ಪೌರಕಾರ್ಮಿಕರೊಂದಿಗೆ ಸ್ವಚ್ಚತಾ ಕಾರ್ಯಕೈಗೊಂಡ ಜಗಳೂರು ಶಾಸಕರು

ಜಗಳೂರು.ಜೂ.14; ಪಟ್ಟಣದ ಸಂತೆ ಮೈದಾನದಲ್ಲಿ ಶಾಸಕ. ಬಿ ದೇವೇಂದ್ರಪ್ಪ ಪೌರಕಾರ್ಮಿಕರೊಂದಿಗೆ ಕಸಗೂಡಿಸಿ ಜನರೊಂದಿಗೆ ಮಾತನಾಡಿದರು.ಇಂದು ಬೆಳಿಗ್ಗೆ 6 ಗಂಟೆಗೆ ಜನಸಾಮಾನ್ಯರಂತೆ  ಶಾಸಕರು ಬೈಕ್ ನಲ್ಲಿ ಬಂದು ಜಗಳೂರು ಪಟ್ಟಣದಲ್ಲಿ ಪೌರಕಾರ್ಮಿಕ ರಂತೆ ಕಸಗೂಡಿಸಿ ಕೆಲಸ ಮಾಡಿ ಮಾದರಿ  ಶಾಸಕರಾಗಿದ್ದಾರೆ.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಪೌರಕಾರ್ಮಿಕರಿಗೆ ಮಳೆಗಾಲದಲ್ಲಿ ರೈನ್ ಕೋಟ್ ಮತ್ತು ಚಳಿಗಾಲದಲ್ಲಿ ಸ್ವೆಟರ್ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.  ನಾನು ಶಾಸಕನಾಗಿ ಎ.ಸಿ ರೂಮಲ್ಲಿ ಕೂರಲು ನಾನು ಗೆದ್ದು ಬಂದಿಲ್ಲ ಕ್ಷೇತ್ರದ ಎಲ್ಲಾ ಅಧಿಕಾರಿಗಳನ್ನು ವಿಶ್ವಾಸ  ತೆಗೆದುಕೊಂಡು ಕೆಲಸ ಮಾಡಲು ಬಂದಿದ್ದೇನೆ ಅಧಿಕಾರಿಗಳು  ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಬೇಕು  ನನ್ನ ಮೊದಲನೆಯ ಆದ್ಯತೆ ನೀರು ಸೂರು ಸ್ವಚ್ಛತೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇನೆ  ಎಂದರು. ನಂತರ  ಇಂದಿರಾ ಕ್ಯಾಂಟೀನ್ ನಲ್ಲಿ  ಪೌರಕಾರ್ಮಿಕರೊಂದಿಗೆ ಉಪಹಾರ ಸೇವಿಸಿದರು.  ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಿಢೀರನೆ ಭೇಟಿ ನೀಡಿ ರೋಗಿಗಳ ಯೋಗಕ್ಷೇಮವನ್ನು ವಿಚಾರಿಸಿ ಅಲ್ಲಿನ ವೈದ್ಯರಿಗೆ ಮತ್ತು ಸಿಬ್ಬಂದಿಗಳಿಗೆ ಆಸ್ಪತ್ರೆಯನ್ನು ಸ್ವಚ್ಛವಾಗಿರುವಂತೆ ಸಲಹೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ರಮೇಶ್ ರೆಡ್ಡಿ. ರವಿಕುಮಾರ್. ಮಂಜುನಾಥ್.ಮಹಮದ್ ಅಲಿ. ಲುಕ್ಮಾನ್. ಪ ಪಂ.ಆರೋಗ್ಯ ನಿರೀಕ್ಷಕರಾದ ಕಿಫಾಯಿತ್ ಅಹ್ಮದ್. ಪೂರಕಮಿಕರ ಸಂಘದ ತಾಲೂಕ ಅಧ್ಯಕ್ಷ ಎ.ಕೆ ಬಸವರಾಜ್ ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ. ಮಹಮ್ಮದ್ ಗೌಸ್. ನಾಗರಾಜ್. ಆದರ್ಶ. ಬಸವರಾಜ್ ಸೇರಿದಂತೆ ಪೌರಕಾರ್ಮಿಕರು ಸಾರ್ವಜನಿಕರು ಇದ್ದರು.