ಪೌರಕಾರ್ಮಿಕರಿಗೆ ಹಬೆ ಯಂತ್ರ ವಿತರಣೆ

ದಾವಣಗೆರೆ.ಮೇ.೨೬; 38 ನೇ ವಾರ್ಡ್ ಮಹಾನಗರ ಪಾಲಿಕೆ ಸದಸ್ಯರಾದ ಗಡಿ ಗುಡಾಳ್ ಮಂಜುನಾಥ್ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಹಬೆ ಯಂತ್ರಗಳನ್ನು ನೀಡಿ ಅವರ ಆರೋಗ್ಯದ ಬಗ್ಗೆ ಕಾಳಜಿ ತೋರುವ ವಿಶಿಷ್ಟ ರೀತಿಯ ಕಾರ್ಯಕ್ರಮವನ್ನು ಆಯೋಜಿಸಿದ್ದರು, ಆದರೆ ಅವರಿಗೆ ಪಾಸಿಟಿವ್ ಬಂದ ಕಾರಣ ಈ ಕಾರ್ಯಕ್ರಮವನ್ನು ಮುಂದೂಡುವ ಸಲಹೆಯನ್ನು ತಿರಸ್ಕರಿಸಿ ಸದಾ ನಮ್ಮ ವಾರ್ಡ್ ನಾಗರೀಕರಿಗೆ ಸೇವೆ ಒದಗಿಸುವ ನಮ್ಮ ಪೌರಕಾರ್ಮಿಕರಿಗೆ ಹಬೆ ಯಂತ್ರಗಳನ್ನು ನೀಡುವ ಕಾರ್ಯಕ್ರಮ ನಿಲ್ಲಬಾರದು ಎಂದು ತಮ್ಮ ಅನುಪಸ್ಥಿತಿಯಲ್ಲಿ ವಿತರಣೆ ಮಾಡಿದ್ದು, ತಮ್ಮ ವಾರ್ಡ್ ಪೌರ ಕಾರ್ಮಿಕರಿಗೆ ಅಷ್ಟೇ ಅಲ್ಲದೆ, ಸಿದ್ದವೀರಪ್ಪ ಬಡಾವಣೆ ಮತ್ತು ಆಂಜನೇಯ ಬಡಾವಣೆಯ ಪೌರಕಾರ್ಮಿಕರಿಗೂ ಹಬೆ ಯಂತ್ರಗಳನ್ನು ವಿತರಣೆ ಮಾಡಿ ಮಾನವೀಯತೆ ಮೆರೆದರು.ವಾರ್ಡ್ ನಾಗರಿಕರು ಹಾಗೂ ಜಿ.ಎಸ್.ಎಂ  ಸ್ನೇಹ ಬಳಗದವರು ಕಾರ್ಯಕ್ರಮದ ಮುಂದಾಳತ್ವ ವಹಿಸಿಕೊಂಡು ಸಸಿ ನೆಟ್ಟು, ಪೌರ ಕಾರ್ಮಿಕರಿಗೆ  ಸನ್ಮಾನಿಸಿ ಹಬೆ ಯಂತ್ರಗಳನ್ನು ವಿತರಣೆ ಮಾಡಿ ಮತ್ತು ಸಿಜಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಲಘು ಉಪಹಾರ ನೀಡುವ ಮೂಲಕ ಸರಳವಾಗಿ ಹಾಗೂ ಅರ್ಥ ಪೂರ್ಣವಾಗಿ ತಮ್ಮ ವಾರ್ಡ್ ಪಾಲಿಕೆ ಸದಸ್ಯರ ಹುಟ್ಟುಹಬ್ಬವನ್ನು ಆಚರಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯರಾದ ಚಮನ್ ಸಾಬ್, ಪಾಮನಹಳ್ಳಿ ನಾಗರಾಜ್, ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಡಿ. ಬಸವರಾಜ್, ಮುಖಂಡರಾದ ಇಟ್ಟಿಗುಡಿ ಮಂಜುನಾಥ್, ಹುಲ್ಮನೇ ಗಣೇಶ್, ಆಶಾ ಉಮೇಶ್ ಹಾಗೂ ಸ್ಥಳೀಯರಾದ ಚಂದನ್ ಪಲ್ಲಾಗಟ್ಟಿ, ಪ್ರಮೋದ್ ಇದ್ದರು.