ಪೌರಕಾರ್ಮಿಕರ ಕಾರ್ಯ ಶ್ಲಾಘನೀಯವಾದದ್ದು- ಎಚ್ ವೆಂಕಟೇಶ್

ರಾಯಚೂರು.ಜೂ.೪-ಪ್ರಸ್ತುತ ಜಗತ್ತನ್ನೇ ಬೆಚ್ಚಿಬೀಳಿಸುತಿರುವ, ಕರೋನಾ ವೈರಸ್ಸಿನ ಎರಡನೇ ಅಲೆ ಭಯಂಕರವಾಗಿದೆ. ಇಂತಹ ಸಂದರ್ಭದಲ್ಲಿ ಕರೋನ ವಾರಿಯರ್ಸ್ ಆದ ಪೌರ ಕಾರ್ಮಿಕರ ನಿರಂತರ ಸ್ವಚ್ಛತೆಯ ಕಾರ್ಯ ಶ್ಲಾಘನೀಯವಾದದ್ದು. ಇಂತಹ ಸಂದರ್ಭದಲ್ಲಿ ನಗರದ ಜನ ಸೇವಾ ಟ್ರಸ್ಟ್ (ರೀ) ರಾಯಚೂರು ಇವರು ಪೌರಕಾರ್ಮಿಕರಿಗೆ ಅವರ ಆರೋಗ್ಯದ ಹಿತದೃಷ್ಟಿಯಿಂದ, ಫೇಸ್ ಶೀಲ್ಡ್, ಟಿ೯೫ ಮಾಸ್ಕ್ ಹಾಗೂ ಹಣ್ಣು ನೀಡುತ್ತಿರುವ ಕಾರ್ಯ ನಿಜಕ್ಕೂ ಸಂತೋಷ ಉಂಟು ಮಾಡಿದೆ.
ಎಂದು ನಗರಸಭೆಯ ಆಯುಕ್ತರಾದ ಎಚ್. ವೆಂಕಟೇಶರವರು ಸನ್ಮಾನ ಸ್ವೀಕರಿಸಿ . ಅವರು ಇಂದು ನಗರದ ಕರ್ನಾಟಕ ಸಂಘದಲ್ಲಿ ಜನ ಸೇವಾ ಟ್ರಸ್ಟ್ ರಾಯಚೂರು ಹಮ್ಮಿಕೊಂಡಿದ್ದ ಪೌರಾಯುಕ್ತರಿಗೆ ಸನ್ಮಾನ ಹಾಗೂ ಪೌರ ಕಾರ್ಮಿಕರಿಗೆ ಫೇಸ್ ಶೀಲ್ಡ್, ಟಿ೯೫ ಮಾಸ್ಕ್ ಹಾಗೂ ಹಣ್ಣು ವಿತರಣೆ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಪರಿಕರ ಮತ್ತು ಹಣ್ಣು ವಿತರಣೆ ಮಾಡಿ ಮಾತನಾಡಿದರು.
ಉಪನ್ಯಾಸಕರಾದ ಡಾ. ಜೆ ಎಲ್ ಈರಣ್ಣ ನವರು ಮಾತನಾಡುತ್ತ ಕೋವಿಡ್-೧೯ ರ ಹಿನ್ನಲೆಯಲ್ಲಿ ಕರೋನಾ ಮುಖ್ಯ ವಾರಿಯರ್ಸ್ ಆದ ಡಾಕ್ಟರ್ಸ್, ಪೊಲೀಸ್, ಪೌರಕಾರ್ಮಿಕರ ಹಾಗೂ ಆಡಳಿತದ ಇನ್ನಿತರ ಇಲಾಖೆಗಳ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು.ಅದರಲ್ಲಿ ಸ್ವಚ್ಛತೆಗಾಗಿ ಹಾಗೂ ಕರೋನ ಜೊತೆ ನೇರವಾಗಿ ಹೋರಾಟ ಮಾಡುತ್ತಿರುವ ಪೌರಕಾರ್ಮಿಕರಿಗೆ ಸರ್ಕಾರ ಇನ್ನೂ ಅನೇಕ ಸವಲತ್ತುಗಳನ್ನು ನೀಡಬೇಕೆಂದರು.
