಮಂಜುನಾಥ್.ಪಾಪಲಿಂಗಪ್ಪ,ಮಂಜಮ್ಮ, ನಾಮನಿರ್ದೇಶನ ಸದಸ್ಯರಾದ ರುದ್ರಮುನಿಿ. ಗಿರೀಶ್. ಮುಖಂಡರಾದ ಓಬಳೇಶ್. ಪಟ್ಟಣ ಪಂಚಾಯಿತಿ ಮತ್ತುಸಿಬ್ಬಂದಿಗಳು ಮತ್ತು ಎಲ್ಲಾ ಪೌರ ಕಾರ್ಮಿಕರು ಭಾಗವಹಿಸಿದ್ದರು