ಪೋಷಕರ ಮನದಾಸೆಯನ್ನು ಪೂರೈಸುವಂತೆ ವಿದ್ಯಾರ್ಥಿಗಳಿಗೆ ಕರೆ

ಮಾನ್ವಿ,ಅ.೧೬- ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಅತ್ಯುತ್ತಮ ಸ್ಥಾನವನ್ನು ಪಡೆಯುವುದರ ಮೂಲಕ ಪೋಷಕರ ಮಕ್ಕಳ ಮೇಲಿಟ್ಟಿರುವ ನಂಬಿಕೆಯನ್ನು ಹಾಗೂ ಅವರ ಮನದಾಸೆಯನ್ನು ಪೂರೈಸುವುದಕ್ಕಾದರೂ ನೀವು ಜವಾಬ್ದಾರಿಯಿಂದ ಓದಬೇಕು ಇದರಿಂದ ನಿಮ್ಮ ಜೀವನವು ಕೂಡ ಉನ್ನತಿಯಾಗುತ್ತದೆ ಎಂದು ಉಪನ್ಯಾಸಕ ಡಾ ಬಸವರಾಜ ಕರಡಿಗುಡ್ಡ ಹೇಳಿದರು.
ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಪದವಿ ಅಂತಿಮ ವಿದ್ಯಾರ್ಥಿಗಳ ಬೀಳ್ಕೋಡಿಗೆ ಸಮಾರಂಭದಲ್ಲಿ ಮಾತಾನಾಡಿದ ಅವರು ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಹಿರಿಯರ ಆದರ್ಶಗಳು ಪಾಲಿಸುವುದರ ಜೊತೆಗೆ ಗೌರವಿಸಬೇಕು ಹಾಗೂ ಓದಿನ ಕಡೆಗೆ ಆಸಕ್ತಿ ಮಾತ್ರವಲ್ಲದೆ ನಿತ್ಯನಿರಂತರ ಸತತ ಪ್ರಯತ್ನವಿದ್ದಾಗ ಮಾತ್ರ ಶೈಕ್ಷಣಿಕವಾಗಿ ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ನಂತರ ಉಪನ್ಯಾಸಕ ರಮೇಶ ಬಾಬು ಯಾಳಗಿ, ರೈತಸಂಘದ ಅಧ್ಯಕ್ಷೆ ಅನಿತಾ ಬಸವರಾಜ, ಮಾತನಾಡಿ ಸರ್ಕಾರಿ ವಸತಿ ನಿಲಯಗಳಲ್ಲಿರುವ ಸರಿಸುಮಾರು ಎಲ್ಲರೂ ರೈತರ ಮಕ್ಕಳಾಗಿರುತ್ತಾರೆ ಅತ್ತ ಪಾಲಕರು ಹಗಲುರಾತ್ರಿ ಕಷ್ಟಪಟ್ಟು ದುಡಿದು ನಿಮ್ಮ ಭವಿಷ್ಯದ ಕುರಿತು ಯೋಚನೆಯಲ್ಲಿರುತ್ತಾರೆ ಅವರ ಆಸೆಯನ್ನು ಗುರಿ ತಲುಪಿಸುವ ಶಕ್ತಿ ಮತ್ತು ಯುಕ್ತಿ ನಿಮ್ಮಲಿರುತ್ತದೆ ಎಂದು ಮಕ್ಕಳಿಗೆ ಶೈಕ್ಷಣಿಕ ಸಾಧನೆಗೆ ಪ್ರೋತ್ಸಾಹದ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಮೇಲ್ವಿಚಾರಕಿ ಮಂಜುಳಾ, ಹುಚ್ಚಪ್ಪ, ಸುಂದರರಾಜು,ಚನ್ನಪ್ಪ ಸೇರಿದಂತೆ ಸಿಬ್ಬಂದಿಗಳು ವಿದ್ಯಾರ್ಥಿಗಳು ಇದ್ದರು..