ಪೋಷಣ್ ಅಭಿಯಾನಕ್ಕೆ ಚಾಲನೆ

ಸಿರವಾರ.ಡಿ.೧-ದಿನಕ್ಕೊಂದು ಮೊಟೆ ತುಂಬುವುದು ಹೊಟ್ಟೆ ಎಂಬ ನಾಣ್ನುಡಿಯಂತೆ ವಿದ್ಯಾರ್ಥೀಗಳು ಮೊಟ್ಟೆ, ಬಾಳೆಹಣ್ಣು ಸೇವನೆ ಮಾಡುವ ಮೂಲಕ ಅಪೌಷ್ಠಿಕತೆಯನ್ನು ಹೋಗಲಾಡಿಸುವಲ್ಲಿ ಸಹಕರಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಿರವಾರ ತಾಲೂಕ ಅದ್ಯಕ್ಷ ಮಲ್ಲೇಶಪ್ಪ ಹೇಳಿದರು.
ತಾಲೂಕಿನ ಕಲ್ಲೂರು ವಲಯದ ಕಲ್ಲೂರಿನ ಸಿಹಿ ನೀರು ಬಾವಿ ಶಾಲೆಯಲ್ಲಿ ಪ್ರಧಾನಮಂತ್ರಿ ಶಕ್ತಿ ನಿರ್ಮಾಣ ಪೋಷನ್ ಅಭಿಯಾನದ ಮಧ್ಯಾಹ್ನ ಉಪಹಾರ ಯೋಜನೆಯ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ ವಿತರಿಸುವ ವಿನೂತನ ಕಾರ್ಯಕ್ರಮದ ಚಾಲನೆಯನ್ನು ನೀಡಿ ಮಾತನಾಡಿ ಮಕ್ಕಳಿಗೆ ಬಹು ಪೋಷಕಾಂಶಗಳನ್ನು ಒದಗಿಸುವಲ್ಲಿ ಹಾಗೂ ಅಪೌಷ್ಠಿಕತೆಯ ರಕ್ತಹೀನತೆಯನ್ನು ತೊಲಗಿಸಲು ಕೇಂದ್ರ ಸರ್ಕಾರ ಸಿದ್ಧಪಡಿಸಿದ ಯೋಜನೆಯು ಬಹಳ ಉಪಯುಕ್ತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದರಿಂದ ಶಾಲಾ ಮಕ್ಕಳ ಹಾಜರಾತಿಗೆ ಸಹ ಹೆಚ್ಚಾಗುತ್ತದೆ ಎಂದರು. ಸಮೂಹ ಸಂಪನ್ಮೂಲ ವ್ಯಕ್ತಿಯಾದ ಪ್ರಶಾಂತ ರವರು ಸಹ ಯೋಜನೆಯ ಫಲಾನುಭವಿಗಳು ಸದುಪಯೋಗಪಡಿಸಿಕೊಂಡು ಯೋಜನೆಯನ್ನು ಯಶಸ್ವಿಗೊಳಿಸುವುದು. ಮಕ್ಕಳಿಗೆ ಬಿಸಿಯೂಟ ನೀಡುವ ಸಂದರ್ಭದಲ್ಲಿ ಮೊಟ್ಟೆ ನೀಡಲು ತಿಳಿಸಿದರು. ಶಾಲಾ ಮುಖ್ಯಗುರುಗಳಾದ ಹನುಮಂತಪ್ಪ ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಶಿವಕುಮಾರ್ ಸರ್ ಇವರು ಮಕ್ಕಳಿಗೆ ಈ ವಿನೂತನ ಯೋಜನೆ ನಿಜಕ್ಕೂ ತುಂಬಾ ಉಪಯುಕ್ತ ಎಂದು ವೈಜ್ಞಾನಿಕವಾಗಿ ಇದರ ಸದುಪಯೋಗವನ್ನು ಮಕ್ಕಳಿಗೆ ಸವಿವರವಾಗಿ ತಿಳಿಸಿ ಚಾಲನೆ ನೀಡಲು ಸಹಕರಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಹಾಗೂ ಮಾಜಿ ಸೈನಿಕರಾದ ವೆಂಕಣ್ಣ ವಿ ಹಾಗೂ ಸಹ ಶಿಕ್ಷಕಿಯಾದ ಪದ್ಮಾವತಿ ಇವರು ಹಾಗೂ ಎಸ್ಡಿಎಂಸಿ ಅಧ್ಯಕ್ಷರಾದ ರವಿ ಉಪಸ್ಥಿತರಿದ್ದರು.