ಪೋಷಣಾ ಮಾಸಾಚರಣೆ ಗರ್ಭಿಣಿಯರಿಗೆ ಸೀಮಂತ

(ಸಂಜೆವಾಣಿ ವಾರ್ತೆ)
ಸುರಪುರ: ಸೆ.22:ತಾಲ್ಲೂಕಿನ ದೇವತ್ಕಲ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೆÇೀಷಣಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸೀಮಂತ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಾಲ್ಕು ಜನ ಗರ್ಭಿಣಿಯರಿಗೆ ಮಹಿಳಾ ಅಧಿಕಾರಿಗಳು ಸಾಂಪ್ರದಾಯಿಕವಾಗಿ ಹರಿಸಿಣ ಕುಂಕುಮ ಹಚ್ಚಿ, ಬಳೆ, ಹೂವು ಮೂಡಿಸಿ, ಹಣ್ಣು, ದವಸ ಧಾನ್ಯಗಳಿಂದ ಉಡಿತುಂಬಿ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಧಿಕಾರಿ ಲಾಲಸಾಬ್ ಫೀರಾಪೂರ ಮಾತನಾಡಿ ಗರ್ಭಿಣಿಯರು, ಬಾಣಂತಿಯರು, ಕಡಿಮೆ ತೂಕದ ಶಿಶು, ರಕ್ತಹೀನತೆ, ಬೆಳವಣಿಗೆ ಕುಂಠಿತ, ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ಉತ್ತಮ ಪೌಷ್ಟಿಕಾಂಶ ಆಹಾರ ನೀಡಬೇಕು. ಮಹಿಳೆಯರು ಮತ್ತು ಗರ್ಭಿಣಿಯರ ಅನುಕೂಲಕ್ಕಾಗಿ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಶಿಶುಗಳು ಮತ್ತು ಗರ್ಭಿಣಿಯರು ಅಪೌಷ್ಟಿಕತೆಯಿಂದ ಬಳಲಬಾರದು. ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಇನ್ನೂ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ರೇಣುಕಾ ಎಂ ಮಾತನಾಡಿ ಆರೋಗ್ಯ ಸಮಸ್ಯೆಯಿಂದ ಯಾವುದೇ ಗರ್ಭಿಣಿ ಮಹಿಳೆ, ತಾಯಿ ಮತ್ತು ಮಗುವಿಗೆ ತೊಂದರೆಯಾಗದಂತೆ ಇಲಾಖೆ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಮಾತೃಪೂರ್ಣಾ ಯೋಜನೆಯಡಿ ಅಂಗನವಾಡಿ ಕೇಂದ್ರದಲ್ಲಿ ವಿತರಿಸುವ ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಗರ್ಭಿಣಿ ಮಹಿಳೆಯರು ಹೆಚ್ಚಾಗಿ ತರಕಾರಿಗಳನ್ನು ಉಪಯೋಗಿಸಬೇಕು. ಉತ್ತಮ ಪೌಷ್ಟಿಕಾಂಶಗಳಿಂದ ಕೂಡಿದ ಪದಾರ್ಥಗಳನ್ನು ಸೇವಿಸಬೇಕು. ಆರು ತಿಂಗಳು ತುಂಬಿದ ಮಕ್ಕಳಿಗೆ ಅಂಗನವಾಡಿ ಕೇಂದ್ರದಲ್ಲಿ ನೀಡುವ ಪೌಷ್ಟಿಕ ಆಹಾರ ನೀಡುವಂತೆ ತಿಳಿಸಿದರು. ಇನ್ನೂ ಖನಿಜಾಂಶ ಹೊಂದಿರುವ ತರಕಾರಿ, ಮೊಳಕೆ ಕಾಳುಗಳು ಸೇವಿಸುವುದರ ಮೂಲಕ ಆರೋಗ್ಯಯುತವಾಗಿರಬೇಕು ಗರ್ಭಿಣಿ ಮಹಿಳೆ ಆರೋಗ್ಯಯುತವಾಗಿದ್ದರೆ ಮುಂದೆ ಜನಿಸುವ ಮಗು ಆರೋಗ್ಯಯುತವಾಗಿರುತ್ತದೆ ಎಂದು ತಿಳಿಸಿದರು.
ಇನ್ನೂ ಕಾರ್ಯಕ್ರಮದಲ್ಲಿ ಕಿಶೋರಿಯರಿಗೆ ಅರಿವು ಮೂಡಿಸಲಾಯಿತು, ಹದಿಹರೆಯದ ಹೆಣ್ಣುಮಕ್ಕಳಿಗೆ ದೈಹಿಕ, ಮಾನಸಿಕ ಬದಲಾವಣೆ, ವೈಯಕ್ತಿಕ ಸ್ವಚ್ಛತೆ, ವ್ಯಕ್ತಿತ್ವ ಬೆಳವಣಿಗೆ, ಅವಧಿಯಲ್ಲಾಗುವ ಬದಲಾವಣೆ ಮತ್ತು ತೊಂದರೆಗಳು ನಿವಾರಿಸಿಕೊಳ್ಳುವ ಬಗೆ ಮತ್ತು ಸ್ವಚ್ಛತೆ ಕುರಿತು ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತ ಅಧ್ಯಕ್ಷರಾದ ನಾಗಮ್ಮ ತಳವಾರ, ಧರ್ಮಗೌಡ, ಸುಮತಿ, ವಿರುಪಾಕ್ಷಮ್ಮ, ಚಂದ್ರಶೇಖರ್, ಆಶಾಬಾನು, ಪ್ರಕಾಶಗೌಡ, ಮೌನೇಶ ಕೊಡೇಸೂರ, ಶ್ರೀನಾಥ ಹೂಗಾರ, ಸುರೇಶ್ ಪತ್ತಾರ, ಶ್ರವಣಕುಮಾರ, ಸಂಗಮ್ಮ ಇದ್ದರು. ಸಾವಿತ್ರಿ ಗಾಳಿ ನಿರುಪಿಸಿದರು, ರೇಣುಕಾ ಸ್ವಾಗತಿಸಿದರು, ಮಲ್ಲಮ್ಮ ವಂದಿಸಿದರು.
ಅಂಗನವಾಡಿ , ಆಶಾ ಕಾರ್ಯಕರ್ತೆಯರು ಇದ್ದರು.