ಪೋಷಕಾಂಶಯುಕ್ತ ಆಹಾರ ಸೇವಿಸಿ

ಇಂಡಿ:ಮೇ.20:ಗರ್ಭೀಣಿಯರು ಪೋಷಕಾಂಶಯುಕ್ತ ಸಮತೋಲನ ಅಹಾರ ಸೇವಿಸಬೇಕು. ಆರೋಗ್ಯ ಇಲಾಖೆ ವತಿಯಿಂದ ಉಚಿತವಾಗಿ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆ ನೀಡಲಾಗುತ್ತಿದೆ. ಇದರ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿ, ಸದೃಡ ಮಗುವನ್ನು ಪಡೆಯಬೇಕಾದರೆ ಗರ್ಭಾವ್ಯವಸ್ಥೆಯಲ್ಲಿ ಆರೈಕೆ ಉತ್ತಮವಾಗಿರಬೇಕೆಂದು ಡಾ|| ರಾಜೇಶ ಕೋಳೆಕರ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಕೇಂದ್ರ ಸಭಾಂಗಣದಲ್ಲಿ ಗರ್ಭೀಣಿಯರ ಪ್ರಸವ ಪೂರ್ವ ಆರೈಕೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ನವಜಾತ ಶಿಶುವಿನ ರಕ್ಷಣೆ ಜನನದ ನಂತರ ಆರಂಭವಾಗುವದಿಲ್ಲ.ಶಿಶು 9 ತಿಂಗಳಕಾಲ ತಾಯಿಯಿಂದ ಎಲ್ಲಾ ಪೋಷಣೆಯನ್ನು ಪಡೆದುಕೊಳ್ಳುತ್ತ ತಾಯಿ ಗರ್ಭದಲ್ಲಿ ಬೆಳೆಯುತ್ತದೆ. ತಾಯಿ ವಹಿಸುವ ಸಂರಕ್ಷಣೆ ಮಾತ್ರವೆ ಸುರಕ್ಷಿತ ಗರ್ಭಾವ್ಯವಸ್ಥೆಗೆ ದಾರಿ ಯಾಗುತ್ತದೆ ಎಂದು ಹೇಳಿದರು.

ತಾಲೂಕು ಆರೋಗ್ಯ ಅಧಿಕಾರಿ ಅರ್ಚನಾ ಕುಲಕರ್ಣಿ ಮಾತನಾಡಿ ಮಗುವಿನ ಪ್ರಗತಿ ಮತ್ತು ಬೆಳವಣೆಗೆಗೆÀ ಆರಂಭಿಕ ಹಂತದಲ್ಲಿ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಚಿಕಿತ್ಸೆ ನೀಡಲು ಪ್ರತಿಯೊಬ್ಬ ಗರ್ಭೀಣಿ ತಿಂಗಳ ನಿಗದಿತ ತಪಾಸಣೆ ಮಾಡಿಸಿ ಕೊಳ್ಳಬೇಕಾಗಿದೆ ಎಂದು ಹೇಳಿದರು.

ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಜೈಬುನಿಸಾ ಬೀಳಗಿ ಮಾತನಾಡಿ ಮಗು ಜನಿಸಿದ ಒಂದು ಗಂಟೆಯೊಳಗೆ ಎದೆ ಹಾಲು ಕುಡಿಸಬೇಕು. 6 ತಿಂಗಳ ವರೆಗೆ ಎದೆ ಹಾಲು ಮಾತ್ರ ನೀಡಬೇಕು. 6 ತಿಂಗಳ ನಂತರ ಎದೆಹಾಲಿನ ಜತೆಗೆ ಪೂರಕ ಅಹಾರ ನೀಡುವದರಿಂದ ಸದೃಡವಾದ ಮಗುವನ್ನು ಪಡೆಯಲು ಸಾಧ್ಯವೆಂದರು.

ರಾಜ್ಯ ಸಂಯೋಜಕ ಮಹೇಶ ಮಾತನಾಡಿದರು.ಡಾ|| ಪ್ರೀತಿ ಕೋಳೆಕರ, ಡಾ|| ವಿಪುಲ್ ಕೋಳೆಕರ,ಅಧಿಕ್ಷಕ ಬಸವರಾಜ ರಾಹುರ ವೇದಿಕೆ ಮೇಲಿದ್ದರು.

ಸಭೆಯಲ್ಲಿ ಡಾ|| ಸಂತೋಷ ಪವಾರ,ಶುಶ್ರುಕ ಅಧಿಕಾರಿ ವಿಜಯಲಕ್ಷ್ಮೀ ಬಿರಾದಾರ,ನಾಜಿಯಾ ಕಾಖಂಡಕಿ,ವಿಜಯಲಕ್ಷ್ಮೀ ಹಾದಿಮನಿ,ರೇಣುಕಾ ಬಡಿಗೇರ,ಗಿರಿಜಾ ಬಜಂತ್ರಿ,ತಹಸೀನಾ ಮೋಮಿನ,ಕಾಮಣ್ಣ ದಶವಂತ,ರವಿ ಹಾದಿಮನಿ,ಮೇಘಾ ಪೊದ್ದಾರೆ,ವಿಜಯಕುಮಾರ ಪೋಳ,ಮಂಜುನಾಥ ಮಠ ಮತ್ತಿತರಿದ್ದರು.