ಜನ ಸೇವಾ ಟ್ರಸ್ಟಿನ ಗೌರವ ಸಲಹೆಗಾರರಾದ ಜೆ. ರಾಮಪ್ಪನವರು ಮಾತನಾಡುತ್ತ ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ ತಮ್ಮ ಕಾರ್ಯ ನಿರ್ವಹಿಸಬೇಕೆಂದರು. ಜನ ಸೇವಾ ಟ್ರಸ್ಟಿನ ಇನ್ನೋರ್ವ ಗೌರವ ಸಲಹೆಗಾರರಾದ ಎ.ರಾಮುಲು ಮಾತನಾಡುತ್ತಾ ಕರೋನ ವಾರಿಯರ್ಸ್ ಆದ ಪೌರಕಾರ್ಮಿಕರಿಗೆ ಸರ್ಕಾರ ಆರೋಗ್ಯದ ಹಿನ್ನೆಲೆಯಲ್ಲಿ ವಿಶೇಷ ಸವಲತ್ತುಗಳನ್ನು ನೀಡಬೇಕೆಂದರು. ದಾನಿಗಳಾದ ಜೆ ಟಿ ಮಂಜುನಾಥ್, ಜೆ ಟಿ ಮನೋಜ್ ಕುಮಾರ್ (ಎಲ್‌ಐಸಿ) ಇವರು ಮಾತನಾಡುತ್ತಾ ನಮ್ಮ ತಂದೆ ತಾಯಿಯಾದ ದಿ: ಶ್ರೀಮತಿ ಕಮಲಮ್ಮ ದಿ :ತಿಮ್ಮಪ್ಪ ರಾಯಚೂರಕರ ನೆನಪಿನಾರ್ಥ ಸಹಾಯ ಮಾಡಲು ಅನುಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜನ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಟಿ. ಚಂದ್ರಶೇಖರ್ ಮಾತನಾಡುತ್ತಾ ನಮ್ಮ ಟ್ರಸ್ಟಿನಿಂದ ನಮ್ಮ ಇತಿಮಿತಿಯಲ್ಲಿ ಸಮಾಜಸೇವೆ ಸಲ್ಲಿಸುತ್ತಿದ್ದೇವೆ. ಹೋದ ಕರೋನಾ ಅಲೆಯಲ್ಲಿ ಕರುನಾ ವಾರಿಯರ್ ಗೆ ಹಣ್ಣು-ಹಂಪಲು ನೀಡಿದ್ದೆವು. ಅದರೊಂದಿಗೆ ಇತರ ಸೇವೆಗಳನ್ನು ಸಲ್ಲಿಸಿದ್ದೆವು. ಈಗ ನಮ್ಮ ಮುಂದೆ ಇರುವ ಕರೋನ ವಾರಿಯರ್ಸ್ ಪೌರಕಾರ್ಮಿಕರಿಗೆ ಸಹಕಾರ ಮಾಡಬೇಕೆಂದು ತಿಳಿದು ಈ ಕಾರ್ಯಕ್ರಮ ಹಮ್ಮಿ ಕೊಂಡಿದ್ದೆವು , ಅದರಲ್ಲಿ ಪೌರಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪೌರಾಯುಕ್ತ ರಿಂದ ಪರಿಕರಗಳನ್ನು ಸ್ವೀಕರಿಸಿದ್ದ ಕ್ಕಾಗಿ ತಮ್ಮೆಲ್ಲರಿಗೂ ಧನ್ಯವಾದಗಳು ಎಂದರು.
ವೇದಿಕೆ ಮೇಲೆ ನೈರ್ಮಲ್ಯ ನಿರೀಕ್ಷಕರಾದ ಡಿ. ಅಮರೇಶ್, ಶಿಕ್ಷಕರಾದ ಜೆ. ತಿಮ್ಮಯ್ಯ ಜನ ಸೇವಾ ಟ್ರಸ್ಟಿನ ಕಾರ್ಯದರ್ಶಿಯಾದ ಜೆ. ಎಲ್. ಗೋಪಿ, ಮಲ್ಲೇಶ್ ಗದಾರ್ ,ಜೆ. ಹನುಮಂತು, ಬಿ .ಗೋವಿಂದ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜೆ .ಎಸ್. ರಾಜೇಶ್, ಜೆ. ಟಿ .ಈರಣ್ಣ,ಜೆ .ಎ .ವೆಂಕಟೇಶ್, ಜೆ. ಎ .ಸಾಗರ, ಪ್ರೇಮ್ ಕುಮಾರ್, ಜಗದೀಶ್ ,ಟಿ .ಮಲ್ಲಿಕಾರ್ಜುನ್, ಶಿವಪ್ರಸಾದ್ ,ಜೆ .ಶಾಮ್, ಜೆ. ಪ್ರಶಾಂತ್, ಹಾಗೂ ನೈರ್ಮಲೀಕರಣ ವಿಭಾಗದ ಪ್ಯಾಕೇಜ್ ೫ ರ ದಫೇದಾರಗಳಾದ ಆರ್. ಹನುಮಂತು, ಆಂಜನೇಯ , ರಘುನಾಥ್ ಕಟ್ಟಿಮನಿ , ಜೆ. ರವಿಕುಮಾರ್ ಹಾಗೂ ಈ ವಿಭಾಗದ ಎಲ್ಲಾ ಪೌರಕಾರ್ಮಿಕರು ಭಾಗವಹಿಸಿದರು.
ಮೊದಲಿಗೆ ಹಿರಿಯರಾದ ಎ ರಾಮುಲುರವರು ಪ್ರಾರ್ಥನೆ ಮಾಡಿದರೆ, ಸ್ವಾಗತವನ್ನು ಮಲ್ಲೇಶ್ ಗದಾರ ಮಾಡಿದರು, ಪ್ರಾಸ್ತಾವಿಕ ನುಡಿಯನ್ನು ಜನ ಸೇವಾ ಟ್ರಸ್ಟಿನ ಕಾರ್ಯದರ್ಶಿಯಾದ ಜೆ. ಎಲ್ ಗೋಪಿ ನಿರ್ವಹಿಸಿದ್ದರೆ, ಕಾರ್ಯಕ್ರಮ ನಿರೂಪಣೆಯನ್ನು ಜೆ. ತಿಮ್ಮಯ್ಯ ಶಿಕ್ಷಕರು ನಿರೂಪಿಸಿದರು.