ಪೋಸ್ಕೋ ಕಾಯ್ದೆ: ಬಾಂಬೆ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ


Warning: preg_split(): Compilation failed: unmatched closing parenthesis at offset 115 in /home/customer/www/sanjevani.com/public_html/wp-includes/formatting.php on line 612

Warning: count(): Parameter must be an array or an object that implements Countable in /home/customer/www/sanjevani.com/public_html/wp-includes/formatting.php on line 765

ನವದೆಹಲಿ, ಜ.೨೭- ಅಪ್ರಾಪ್ತ ಬಾಲಕಿಯ ಎದೆ ಭಾಗ ಮುಟ್ಟಿದ ಮಾತ್ರಕ್ಕೆ ಅಂತಹ ಪ್ರಕರಣವನ್ನು ಪೋಸ್ಕೋ ಕಾಯ್ದೆ ಯಡಿ ದಾಖಲು ಮಾಡಲು ಬರುವುದಿಲ್ಲ ಎನ್ನುವ ಬಾಂಬೆ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ.

ಲೈಂಗಿಕ ದೌರ್ಜನ್ಯ ನಡೆಸುವ ಉದ್ದೇಶದಿಂದ ಅಪ್ರಾಪ್ತ ಬಾಲಕಿಯ ಎದೆಯ ಭಾಗ ಸೇರಿದಂತೆ ವಿವಿಧ ಅಂಗಾಂಗಗಳ ಮುಟ್ಟಿದರೆ ಅಥವಾ ಬಟ್ಟೆ ಬಿಚ್ಚಿದರೆ ಅದು ಪೋಸ್ಕೋ ಕಾಯ್ದೆಯಡಿ ದೂರು ದಾಖಲಿಸಿಕೊಳಬಹುದು ಆದರೆ ಅದನ್ನು ಹೊರತು ಪಡಿಸಿ ಕೇವಲ ಎದೆ ಬಾಗ ಮುಟ್ಟಿದರೆ ಅದನ್ನು ಈ ಕಾಯ್ದೆಯಡಿ ದೂರು ದಾಖಲು ಸಾದ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ನಾಗ್ಪುರ ಪೀಠದ ನ್ಯಾಯದೀಶೆ ಪುಷ್ಪ ಗಣೇದಿವಾಲ ಇತ್ತೀಚೆಗಷ್ಟೆ ತೀರ್ಪು ನೀಡಿದ್ದರು

ಈ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿ ಅಪ್ರಾಪ್ತ ಬಾಲಕಿಯ ಎದೆ ಭಾಗ ಮುಟ್ಟಿದರೂ ಅದನ್ನ ಅದನ್ನು ಪೋಸ್ಕೋ ಕಾಯಿದೆ ಅಡಿ ದೂರು ದಾಖಲಿಸಲು ಅನುವು ಮಾಡಿಕೊಡುವಂತೆ ಅರ್ಜಿ ಸಲ್ಲಿಸಲಾಗಿತ್ತು.

ಈ ಸಂಬಂಧ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ನ್ಯಾಯಪೀಠ, ಬಾಂಬೆ ಹೈಕೋರ್ಟ್ ನ ನಾಗಪುರ ಪೀಠ ನೀಡಿದ್ದ ಆದೇಶಕ್ಕೆ ತಡೆ ನೀಡಿದೆ.

ಅರ್ಜಿದಾರರ ಪರ ವಾದ ಮಂಡಿಸಿದ್ದ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಅವರು ದೈಹಿಕ ಸಂಪರ್ಕ ಅಷ್ಟೇ ಅಲ್ಲ ದೇಹದ ಅಂಗಗಳನ್ನು ಮುಟ್ಟಿದರೂ ಕೂಡ. ಅದು ಪೋಸ್ಕೋ ಕಾಯ್ದೆಯಡಿ ದೂರು ದಾಖಲು ಮಾಡಿಕೊಳ್ಳಬಹುದುಮ ಈ ಸಂಬಂಧ ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪನ್ನು ವಜಾ ಮಾಡುವಂತೆ ಅವರು ಸುಪ್ರೀಂಕೋರ್ಟ್ ಗಮನಕ್ಕೆ ತಂದಿದ್ದರು.

೩೯ ವರ್ಷದ ವ್ಯಕ್ತಿಯೊಬ್ಬ ೧೨ ವರ್ಷದ ಬಾಲಕಿಗೆ ಎದೆ ಭಾಗ ಮುಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಪುರ ಹೈಕೋರ್ಟ್ ಪೀಠ , ಕೇವಲ ಎದೆಭಾಗ ಮುಟ್ಟಿದರೆ ಅದು ಪೋಸ್ಕೋ ಕಾಯ್ದೆ ಯಡಿ ದಾಖಲು ಅಸಾದ್ಯ ಎಂದು ಹೇಳಿತ್ತು.

ಭಾರತೀಯ ಅಪರಾಧ ದಂಡ ಸಂಹಿತೆ ಕಲಂ ೩೫೪ ರ ಪ್ರಕಾರ ಪೋಸ್ಕೋ ಕಾಯ್ದೆ ಅಡಿ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಕನಿಷ್ಠ ಒಂದು ವರ್ಷದಿಂದ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಅವಕಾಶ ಕಲ್ಪಿಸಲಾಗಿದೆ

ಲೈಂಗಿಕ ಕ್ರಿಯೆ ಅಥವಾ ಲೈಂಗಿಕ ದೌರ್ಜನ್ಯ ನಡೆಸಿರುವುದು ಸಾಬೀತಾದರೆ ಈ ಪ್ರಕರಣದಲ್ಲಿ ದೂರು ದಾಖಲಿಸಿಕೊಂಡು ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಅವಕಾಶವನ್ನು ಕಲ್ಪಿಸಲಾಗಿದೆ