ಪೌರಕಾರ್ಮಿಕರಿಂದ ಮಲ ಹೊರಿಸಿದ ಪ್ರಕರಣ: ಪ.ಪಂ ಆಧಿಕಾರಿಗಳ ವಿರುದ್ದ ಎಫ್‍ಐಆರ್ ದಾಖಲು..!

ಸಂಜೆವಾಣಿ ವಾರ್ತೆ
ಹನೂರು ಏ 18 :- ಪೌರಕಾರ್ಮಿಕರಿಂದ ತಲೆಯ ಮೇಲೆ ಮಲ ಹೊರಿಸಿ ಸಾಗಾಣಿಕೆ ಮಾಡಿದ ಪ್ರಕರಣ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಗಮಿನಿಸಿದ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಂಗಳವಾರ ಘಟನಾ ಸ್ಥಳಕ್ಕೆ ಬೇಟಿ ನೀಡಿದ್ದಲ್ಲದೆ ಘಟನೆಯ ಬಗ್ಗೆ ಕೂಲಂಕುಶವಾಗಿ ಮಾಹಿತಿ ಕಲೆ ಹಾಕಿದ್ದು, ಸತ್ಯಾಂಶವೆಂದು ಕಂಡುಬಂದ ಹಿನ್ನೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ ಪೆÇಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶ್ರೀಧರ್ ಮತ್ತು ಆರೋಗ್ಯ ನಿರೀಕ್ಷಕಿ ಭೂಮಿಕಾ ವಿರುದ್ದ ಪ್ರಕರಣದ ಸಂಖ್ಯೆ 74/2024 ಆಧಿನಿಯಮ 2013 ರ ಕಾಯಿದೆ ಸೆಕ್ಷನ್ 5 (1)(b) ರಂತೆ ದಿನಾಂಕ 16-4-2024ರಲ್ಲಿ ಎಫ್ ಐ ಆರ್ ದಾಖಲಾಗಿದೆ.
ಹನೂರು ಪಟ್ಟಣ ಪಂಚಾಯ್ತಿ ಕಾರ್ಯಾಲಯದ ಮೂಗಿನಡಿಯಲ್ಲೇ ಇರುವ ಸಾರ್ವಜನಿಕ ಶೌಚಾಲಯದ ಗುಂಡಿಯಲ್ಲಿ ತುಂಬಿದ್ದ ಮಲವನ್ನು ಜೆಸಿಬಿಯಿಂದ ಹೊರ ತೆಗೆದು ಟ್ರಾಕ್ಟರ್ ಗೆ ತುಂಬಿ ನಾಲ್ಕಾರು ಲೋಡು ಸಾಗಿಸುವ ಸಂದರ್ಭದಲ್ಲಿ ಮಲ ಸೋರಿಕೆಯಾಗಿ ರಸ್ತೆಯ ಅಲ್ಲಲ್ಲಿ ರಾಶಿ ರಾಶಿಯಾಗಿ ಚೆಲ್ಲಿತ್ತು. ಇದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಇತ್ತು.
ಬಳಿಕ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ರಸ್ತೆಯಲ್ಲಿ ಚೆಲ್ಲಿಹೋಗಿದ್ದ ಶೌಚಾಲಯದ ಮಲವನ್ನು ಪೌರ ಕಾರ್ಮಿಕರ ಮೂಲಕ ಪ್ಲಾಸ್ಟಿಕ್ ಬಾಂಡಲಿಗೆ ತುಂಬಿಸಿ ತಲೆಯ ಮೇಲೆ ಹೊತ್ತು ಕಸದ ಟೆಂಪೆÇೀಗೆ ತುಂಬುತ್ತಿದ್ದ ದೃಶ್ಯಾವಳಿಗಳ ಪೆÇೀಟೋ ವಿಡಿಯೋಗಳು ವೈರಲ್ ಆಗಿದ್ದು ಸಾರ್ವಜನಿಕರ ಮೊಬೈಲ್ ಗಳಲ್ಲಿ ಹರಿದಾಡುವುದರ ಜತೆಗೆ ಮಾಧ್ಯಮದವರಿಗೂ ಹಂಚಿಕೆಯಾಗಿತ್ತು.
ಈ ಸುದ್ದಿ ಹಠಾತ್ತನೆ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಗಮನಿಸಿದ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಘಟನಾ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ನೋಡಲ್ ಅಧಿಕಾರಿ ಜನಾರ್ದನ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಬಿ, ಹನೂರು ತಹಶಿಲ್ದಾರರ್ ವೈ.ಕೆ ಗುರುಪ್ರಸಾದ್ ಆಗಮಿಸಿ, ಇಂಜಿನಿಯರ್ ತನುಜ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶ್ರೀಧರ್ ಹಾಗೂ ಪೌರ ಕಾರ್ಮಿಕರಿಂದ ಮಾಹಿತಿ ಪಡೆದುಕೊಂಡರು.ಪ್ರಕರಣದ ಬಗ್ಗೆ ಸರ್ಕಾರಕ್ಕೆ ಎರಡು ದಿನಗಳಲ್ಲಿ ಸಮಗ್ರ ಮಾಹಿತಿ ನೀಡುವ ಸಲುವಾಗಿ ಅಧಿಕಾರಿ ಗಳ ತಂಡ ಘಟನೆಯ ಬಗ್ಗೆ ವರದಿ ಸಿದ್ದಪಡಿಸುತ್ತಿದೆ.