ಪೌರಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ

ಬೆಂಗಳೂರು,ಜೂ.೧೧-ಮಹಾಲಕ್ಷ್ಮೀ ಲೇಔಟ್ ವಿಧಾನ ಸಭಾ ಕ್ಷೇತ್ರದ ನಾಗಪುರ ದಲ್ಲಿರುವ ಶಾಸಕರ ಭವನದ ಮುಂಭಾಗದಲ್ಲಿ ಇಂದು ಈ ಭಾಗದ ಬಿಜೆಪಿ ಮುಖಂಡರು ಹಾಗೂ ಬಿಬಿಎಂಪಿ ಮಾಜಿ ಉಪ ಮಹಾಪೌರ ರಾದ ಎಸ್, ಹರೀಶ್ ರವರ ೫೫ ನೆಯ ಹುಟ್ಟು ಹಬ್ಬದ ಪ್ರಯುಕ್ತ ಕ್ಷೇತ್ರದ ೭ ವಾರ್ಡ್ ಗಳ ಪೌರ ಕಾರ್ಮಿಕರಿಗೆ ಸುಮಾರು ೧೦೦೦ ಸಾವಿರ ದಿನಸಿ ಪದಾರ್ಥಗಳ ಫುಡ್ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ ಗೋಪಾಲಯ್ಯ ರವರು ಭಾಗವಹಿಸಿ ಹರೀಶ್ ಅವರಿಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿ ಹುಟ್ಟು ಹಬ್ಬದ ಶುಭಾಶಯಗಳನ್ನ ಕೋರಿದರು.
ನಂತರ ಕ್ಷೇತ್ರದ ಪೌರಕಾರ್ಮಿಕರಿಗೆ ದಿನಸಿ ಫುಡ್ ಕಿಟ್ ವಿತರಣೆ ಮಾಡಿ ಮಾತಾನಾಡಿದ ಸಚಿವರು ಮಹಾಮಾರಿ ಕೊರೋನ ಎರಡನೇ ಅಲೆಯಿಂದ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಒಂದು ಹೊತ್ತು ಊಟಕ್ಕೆ ಪರದಾಡುತ್ತಿರುವ ಎಷ್ಟೋ ಕುಟುಂಬಗಳು ನಮ್ಮ ಮುಂದೆ ನಿತ್ಯವೂ ಕಂಡುಬರುತ್ತಿದ್ದು, ನಾವು ಕೂಡ ಕ್ಷೇತ್ರದ ಜನತೆಗೆ ಈಗಾಗಲೇ ಸುಮಾರು ೫೦ ಸಾವಿರಕ್ಕೂ ಹೆಚ್ಚಿನ ಫುಡ್ ಕಿಟ್ ತಯಾರಿಸಿ ನೀಡುತ್ತಿದ್ದು, ಇಂಥ ಸಂದಿಗ್ಧ ಸ್ಥಿತಿಯಲ್ಲಿ ಮಾಜಿ ಉಪ ಮಹಾಪೌರ ರಾದ ಎಸ್ ಹರೀಶ್ ಅವರು ಕೈ ಜೋಡಿಸಿ ಕೊರೋನ ವಾರಿಯರ್ಸ್ ಗಳಾದ ಪೌರ ಕಾರ್ಮಿಕರಿಗೆ ಆಹಾರ ಪದಾರ್ಥಗಳ ದಿನಸಿ ಕಿಟ್ ವಿತರಣೆ ಮಾಡುವ ಮೂಲಕ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ, ಇವರ ಈ ಮಾನವೀಯ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ನಂತರ ಮಾತನಾಡಿದ ಎಸ್ ಹರೀಶ್ ಅವರು ಕೋರೋನ ಸೋಂಕಿನಿಂದ ಇಡೀ ದೇಶವೇ ಸಂಕಷ್ಟ ಎದುರಾಗಿದ್ದು, ಈಗಾಗಲೇ ಕೇಂದ್ರದಲ್ಲಿ ನರೇಂದ್ರ ಮೋದಿಜೀ ಹಾಗೂ ರಾಜ್ಯದಲ್ಲಿ ನಮ್ಮ ನಾಯಕರು ಈ ರಾಜ್ಯದ ಜನಪ್ರಿಯ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರಗಳು ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷರಾದ ನರೇಂದ್ರ ಬಾಬು, ಮಂಡಲ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ಮಾಜಿ ಬಿಬಿಎಂಪಿ ಸದಸ್ಯರಾದ ರಾಜೇಂದ್ರ ಕುಮಾರ್, ಎಂ ಮಹಾದೇವ, ಮುಖಂಡರುಗಳಾದ ಎನ್ ಜಯರಾಂ, ವೆಂಕಟೇಶ್ ಮೂರ್ತಿ,ಶಿವಾನಂದ್ ಮೂರ್ತಿ, ವೆಂಕಟೇಶ್ ಮಾಮ, ನಿಸರ್ಗ ಜಗದೀಶ್, ಜಯಸಿಂಹ, ಪ್ರಸನ್ನ ಮುನಿರಾಜು, ಸೇರಿದಂತೆ ವಿವಿಧ ಮೋರ್ಚಾ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಪದಾಧಿಕಾರಿಗಳು ಮಹಿಳಾ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.