ಪೌರಕಾರ್ಮಿಕರು ಸಮಾಜ ಸ್ವಚ್ಛಮಾಡುವ ಚೇತನರು

ಸಂಜೆವಾಣಿ ವಾರ್ತೆ
ಕೊಟ್ಟೂರು, ಸೆ.25: ಪೌರಕಾರ್ಮಿಕರನ್ನು ಗೌರವಿಸದಿದ್ದರೆ ನಾವು ಸ್ನಾನ ಮಾಡಿ ತಿಪ್ಪೆ ಮೇಲೆ ನಡೆದಂತ ಆಗುತ್ತದೆ ಹದಗೆಟ್ಟ ಸಮಾಜವನ್ನು ಸ್ವಚ್ಛ ಮಾಡಿ ನಗರ ಪಟ್ಟಣಗಳ ಸೌಂದರ್ಯ ಹೆಚ್ಚಿಸುವ  ಚೈತನ್ಯ ಚೇತನರು ಪೌರಕಾರ್ಮಿಕರು ಎಂದು ಕೊಟ್ಟೂರೇಶ್ವರ ಕಾಲೇಜಿನ ಉಪನ್ಯಾಸಕರಾದ ಕುಸುಮ ಸಜ್ಜನ್ ಹೇಳಿದರು.
ಪಟ್ಟಣದ ಭೂತ ಭುಜಂಗ ಮಠದಲ್ಲಿ ಗುರುವಾರ ಸಂಜೆ ಹಸಿರು ಮನಲು ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
 ಜಗಜ್ಯೋತಿ ಬಸವಣ್ಣನವರು ಶತಮಾನಗಳ ಹಿಂದೆಯೇ ಅನುಭವ ಮಂಟಪದ ಕಲ್ಯಾಣದಲ್ಲಿ ಕುಲಕಸುಬು ಮಾಡುವ ವ್ಯಕ್ತಿಗಳಿಗೆ ಅವಕಾಶ ನೀಡಿ ಸಮಾನತೆಯ ತತ್ವದ ಬಗ್ಗೆ ಮನುಕುಲಕ್ಕೆ ತಿಳಿಸಿ ಕೊಟ್ಟಿದ್ದಾರೆ.ನಾವು ಮಾಡುವ ಕಾಯಕದಲ್ಲಿ ಆತ್ಮ ತೃಪ್ತಿ ಹೊಂದಿ ಸಮಾಜದಲ್ಲಿ ಭಿನ್ನ ಕೆಲಸ ಮಾಡುವ ವೃತ್ತಿಗಳಿಗೆ ಗೌರವ ನೀಡಿದಾಗ ಮಾತ್ರ ಸಮಾಜದಲ್ಲಿ ಸೌಹಾರ್ದತೆ ಸೊಬಗ ಕಾಣಲು ಸಾಧ್ಯ ಎಂದು ತಿಳಿಸಿದರು.
ಸ್ವಾಗತ ವಿಕ್ರಂ ಕುಮಾರ್ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಅರವಿಂದ್ ಬಸಾಪುರ ನಡೆಸಿಕೊಟ್ಟರು. ಗಚ್ಚಿನಮಠ ಶಾಲೆಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ 60 ಶಾಲು ಹಾಗೂ ಹೂವಿನ ಹಾರಗಳನ್ನು ಈ ಕಾರ್ಯಕ್ರಮಕ್ಕೆ ಕೊಡುಗೆ ನೀಡಿದರು.
ಈ ಸಂದರ್ಭದಲ್ಲಿ ಹಸಿರು ನೋವನ್ನು ಸೇವಾ ಸಂಸ್ಥೆಯ ಮಾರ್ಗದರ್ಶಕರಾದ ಸಿ. ಬಸವರಾಜ್, ಅಧ್ಯಕ್ಷ ಕೆ.ಬಿ ಸೋಮಶೇಖರ್, ಉಪಾಧ್ಯಕ್ಷ ಗುರುರಾಜ್,  ಸಂಘಟನಾ ಕಾರ್ಯದರ್ಶಿ ನಟರಾಜ್ ಎಂಎಂ, ಸದಸ್ಯರಾದ  ಪತ್ತಿಕೊಂಡ ಪ್ರಶಾಂತ್ ರಾಜೇಶ್ ಕರ್ವ ಗಿರೀಶ್ ನವೀನ ಶಿಕಾಪುರ ಅಜಯ್ ಕೃಷ್ಣ ಸಿಂಗ್ ಹನುಮರೆಡ್ಡಿ ಹಾಗೂ  ಜೆಸಿಐ ಘಟಕ ಅಧ್ಯಕ್ಷ ರಾಘವೇಂದ್ರ, ವೀರೇಶ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಮದೂರ್ ಕೊಟ್ರೇಶ, ಹೇಮನಗೌಡ ಮುಂತಾದವರು ಉಪಸ್ಥಿತರಿದ್ದರು.

ಹಲವು ವರ್ಷಗಳಿಂದ ಪೌರಕಾರ್ಮಿಕ ರೊಂದಿಗೆ ಪಟ್ಟಣದ ಸ್ವಚ್ಛತೆಗೆ ಶ್ರಮಿಸಿದ ಯೋಗ ಗುರು ನಾಗರಾಜ್ ಬಂಜಾರ್ ಅವರಿಗೆ ಪೌರಕಾರ್ಮಿಕರು ತಮಗೆ ಸನ್ಮಾನಿಸಿದ ಹೂವಿನ ಹಾರಗಳನ್ನು ಅವರಿಗೆ ಸಮರ್ಪಿಸಿ ಹಸಿರು ಹೊನಲು ಸೇವಾ ಸಂಸ್ಥೆಗೆ ಪೌರಕಾರ್ಮಿಕರಿಂದ ವಯರ್ಲೆಸ್ ಸ್ಪೀಕರ್ ಉಡುಗೊರೆಯಾಗಿ ನೀಡಿ ಕಾರ್ಯಕ್ರಮದ ಗಮನ ಸೆಳೆದರು.