ಪೋಷಣ ಪಕ್ವಾಡ್ ಅಭಿಯಾನ ಜಾಗೃತಿ ಜಾಥಾ

ಸಿರುಗುಪ್ಪ ಮಾ 28 : ತಾಲೂಕಿನ ರಾರಾವಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ದಿ ಯೋಜನೆ ಇವರ ಸಹಯೋಗದಲ್ಲಿ ರಾರಾವಿ, ಶಾಲಿಗನೂರು, ಬಂಡ್ರಾಳ್ ಕ್ಯಾಂಪನ್ ಅಂಗನವಾಡಿ ಕಾರ್ಯಕರ್ತೆಯರಿಂದ ಪೋಷಣ ಪಕ್ವಾಡ್ ಅಭಿಯಾನ ಜಾಗೃತಿ ಜಾಥಾ ನಡೆಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ದಿ ಯೋಜನೆಯ ಹಿರಿಯ ಮೇಲ್ವಿಚಾರಕಿ ಮುನ್ನಿಕರುಣ ಮಾತನಾಡಿ ಅಪೌಷ್ಠಿಕತೆಯ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ, ಚಿಕ್ಕ ಮಕ್ಕಳಿಗೆ, ಪೋಷಕರಿಗೆ ಪೌಷ್ಠಿಕ ಆಹಾರದ ಕುರಿತು ಜಾಗೃತಿ ಮೂಡಿಸಲಾಗುವುದು.
ಪೋಷಣ ಪಕ್ವಾಡ ಉದ್ದೇಶವು ಅಂಗನವಾಡಿ ಕೇಂದ್ರಗಳ ಮುಂದೆ, ಶಾಲೆಗಳ ಮೈದಾನದಲ್ಲಿ ಔಷಧಿಯುಕ್ತ ಸಸಿಗಳು ನಾಟಿ, ಕೈತೋಟ ನಿರ್ಮಿಸುವುದು, ಯೋಗ, ಧ್ಯಾನ ಸೇರಿದಂತೆ ಸಮಗ್ರ ಮಾಹಿತಿಯನ್ನು ನೀಡಿ ಅವರನ್ನು ಜಾಗೃತಿ ಮೂಡಿಸುವುದು ಎಂದು ತಿಳಿಸಿದರು.