ಚಾರ್ಜರ್ ಸ್ಫೋಟಕ್ಕೆ ೮ ತಿಂಗಳ ಕಂದಮ್ಮ ಬಲಿ

ಕಾರವಾರ, ಅ.೨- ಸ್ವಿಚ್ ಬೋರ್ಡ್ ಹಾಕಲಾಗಿದ್ದ ಮೊಬೈಲ್ ಚಾರ್ಜರ್ ವೈರ್ ಗೆ ಬಾಯಿ ಹಾಕಿ ವಿದ್ಯುತ್ ಸ್ಪರ್ಶಿಸಿ ೮ ತಿಂಗಳ ಮಗು ಸಾವನ್ನಪ್ಪಿದೆ.
ಸಂತೋಷ ಕಲ್ಗುಟಕರ್ ಮತ್ತು ಸಂಜನಾ ಕಲ್ಲುಟೇಕರ್, ಸಿದ್ಧರ ದಂಪತಿಯ ಎಂಟು ತಿಂಗಳ ಪುತ್ರಿ ಸಾನಿಧ್ಯಾ ಕಲ್ಲುಟೇಕರ್ ಮೃತಪಟ್ಟಿದ್ದಾಳೆ.
ಇಂದು ಬೆಳಗ್ಗೆ ಮನೆಯಲ್ಲಿ ಸ್ವಿಚ್ ಬೋರ್ಡ್ ಹಾಕಿದ್ದ ಮೊಬೈಲ್ ಚಾರ್ಜರ್ ಸ್ವಿಚ್ ಆಫ್ ಆಗಿರಲಿಲ್ಲ. ಆದರೆ, ಅದೇ ಸಮಯದಲ್ಲಿ ಮಗು ಚಾರ್ಜಿಂಗ್ ವೈರ್ ಮೇಲೆ ಬಾಯಿ ಹಾಕಿದ್ದು, ವಿದ್ಯುತ್ ಪ್ರವಹಿಸಿ ಮಗು ಸಾವನ್ನಪ್ಪಿದೆ. ತಕ್ಷಣ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆತರಲಾಯಿತಾದರೂ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.
.ವಿಷಯ ಕೇಳಿ ಕುಸಿದು ಬಿದ್ದ ತಂದೆ ಆಸ್ಪತ್ರೆಗೆ ದಾಖಲು: ಹೆಸ್ಕಾಂನಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ ಮಗುವಿನ ತಂದೆ ವಿಷಯ ತಿಳಿದು ಕುಸಿದು ಬಿದ್ದಿದ್ದು, ಕೂಡಲೇ ಸಿದ್ದರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಮಗುವಿನ ಸಾವಿನಿಂದಾಗಿ ಕುಟುಂಬದವರ ದುಃಖ ಆಕ್ರಂದನ ಮುಗಿಲು ಮುಟ್ಟಿದೆ.
ಮೃತ ಮಗುವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ವಾರಸುದಾರರಾಗಿ ಹಸ್ತಾಂತರಿಸಲಾಗಿದೆ.