ಪೋಷಕಾಂಶ ಭರಿತ ನುಗ್ಗೆಕಾಯಿ

ಕ್ಷಿಣ ಭಾರತದ ಅಡುಗೆಯಲ್ಲಿ ನುಗ್ಗೆಕಾಯಿ ವಿಶೇಷ ಸ್ಥಾನ ಪಡೆದುಕೊಂಡಿದೆ. ನುಗ್ಗೆಕಾಯಿಯನ್ನು ಸಾಂಬಾರಿಲ್ಲಿ ಬಳಸಲಾಗುತ್ತದೆ. ನುಗ್ಗೆಕಾಯಿ ಸೊಪ್ಪನ್ನು ಪಲ್ಯವಾಗಿ ಬಳಸಲಾಗುತ್ತದೆ. ಕಾಯಿ ಅಲ್ಲದೇ, ಹೂ, ಎಲೆಗಳು ಮತ್ತು ಬೀಜಗಳು ತಿನ್ನಲು ಯೋಗ್ಯವಾಗಿದ್ದು, ಇದು ಸಾಕಷ್ಟು ಔಷಧೀಯ ಅಂಶಗಳನ್ನುಒಳಗೊಂಡಿದೆ.
ನುಗ್ಗೆಕಾಯಿಯಲ್ಲಿ ಬೀಟಾಕ್ಯಾರೋಟಿನ್ ಇತರ ಹಣ್ಣು ತರಕಾರಿಗಳಿಗಿಂತಲೂ ಯೋಗ್ಯವಾಗಿದೆ. ನುಗ್ಗೆ ಸೊಪ್ಪಿನಲ್ಲಿ ಸಿ ಜೀವಸತ್ವ ಹೆಚ್ಚಾಗಿದೆ. ಹಾಗೆಯೇ ಕ್ಯಾಲ್ಸಿಯಂ ಕೂಡಾ ನುಗ್ಗೆಕಾಯಿಯಲ್ಲಿ ಹೆಚ್ಚಾಗಿದೆ. ಪೋಷಕಾಂಶ ಭರಿತವಾದ ನುಗ್ಗೆ ಸೊಪ್ಪು. ಎಲ್ಲಾ ಕಾಲದಿಂದಲೂ ನಿರಂತರವಾಗಿ ದೊರೆಯುವ ತರಕಾರಿಯಾಗಿದೆ. ಅನೇಕ ಸಮಸ್ಯೆಗಳಿಗೆ ರಾಮಬಾಣವಾಗಬಲ್ಲದ್ದು, ದೃಷ್ಟಿ, ರಕ್ತ, ಮೂಳೆ , ಚರ್ಮದ ಆರೋಗ್ಯಕ್ಕೆ ಸಹಾಯವಾಗಿದೆ.
ಮೂಳೆಗೆ ಬಲ : ನುಗ್ಗೆಕಾಯಿ ಸಂಧಿವಾತವನ್ನು ದೂರವಿಟ್ಟು ಮೂಳೆಗಳನ್ನು ಬಲಪಡಿಸುತ್ತದೆ. ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶವು ಅತಿ ಮುಖ್ಯವಾಗಿ ಬೇಕಾಗಿರುವುದು. ನುಗ್ಗೆಕಾಯಿಯನ್ನು ನಿಯಮಿತವಾಗಿ ಸೇವನೆ ಮಾಡಿದರೆ ಮೂಳೆಗಳ ಆರೋಗ್ಯವು ಉತ್ತಮವಾಗುತ್ತದೆ.
ಶ್ವಾಸಕೋಶ ಸಮಸ್ಯೆ ನಿವಾರಣೆ: ನುಗ್ಗೆಕಾಯಿಯನ್ನು ಬೇಯಿಸಿದ ನೀರಿನ ಹಬೆಯನ್ನು ತೆಗೆದುಕೊಂಡರೆ ಆಗ ಶ್ವಾಸಕೋಶ ಸಮಸ್ಯೆ ನಿವಾರಣೆಯಾಗುತ್ತದೆ. ಶ್ವಾಸಕೋಶದ ಸಮಸ್ಯೆಗಳನ್ನು ನಿವಾರಣೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಬಂಜೆತನ ನಿವಾರಣೆ ಮಾಡುವಲ್ಲಿ ನುಗ್ಗೆಕಾಯಿ ಮಹತ್ವದ ಪಾತ್ರ ವಹಿಸುತ್ತದೆ.
