ಪೋಷಕರ ಪತ್ತೆಗಾಗಿ ಮನವಿ

ಕೋಲಾರ,ಜ.೫: ಮಾಲೂರು ತಾಲ್ಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದ ತಿಪ್ಪೆಯಲ್ಲಿ ನವಜಾತ ಹೆಣ್ಣು ಶಿಶುವನ್ನು ಅಪರಿಚಿತರು ಬಿಟ್ಟು ಹೋಗಿರುವುದು ಗಮನಿಸಿದ ಸಾರ್ವಜನಿಕರು ಮಗುವನ್ನು ಅಂಗನವಾಡಿ ಕಾರ್ಯಕರ್ತೆ ಹಾಗೂ ಆಶಾ ಕಾರ್ಯಕರ್ತೆ ಅವರಿಗೆ ಮಗುವನ್ನು ಒಪ್ಪಿಸಿ, ಕಾರ್ಯಕರ್ತೆಯವರು ಮಗುವಿನ ಚಿಕಿತ್ಸೆಗಾಗಿ ತೊರಲಕ್ಕಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿರುತ್ತಾರೆ.
ಪೋಷಕರು ಇದ್ದರೆ ಸೂಕ್ತ ದಾಖಲಾತಿಗಳೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಉಪ ನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ೧ನೇ ಮಹಡಿ, ಹಳೇ ಜಿಲ್ಲಾಧಿಕಾರಿಗಳ ಕಛೇರಿ ಆವರಣ, ಕೋಲಾರ-೫೬೩೧೦೧, ದೂ.ಸಂ:೦೮೧೫೨-೨೨೦೧೬೬ ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.