ಪೋಷಣ್ ಪೋಷಣ್ ರಥಕ್ಕೆ ಚಾಲನೆ

ಹೊಸಪೇಟೆ ಮಾ 31 :: ರಾಷ್ಟ್ರೀಯ ಪೋಷಣ್ ಅಭಿಯಾನದಡಿ ಮಾ.16 ರಿಂದ 31 ರವರೆಗೆ ಪೋಷಣ್ ಪಕ್ವಾಡ ಜನಾಂದೋಲನ ಕಾರ್ಯಕ್ರಮದ ಅಂಗವಾಗಿ ನಗರದ ರಾಣಿಪೇಟೆಯ 6ನೇ ವಾರ್ಡ್‍ನ 4ನೇ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ರಥಕ್ಕೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಸಿಂಧು ಯಲಿಗಾರ್ ಅವರು ನಿನ್ನೆ ಚಾಲನೆ ನೀಡಿದರು.ಪೋಷಣ್ ರಥವು ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಇಲಾಖೆಯ ಸವಲತ್ತು ಹಾಗೂ ಅಪೌಷ್ಠಿಕತೆಯ ಕುರಿತು ಅರಿವು ಮೂಡಿಸಲಾಯಿತು.