ರಕ್ತದೊತ್ತಡ ಕಡಿಮೆ: ನುಗ್ಗೆಕಾಯಿ ರಕ್ತದತ್ತಡವನ್ನು ಕಡಿಮೆ ಮಾಡುತ್ತದೆ. ನುಗ್ಗೆಕಾಯಿಯಲ್ಲಿ ಕೆಲವೊಂದು ಪೋಷಕಾಂಶಗಳಿದ್ದು, ನಿಮಮಿತವಾಗಿ ಸೇವನೆ ಮಾಡಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯ ಸುಧಾರಿಸುತ್ತದೆ. ರಕ್ತವನ್ನು ದಪ್ಪವಾಗಿಸುವ ಮತ್ತು ಹೃದಯದ ಕಾರ್ಯವು ಸೂಕ್ತವಾಗಿ ಇರುವಂತೆ ನೋಡಿಕೊಳ್ಳುತ್ತದೆ.
ಜೀರ್ಣಕ್ರಿಯೆ ನಿವಾರಣೆ: ಜೀರ್ಣಕ್ರಿಯೆ ಸಮಸ್ಯೆಗೆ ನುಗ್ಗೆಕಾಯಿಯ ತುಂಬಾ ಪರಿಣಾಮಕಾರಿಯಾಗಿದೆ. ಒಂದು ಚಮಚ ನುಗ್ಗೆಕಾಯಿ ಎಲೆಯ ಜ್ಯೂಸ್ ನ್ನು ತುಪ್ಪದ ಜತೆಗೆ ಬೆರೆಸಿಕೊಂಡು ಅದನ್ನು ಎಳೆನೀರಿಗೆ ಹಾಕಿಕೊಂಡು ಕುಡಿದರೆ ಅತಿಸಾರ, ಕೊಲೈಟಿಸ್ ಮತ್ತು ಕಾಮಾಲೆ ರೋಗ ಕಡಿಮೆ ಆಗುತ್ತದೆ.
ಜ್ವರದ ವಿರುದ್ಧ ಹೋರಾಡಲು ನುಗ್ಗೆಕಾಯಿ ನೆರವಾಗಬಲ್ಲದ್ದು ಶೀತ, ಜ್ವರ, ಗಂಟಲು ನೋವಿನ ಸಮಸ್ಯೆ ನಿವಾರಣೆ ಆಗುವುದು. ನುಗ್ಗೆಕಾಯಿ ಸೂಪ್ ಮಾಡಿಕೊಂಡು ಕುಡಿದರೆ, ಈ ಎಲ್ಲಾ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದು. ನುಗ್ಗೆಕಾಯಿಯಲ್ಲಿ ಚಿಕಿತ್ಸಿಕ ಗುಣವಿದ್ದು, ಇದು ಅಸ್ತಮಾ, ಉಬ್ಬರ ಹಾಗೂ ಶ್ವಾಸಕೋಶದ ಇತರ ಕೆಲವೊಂದು ಸಮಸ್ಯೆಗಳನ್ನು ನಿವಾರಣೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ನುಗ್ಗೆಕಾಯಿಯ ಪಲ್ಯವನ್ನು ಮಾಡಿ ಸೇವಿಸಿದರೆ, ತ್ವರಿತವಾಗಿ ಹೆಚ್ಚು ಪೌಷ್ಟಿಕಾಂಶವನ್ನು ಪಡೆಯಲು ಸಾಧ್ಯ.. ನುಗ್ಗೆ ಗಿಡದ ಬೇರನ್ನು ಅಸ್ತಮಾ,ಹೊಟ್ಟೆಯ ತೊಂದರೆ, ಆ್ಯಸಿಡಿಟಿ, ಮೊದಲಾದ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ನುಗ್ಗೆಕಾಯಿಯ ಸೊಪ್ಪನ ನಿಯಮಿತವಾಗಿ ಬಳಕೆಯಿಂದ ರಕ್ತ ಶುದ್ಧಿಯಾಗುವುದರೊಂದಿಗೆ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗಿ ದೌರ್ಬಲ್ಯ ಸಮಸ್ಯೆ ದೂರವಾಗುತ್ತದೆ. ನುಗ್ಗೆಯಲ್ಲಿರುವ ವಿಟಮಿನ್ ಮತ್ತು ವಿಟಮಿನ್ ಸಿ ಮೆದುಳಿನ ಜೀವಕೋಶದ ಸವೆತವನ್ನು ತಡೆದು ನೆನಪಿನ ಶಕ್ತಿಯನ್ನು ಹೆಚ್ಚಿಸಿ ಮರೆಗುಳಿದಂತಹ ಸಮಸ್ಯೆಯನ್ನು ನಿವಾರಿಸುತ್ತದೆ.ನುಗ್ಗೆಕಾಯಿಯಲ್ಲಿ ಅತಿಹೆಚ್ಚು ನಾರಿನಾಂಶವಿರುವುದರಿಂದ ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.