ಪೌರಕಾರ್ಮಿಕರಿಗೆ ಸಿಹಿ, ಮಾಸ್ಕ್ ವಿತರಣೆ

೧೪ಓeತಿs೧– ೧೪ಓeತಿs೧ಠಿh

ಬೆಂಗಳೂರು, ನ. ೧೪- ರಾಜರಾಜೇಶ್ವರಿನಗರ ಮತ್ತು ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ೪,೬೦೦ಕ್ಕೂ ಹೆಚ್ಚು ಪೌರಕಾರ್ಮಿಕರು, ಗ್ಯಾಂಗ್‌ಮ್ಯಾನ್‌ಗಳು, ಗುತ್ತಿಗೆ ಕಾರ್ಮಿಕರುಗಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಬಿ.ಪ್ಯಾಕ್ ಸಂಸ್ಥೆಯ ಡಾ. ಅಂಬರೀಷ್.ಜಿ. ಸಿಹಿತಿಂಡಿಯ ಪ್ಯಾಕೆಟ್ ಮತ್ತು ಮಾಸ್ಕ್‌ಗಳನ್ನು ವಿತರಿಸಿದರು.
ಬಿ.ಪ್ಯಾಕ್ ಸಂಸ್ಥೆಯ ಸಿವಿಕ್ ಲಿಡರ್ ಡಾ.ಅಂಬರೀಷ್.ಜಿ. ಈ ಸಂದರ್ಭದಲ್ಲಿ ಮಾತನಾಡಿ, ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮುಜುಂದಾರ್ ಷಾ ಸಹಭಾಗಿತ್ವದಲ್ಲಿ ಪಾಲಿಕೆ ವ್ಯಾಪ್ತಿಯ ಎಲ್ಲಾ ೧೯೮ ವಾರ್ಡ್ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ಪೌರಕಾರ್ಮಿಕರಿಗೆ ಸಿಹಿ ಪ್ಯಾಕೆಟ್ ಮತ್ತು ಮಾಸ್ಕ್ ವಿತರಿಸಲಾಗುತ್ತಿದೆ. ಕೊರೊನಾ ಅವಧಿಯಲ್ಲಿ ಪ್ರಾಣದ ಹಂಗುತೊರೆದು ನಗರದ ನೈರ್ಮಲ್ಯತೆಯನ್ನು ಕಾಪಾಡುವ ಮೂಲಕ ಮಾನವೀಯತೆ ಮೆರೆದಿರುವ ಪೌರಕಾರ್ಮಿಕರು ಚಳಿ-ಗಾಳಿ, ಬಿಸಿಲು-ಮಳೆ ಎನ್ನದೆ ನಿತ್ಯನಿರಂತರವಾಗಿ ಸಮಾಜ ಸೇವೆ ಮಾಡಿಕೊಂಡು ಬಂದು ನಿಜವಾದ ಸಮಾಜ ಸೇವಕರಾಗಿದ್ದಾರೆ. ಅವರ ಸಂತೋಷದಲ್ಲಿ ನೆಮ್ಮದಿ ಕಾಣಲಾಗುತ್ತಿದೆ ಎಂದರು.
ಯಶವಂತಪುರ ಬಸವ ಬಳಗದ ಅಧ್ಯಕ್ಷ ಮಂಜುನಾಥ್ ಮಾತನಾಡಿ ಡಾ. ಅಂಬರೀಷ್ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡು, ಬಡವರು, ನೊಂದವರು, ನಿರ್ಗತಿಕರ ಸೇವೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಕೊರೊನಾ ಪ್ರಾರಂಭದಲ್ಲಿ ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ ಮಲ್ಲೇಶ್ವರಂ, ಟಿ.ದಾಸರಹಳ್ಳಿ, ಆರ್.ಆರ್.ನಗರ ವ್ಯಾಪ್ತಿಯಲ್ಲಿ ೯೦೦ಕ್ಕೂ ಹೆಚ್ಚು ಅನಾಥರು, ಅಶಕ್ತರು, ಅಂಗವಿಕಲರು, ಕಟ್ಟಡ ಕಾರ್ಮಿಕರುಗಳು ಇರುವೆಡೆಗೇ ತೆರೆಳಿ ಎರಡೂ ಹೊತ್ತಿಗಾಗುವ ಊಟ, ಮೂರು ತಿಂಗಳ ಕಾಲ ಆಹಾರ ಪೊಟ್ಟಣಗಳನ್ನು ವಿತರಿಸಿ ಮಾನವೀಯತೆಯನ್ನು ಮೆರೆದಿದ್ದಾರೆ ಎಂದು ಪ್ರಶಂಸಿಸಿದರು.
ಚಿತ್ರ : ಯಶವಂತಪುರದಲ್ಲಿ ಪೌರಕಾರ್ಮಿಕರಿಗೆ ಬಿ.ಪ್ಯಾಕ್ ಸಂಸ್ಥೆಯ ಸಿವಿಕ್ ಲೀಡರ್ ಡಾ.ಅಂಬರೀಷ್.ಜಿ ಅವರು ದೀಪಾವಳಿ ಹಬ್ಬದ ಪ್ರಯುಕ್ತ ಸಿಹಿ ಪೊಟ್ಟಣ, ಮಾಸ್ಕ್ ವಿತರಿಸಿದರು.