ಪೌರಕಾರ್ಮಿಕರಿಗೆ ನಿರ್ಮಾಣಗೊಂಡಿರುವ ಮನೆಗಳ ಕಾಮಮಗರಿಯನ್ನು ವೀಕ್ಷಿಸಿದ ಮೇಯರ್


ದಾವಣಗೆರೆ.ನ.೧೨; ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ರಾಜ್ಯ ಸರ್ಕಾರದ ಗೃಹ ಭಾಗ್ಯ ಯೋಜನೆಯಡಿಯಲ್ಲಿ ನಿರ್ಮಾಣಗೊಂಡಿರುವ  ಮನೆಗಳ ಕಾಮಗಾರಿಯನ್ನು ಮಹಾಪೌರರಾದ ಎಸ್ ಟಿ.ವೀರೇಶ್,ಆಯುಕ್ತರಾದ ವಿಶ್ವನಾಥ್ ಮುದ್ದಜ್ಜಿ, ಕಾಮಗಾರಿಯನ್ನು ವೀಕ್ಷಿಸಿ ಆದಷ್ಟೂ ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿ ಪೌರಕಾರ್ಮಿಕರಿಗೆ ಹಸ್ತಾಂತರ ಆಗಬೇಕು ಆ ನಿಟ್ಟಿನಲ್ಲಿ ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ವಾರ್ಡನ ಪಾಲಿಕೆ ಸದಸ್ಯರಾದ ಜಿ.ಡಿ.ಪ್ರಕಾಶ್,ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಎಲ್.ಡಿ.ಗೋಣೇಪ್ಪ, ಪಾಲಿಕೆ ಸದಸ್ಯರಾದ ಆರ್ ಎಲ್ ಶಿವಪ್ರಕಾಶ್, ಮಾಜಿ.ಸದಸ್ಯ ಶಿವನಗೌಡ ಟಿ.ಪಾಟೀಲ, ಪಾಲಿಕೆ ಅಧಿಕಾರಿಗಳಾದ ಉದಯಕುಮಾರ್, ಸಂದೀಪ್, ವಿನಾಯಕ್,ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.