ಪೌರಕಾರ್ಮಿಕರಿಗೆ ಶಾಲು ಹೊದಿಸಿ ಅಭಿನಂದನೆ

ಮಳವಳ್ಳಿ, ನ.6: ಪೌರಕಾರ್ಮಿಕರೂ ಎಂದರೆ ನಾವು ಕೀಳಾಗಿ ನೋಡಬಾರದು. ಏಕೆಂದರೆ ಅವರು ಪ್ರತಿನಿತ್ಯ ನಾವು ವಾಸಿಸುವ ಸುತ್ತಮುತ್ತಲ ಪರಿಸರವನ್ನು ಸ್ವಚ್ಛತೆಗೊಳಿಸಿ ನಮಗೆ ಉತ್ತಮ ಆರೋಗ್ಯವನ್ನು ಕಲ್ಪಿಸಿಕೊಡುತ್ತಾರೆ.
ಇದರ ಜೊತೆಗೆ ಕನ್ನಡದ ಅಭಿಮಾನವನ್ನು ಕೂಡಾ ಬೆಳೆಸಿಕೊಂಡಿರುತ್ತಾರೆ ನೋಡಿ ಇವನು ಬೆಳಿಗ್ಗೆ ಕಸ ತೆಗೆಯುವ ಗಾಡಿಯಲ್ಲಿ ಪ್ರತಿನಿತ್ಯ ಸ್ವಚ್ಛತೆಯ ಜಾಹೀರಾತಿನ ಜೊತೆಗೆ ಕನ್ನಡದ ಗೀತೆಗಳನ್ನು ಕೂಡ ಪ್ರಸಾರ ಮಾಡುತ್ತಾ ಜನರಲ್ಲಿ ಉತ್ತಮವಾದ ಬೆಳಕನ್ನು ಚೆಲ್ಲುತ್ತಿರುವುದು ಹೆಮ್ಮೆಯ ವಿಷಯ. ಈತನ ಕನ್ನಡದ ಅಭಿಮಾನದ ಮೇಲೆ ಇಟ್ಟಿರುವ ಪ್ರೀತಿಗೆ ಗಮನಿಸಿ ಇವರನ್ನು ಕನ್ನಡದ ಅಭಿಮಾನಿ ಸಾಹಿತಿ ಸಾಲುಮರದ ನಾಗರಾಜುರವರು ಕನ್ನಡದ ಶಾಲು ಹೊದಿಸಿ ಅಭಿನಂದಿಸಿದರು.