ಪೌರಕಾರ್ಮಿಕರಿಗೆ ವಸತಿಗೃಹ ಹಂಚಿಕೆ


ದಾವಣಗೆರೆ.ಮಾ.೧೩:  ಮಹಾನಗರ ಪಾಲಿಕೆ ವತಿಯಿಂದ ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆ ಅಡಿ ನಿರ್ಮಿಸಲಾಗಿರುವ 381 ವಸತಿಗೃಹಗಳನ್ನು ಫಲಾನುಭವಿ ಪೌರಕಾರ್ಮಿಕರಿಗೆ ಲಾಟರಿ ಮೂಲಕ ಹಂಚಿಕೆ ಮಾಡುವ ಕಾರ್ಯಕ್ರಮವು ಜಿಲ್ಲಾಧಿಕಾರಿಗಳ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ  ನಡೆಯಿತು. ಈ ಸಂದರ್ಭದಲ್ಲಿ  ಮಹಾಪೌರರಾದ ವಿನಾಯಕ ಬಿ. ಹೆಚ್., ಉಪಮಾಪೌರರಾದ ಯಶೋಧ ಯಗ್ಗಪ್ಪ, ಮಾನ್ಯ ಆಯುಕ್ತರಾದ ಶ್ರೀಮತಿ ರೇಣುಕಾ ಮಾಜಿ ಮಹಾಪೌರರಾದ ಎಸ್. ಟಿ. ವೀರೇಶ್, ಮಹಾನಗರ ಪಾಲಿಕೆ ಸದಸ್ಯರಾದ ಚಮನ್ ಸಾಬ್, ಎಲ್. ಡಿ. ಗೋಣೆಪ್ಪ,  ಸೋಗಿ ಶಾಂತಕುಮಾರ್, ಗಾಯತ್ರಿಬಾಯಿ, ಉದಯ್ ಕುಮಾರ್ ಮತ್ತು ಪೌರಕಾರ್ಮಿಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.