ಪೌರಕಾರ್ಮಿಕರಿಗೆ ನೇತ್ರ ತಪಾಸಣೆ:ಉಚಿತ ಶಿಬಿರ

ಕೆಂಗೇರಿ.ಸೆ೨೭:ಪಾಸಿಟಿವ್ ಪಲ್ಸ್ ಫೌಂಡೇಶನ್ ವತಿಯಿಂದ ಪೌರಕಾರ್ಮಿಕರಿಗೆ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಬೆಂಗಳೂರಿನ ಕೋರಮಂಗಲ ರೋಟರಿ ಕ್ಲಬ್ ಮತ್ತು ಐದೃಷ್ಟಿ ಚನ್ನಪಟ್ಟಣ ಇವರ ಸಹಯೋಗದಲ್ಲಿ ಕೆಂಗೇರಿ ಉಪನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದರು.
ಪ್ರಪಂಚ ನೋಡಿ ಆನಂದಿಸಬೇಕಾದರೆ ಕಣ್ಣನ್ನು ಜೋಪಾನವಾಗಿ ಇಟ್ಟುಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು. ಸೂಕ್ಷ್ಮ ಅಂಗ ಕಣ್ಣು ಬದುಕಿಗೆ ಬೆಳಕಾಗಿರಬೇಕಾದರೆ ಹಿರಿಯರಿಗೆ ಮಕ್ಕಳು ಇಂತಹ ಉಚಿತ ತಪಾಸಣೆಗೆ ಕರೆತರುವ ಮೂಲಕ ಹಿರಿಯರ ಸೇವೆಗೆ ಬದ್ದರಾಗಿರಬೇಕು. ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾದರೆ ನಾವು ಎಲ್ಲ ರಂಗದಲ್ಲಿಯೂ ಅಭಿವೃದ್ಧಿ ಹೊಂದಲು ಸಾಧ್ಯ. ಇಂತಹ ಸೌಲಭ್ಯ ಬಡವರಿಗೆ ತಲುಪಲು ವಿದ್ಯಾವಂತರು ಕ್ರೀಯಾಶೀಲರಾಗಬೇಕು ಎಂದು ಪಾಸಿಟಿವ್ ಪಲ್ಸ್ ನ ಅಧ್ಯಕ್ಷ ಅರುಣ್ ಕಾರ್ತಿಕ್ ತಿಳಿಸಿದರು.
ದೇವರು ನಮಗೆ ಕೊಟ್ಟಿರುವಂತಹ ಬಹುಮುಖ್ಯವಾದ ಅಂಗಗಳಲ್ಲಿ ಕಣ್ಣು ಒಂದಾಗಿದ್ದು ಇದನ್ನು ನಾವು ಸೂಕ್ಷ್ಮತೆಯಿಂದ ಕಾಪಾಡಿಕೊಳ್ಳಬೇಕು ಇಂತಹ ಶಿಬಿರಗಳ ಯೋಜನೆಯಿಂದ ಎಲ್ಲರಿಗೂ ಉಪಯುಕ್ತವಾಗುತ್ತದೆ ಎಂದು ಐ ದೃಷ್ಟಿಯ ಡಾ. ಅನಿಲ್ ಹೇಳಿದರು.
೧೫೦ಕ್ಕೂ ಹೆಚ್ಚು ಪೌರಕಾರ್ಮಿಕರು ನೇತ್ರ ತಪಾಸಣೆ ಮಾಡಿಕೊಂಡರು. ೨೦ಕ್ಕೂ ಹೆಚ್ಚು ಜನರಿಗೆ ಕಣ್ಣಿನ ಪೊರೆ ಚಿಕಿತ್ಸೆಯ ಅವಶ್ಯಕತೆ ಇದೆ ಇನ್ನು ಅನೇಕರಿಗೆ ಕನ್ನಡಕದ ಅವಶ್ಯಕತೆ ಇದ್ದು ಕನ್ನಡಕಗಳನ್ನು ಉಚಿತವಾಗಿ ರೋಟರಿ ಹಾಗೂ ಐದೃಷ್ಟಿ ಚನ್ನಪಟ್ಟಣ ಸಂಸ್ಥೆಗಳು ನೀಡಲಿದ್ದಾರೆ. ಈ ಶಿಬಿರದಲ್ಲಿ ಪಾಸಿಟಿವ್ ಪಲ್ಸ್ ಫೌಂಡೇಶನ್ ನ ಅಧ್ಯಕ್ಷ ಅರುಣ್ ಕಾರ್ತಿಕ್, ಉಪಾಧ್ಯಕ್ಷ ನವೀನ್ ಮಾರಣ್ಣ,ಕಾರ್ಯದರ್ಶಿ ಜಯಪ್ರಕಾಶ್ ಪಿ. ಎನ್., ಖಜಾಂಚಿ ಈರೇಶ್ ಹೆಚ್. ಆರ್., ನಿರ್ದೇಶಕ ಆನಂದ ಎಂ.ಎ. ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.