ಪೌರಕಾರ್ಮಿಕರಿಗೆ ಸುರಕ್ಷಾ ಧಿರಿಸುಗಳ ವಿತರಣೆ

ದಾವಣಗೆರೆ.ಮೇ.೧೫; ಮಹಾನಗರ ಪಾಲಿಕೆಯ ವತಿಯಿಂದ ನಗರದ ಎಲ್ಲಾ ೪೫ ವಾರ್ಡುಗಳಲ್ಲಿ ಕೋವಿಡ್-೧೯ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸೇಷನ್ ಕಾರ್ಯವನ್ನು  ಮೇಯರ್ ಎಸ್. ಟಿ. ವೀರೇಶ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾದ  ಎಲ್. ಡಿ. ಗೋಣೆಪ್ಪ  ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ಸುರಕ್ಷಾ ಧಿರಿಸುಗಳು, ವೀಲ್‌ಬ್ಯಾರೋಗಳು ಮುಂತಾದ ಸ್ವಚ್ಛತಾ ಪರಿಕರಗಳನ್ನು ವಿತರಿಸಲಾಯಿತು. ಪೌರಕಾರ್ಮಿಕರು ದೈನಂದಿನ ಕೆಲಸಕಾರ್ಯಗಳೊಡನೆ ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಮುತವರ್ಜಿ ವಹಿಸುವಂತೆ ಮೇಯರ್ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಆಯುಕ್ತರಾದ ವಿಶ್ವನಾಥ್ ಮುದಜ್ಜಿ, ಪಶುವೈದ್ಯಾಧಿಕಾರಿಗಳಾದ ಡಾ. ಸಂತೋಷ್,  ಪಾಲಿಕೆ ಸದಸ್ಯರಾದ ಸೋಗಿ ಶಾಂತಕುಮಾರ್, ಜಯಮ್ಮ ಗೋಪಿನಾಯ್ಕ್, ಚಮನ್ ಸಾಬ್, ರೇಣುಕಾ ಶ್ರೀನಿವಾಸ್, ಸುಧಾ ಇಟ್ಟಿಗುಡಿ ಮಂಜುನಾಥ್, ಶಿವಲೀಲಾ ಕೊಟ್ರಯ್ಯ, ಶಿವನಗೌಡ ಪಾಟೀಲ್ ಮುಂತಾದವರು ಹಾಜರಿದ್ದರು.