ಪೋಸ್ಟ್‍ರ್ ಮೇಕಿಂಗ್ ರಾಜ್ಯಕ್ಕೆ ದ್ವಿತೀಯ: ಎಕ್ಸಲಂಟ್ ಕಾಲೇಜಿನ ವಿದ್ಯಾರ್ಥಿನಿಯ ಸಾಧನೆ

ವಿಜಯಪುರ,ಫೆ.17:ಬಳ್ಳಾರಿಯ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿ ಜರುಗಿದ 2023-24 ನೇ ಸಾಲಿನ ರಾಜ್ಯಮಟ್ಟದ “ಯುವಜನೋತ್ಸವ” ಸ್ಪರ್ಧೆಯಲ್ಲಿ ವಿಜಯಪುರ ನಗರದ ಎಕ್ಸಲಂಟ್ ಪ.ಪೂ. ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಶೀಫಾ ಜಮಾದಾರ ಪೋಸ್ಟ್‍ರ್ ಮೇಕಿಂಗ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಕೌಲಗಿ ಅವರು ಮಾತನಾಡಿ, ವಿದ್ಯಾರ್ಥಿಗಳು ಓದಿನೊಂದಿಗೆ ಕಲೆ, ಸಾಹಿತ್ಯ, ಕ್ರೀಡೆ ಮುಂತಾz Àಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿರಬೇಕು. ಪೋಸ್ಟ್‍ರ್ ಮೇಕಿಂಗ್ ಕಲೆ ಅಷ್ಟು ಸುಲಭವಾಗಿ ಒಲಿಯಲಾರದು. ಯಾಕೆಂದರೆ ಕೊಡ ಮಾಡಿರುವ ವಿಷಯಕ್ಕೆ ಅನುಗುಣವಾಗಿ ಚಿತ್ರ ಬಿಡಿಸಿ ಸನ್ನಿವೇಶ ಕಟ್ಟಿಕೊಡುವುದು ಕಷ್ಟ ಸಾಧ್ಯ. ಅಂಥಹ ಕಲೆಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿನಿ ಶೀಫಾ ಜಮಾದಾರ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದದ್ದು ನಮ್ಮಲ್ಲರಿಗೆ ಸಂತಸ ತಂದಿದೆ. ಮುಂದೆ ರಾಷ್ಟ್ರ ಮಟ್ಟದಲ್ಲಿಯೂ ಮಿಂಚಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್. ಹಾಗೂ ಆಡಳಿತಾಧಿಕಾರಿ ಪರಶುರಾಮ ಭಾವಿಕಟ್ಟಿ ಮತ್ತು ಬೊಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.